ಸಿದ್ದಾಪುರ ಮುತ್ತಪ್ಪ ಉತ್ಸವ
ಸಿದ್ದಾಪುರ: ಇತಿಹಾಸ ಪ್ರಸಿದ್ಧ ಸಿದ್ದಾಪುರದ ಶ್ರೀ ಮುತ್ತಪ್ಪ ಭಗವತಿ ದೇವಾಲಯದ ವಾರ್ಷಿಕೋತ್ಸವ ಹಾಗೂ ತೆರೆ ಮಹೋತ್ಸವ ಕಾರ್ಯಕ್ರಮಗಳು ವಿವಿಧ ಪೂಜಾ ಕೈಂಕರ್ಯಗಳೊAದಿಗೆ ಶ್ರದ್ಧಾಭಕ್ತಿಯಿಂದ ನಡೆದವು.
ದೇವಾಲಯದಲ್ಲಿ ಚಂಡಿಕಾಯಾಗ ಹೋಮ, ಅಶ್ಲೇಷ ಬಲಿ, ನಾಗಹೋಮ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. ವಾರ್ಷಿಕೋತ್ಸವ ಅಂಗವಾಗಿ ರಾತ್ರಿ ಮಕ್ಕಳಿಂದ ಸಾಂಸ್ಕöÈತಿಕ ಕಾರ್ಯಕ್ರಮಗಳು ನಡೆಯಿತು. ದೇವಾಲಯದಲ್ಲಿ ವಸೂರಿಮಾಲಾ ದೇವರುಗಳ ನೃತ್ಯ ಆಕರ್ಷಣೀಯವಾಗಿತ್ತು. ಚಂಡೆ ವಾದ್ಯದೊಂದಿಗೆ ಶೋಭಾ ಯಾತ್ರೆ ದೇವಾಲಯದಿಂದ ಕಾವೇರಿ ನದಿಯವರೆಗೆ ತೆರಳಿತು. ಎರಡು ದಿನಗಳ ಕಾಲ ಶ್ರೀ ಮುತ್ತಪ್ಪ ಶ್ರೀ ಶಾಸ್ತಪ್ಪ, ಗುಳಿಗನ ಹಾಗೂ ಭಗವತಿ, ವಿಷ್ಣುಮೂರ್ತಿಗಳ ತೆರೆಗಳು ನಡೆದವು. ವಾರ್ಷಿಕೋತ್ಸವದ ಅಂಗವಾಗಿ ಐದು ದಿನಗಳ ಕಾಲ ಮಧ್ಯಾಹ್ನ ಹಾಗೂ ರಾತ್ರಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಪೂಜಾ ಕಾರ್ಯಕ್ರಮಗಳಲ್ಲಿ ಸಿದ್ದಾಪುರ ಸುತ್ತಮುತ್ತಲಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ದೇವಾಲಯ ಆಡಳಿತ ಮಂಡಳಿಯ ಅಧ್ಯಕ್ಷ ಪ್ರದೀಪ್ ಶೆಟ್ಟಿ ಹಾಗೂ ಪದಾಧಿಕಾರಿಗಳು ಹಾಜರಿದ್ದರು.ಕಣಿವೆ: ಕುಶಾಲನಗರದ ಬೈಚನಹಳ್ಳಿಯ ಗ್ರಾಮದೇವತೆ ಮಾರಮ್ಮ ದೇವರ ವಾರ್ಷಿಕ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಪೂಜೋತ್ಸವದ ಅಂಗವಾಗಿ ದೇವಾಲಯವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಗುಡಿಯೊಳಗಿನ ಅಮ್ಮನವರನ್ನು ಬಗೆ ಬಗೆಯ ಪುಷ್ಪಗಳಿಂದ ಅಲಂಕರಿಸಲಾಗಿತ್ತು.
ದೇವಾಲಯದ ಪ್ರಧಾನ ಅರ್ಚಕ ಉಮೇಶ್ ಹೊಳ್ಳ ನೇತೃತ್ವದಲ್ಲಿ ಹರಿಶ್ಚಂದ್ರ ಭಟ್, ವೇದವ್ಯಾಸ ಭಟ್, ಸೋಮಶೇಖರ ಭಟ್, ಗಿರೀಶ್ ಭಟ್, ರಾಘವೇಂದ್ರ ಭಟ್, ಸುಬ್ರಮಣ್ಯ ಭಟ್ ಅರ್ಚಕರ ತಂಡ ಹೋಮ ಹವನಾದಿ ಧಾರ್ಮಿಕ ವಿಧಿಗಳನ್ನು ನಡೆಸಿತು. ದೇವತಾ ಸಮಿತಿ ಅಧ್ಯಕ್ಷ ರಾಮದಾಸ್, ಕಾರ್ಯದರ್ಶಿ ಎಂ.ಎA. ಚರಣ್, ಕೋಶಾಧಿಕಾರಿ ಮುತ್ತಣ್ಣ, ನಿರ್ದೇಶಕರಾದ ಕೆ.ಎನ್. ಅಶೋಕ್, ಜಗದೀಶ್, ರಾಮಚಂದ್ರ ಸೇರಿದಂತೆ ಬೈಚನಹಳ್ಳಿಯ ಗೆಳೆಯರ ಬಳಗದ ಸದಸ್ಯರು ಇದ್ದರು. ದೇವಾಲಯದಲ್ಲಿ ಮಹಿಳಾ ತಂಡದಿAದ ಭಜನೆ ನಡೆಯಿತು. ನಂತರ ನೆರೆದ ಭಕ್ತಜನರಿಗೆ ಪ್ರಸಾದ ಅನ್ನಸಂತರ್ಪಣೆ ನೆರವೇರಿತು.ಸುಂಟಿಕೊಪ್ಪ: ಗ್ರಾಮ ದೇವರ ಸಮಿತಿ ವತಿಯಿಂದ ಗ್ರಾಮದೇವರ ೬ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಸ್ಥಾನ ಸಮಿತಿ, ಶ್ರೀ ರಾಮ ಸೇವಾ ಸಮಿತಿ, ಶ್ರೀಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರ ಸಮಿತಿ, ಗೌರಿಗಣೇಶೋತ್ಸವ ಸಮಿತಿ, ಮಸಣಿಕಮ್ಮ ದೇವಸ್ಥಾನ ಸಮಿತಿ, ವೃಕ್ಷೋದ್ಭವ ಮಹಾಗಣಪತಿ ದೇವಾಲಯ ಸಮಿತಿ, ಟಿಸಿಎಲ್ ಚಾಮುಂಡೇಶ್ವರಿ ದೇವಸ್ಥಾನ ಸಮಿತಿ, ಶ್ರೀದೇವಿಯ ಅಣ್ಣಪ್ಪ ದೇವಸ್ಥಾನ ಸಮಿತಿ, ಬಾಳೆಕಾಡು ಮುತ್ತಪ್ಪ ದೇವಸ್ಥಾನ, ಗದ್ದೆಹಳ್ಳ ಕೊಡಂಗಲ್ಲೂರು ಶ್ರೀ ಕುರುಂಬ ಭಗವತಿ ದೇವಾಲಯ, ಮಧುರಮ್ಮ ಬಡಾವಣೆಯ ನಾಗದೇವತೆ, ಮಳೂರು ಬೆಳ್ಳಾರಿಕಮ್ಮ ದೇವಾಲಯ ಸಮಿತಿ, ಗದ್ದೆಹಳ್ಳದ ಬಸವೇಶ್ವರ ದೇವಾಲಯ ಸಮಿತಿಗಳ ಸಹಭಾಗಿತ್ವದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು.
ಅರ್ಚಕ ಮಂಜುನಾಥ್ ಶರ್ಮಾ ಅವರ ನೇತೃತ್ವದಲ್ಲಿ ಬೆಳಿಗೆ ಸ್ಥಳ ಶುದ್ಧಿ ಕಲಶ ಪೂಜೆ ನಡೆಯಿತು. ನಂತರ ಗ್ರಾಮದೇವತೆಗೆ ಎಳನೀರು, ಹಾಲು, ಕುಂಕುಮ, ಜೇನು, ಗಂಧ, ತುಪ್ಪದ ಅಭಿಷೇಕ ನೆರವೇರಿತು. ಬಳಿಕ ದೇವರಿಗೆ ವಸ್ತಾçಲಂಕಾರ ಮತ್ತು ಹೂವಿನ ಅಲಂಕಾರ ಪೂಜೆ ನಡೆಯಿತು. ಬೆಳಿಗ್ಗೆ೯.೩೦ ಕ್ಕೆ ಮಹಾಪೂಜೆ, ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನಡೆಯಿತು.
ನಂತರ ಗ್ರಾಮ ದೇವತೆಗೆ ಅರ್ಪಣೆ ನಡೆದು, ಮದ್ಯಾಹ್ನದ ನಂತರ ನೆರೆದಿದ್ದ ನೂರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಾಡಿಸಲಾಗಿತ್ತು. ದೇವಾಲಯವನ್ನು ವಿವಿಧ ಬಗೆಯ ಹೂವು ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಸಮಿತಿಯ ಅಧ್ಯಕ್ಷ ಎ.ಶ್ರೀಧರ್ ಕುಮಾರ್, ಕಾರ್ಯದರ್ಶಿ ಸುರೇಶ್ ಗೋಪಿ, ಖಜಾಂಚಿ ದಿನು ದೇವಯ್ಯ, ಉಪಾಧ್ಯಕ್ಷರಾದ ಬಿ.ಡಿ.ರಾಜು ರೈ, ಜೆ.ಎನ್. ಚಂದ್ರಶೇಖರ್, ಸಲಹಾ ಸಮಿತಿಯ ಎ. ಲೋಕೇಶ್ ಕುಮಾರ್, ಶಾಂತರಾಮ್ ಕಾಮತ್, ಬಸವರಾಜು, ಅಶೋಕ್ ಶೇಟ್, ಸಂಘಟನಾ ಕಾರ್ಯದರ್ಶಿಗಳಾದ ಧನು ಕಾವೇರಪ್ಪ, ಸುನಿಲ್, ಸಹ ಕಾರ್ಯದರ್ಶಿ ಎ.ಶ್ರೀಧರನ್, ಅಯ್ಯಪ್ಪ, ಪಟ್ಟೆಮನೆ ಕುಟುಂಬಸ್ಥರಾದ ಪಿ.ಪಿ.ಉದಯಕುಮಾರ್, ಪಟ್ಟೆಮನೆ ಸದಾಶಿವ, ಸದಾಶಿವ ರೈ, ಸಂತೋಷ್, ರವಿ, ಶಿವಕುಮಾರ್, ಸಿ.ಸಿ. ಸುನಿಲ್, ಎಂ.ಆರ್. ಶಶಿಕುಮಾರ್, ಬಿ.ಕೆ.ಪ್ರಶಾಂತ್ ಸೇರಿದಂತೆ ವಿವಿಧ ದೇವಾಲಯ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಿದ್ದಾಪುರ: ಅಮ್ಮತ್ತಿ ಸಮೀಪದ ಪುಲಿಯೇರಿ ಗ್ರಾಮದ ಶ್ರೀ ಮಂಗುಯಿಲ್ ಶ್ರೀ ಭಗವತಿ ದೇವಾಲಯದ ವಾರ್ಷಿಕೋತ್ಸವ ವಿವಿಧ ಪೂಜಾ ಕೈಂಕರ್ಯ ಗಳೊಂದಿಗೆ ಶ್ರದ್ಧಾಭಕ್ತಿಯಿಂದ ನಡೆಯಿತು. ಉತ್ಸವದ ಅಂಗವಾಗಿ ಮಹಾಗಣಪತಿ ಹೋಮ, ದೇವಿಗೆ ಮಹಾಪೊಂಗಲ್, ಮಹಾ ಕುರುದಿ ಪೂಜೆ ನಡೆಯಿತು.
ಮಹಾಪೂಜೆಯ ನಂತರ ಚಂಡೆ ವಾದ್ಯದೊಂದಿಗೆ ಅಲಂಕೃತ ಮಂಟಪದಲ್ಲಿ ಶ್ರೀದೇವಿಯ ವಿಗ್ರಹವನ್ನು ಇರಿಸಲಾಯಿತು. ಬಳಿಕ ಗುಹ್ಯ ಗ್ರಾಮದ ಶ್ರೀ ಅಗಸ್ತೆö್ಯÃಶ್ವರ ದೇವಾಲಯದ ಸಮೀಪ ಕಾವೇರಿ ನದಿಯಲ್ಲಿ ದೇವಿಯ ಆರಟ್ ನಡೆಸಲಾಯಿತು. ಶ್ರೀ ಅಗಸ್ತೆö್ಯÃಶ್ವರ ದೇವಾಲಯದಲ್ಲಿ ಪೂಜಾ ಕೈಂಕರ್ಯ ನಡೆದ ನಂತರ ಮಂಗುಯಿಲ್ ಭಗವತಿ ಕ್ಷೇತ್ರದವರೆಗೆ ಶೋಭಾ ಯಾತ್ರೆ ನಡೆಯಿತು. ವಾರ್ಷಿಕೋತ್ಸವ ಪೂಜಾ ಕಾರ್ಯಕ್ರಮ ಎಳವನ ಶ್ರೀಧರ್ ನಂಬೂದಿರಿ ಪಾಡ್ ನೇತೃತ್ವದಲ್ಲಿ ನಡೆಯಿತು. ಭಕ್ತಾದಿಗಳಿಗೆ ದೇವಾಲಯ ಸಮಿತಿ ವತಿಯಿಂದ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಪೂಜಾ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ಈ ಸಂದರ್ಭದಲ್ಲಿ ದೇವಾಲಯ ಆಡಳಿತ ಮಂಡಳಿಯ ಪ್ರಮುಖರಾದ ಎಂ.ಟಿ.ಶಶಿ, ಶೀಲ, ಅಭಿಜಿತ್, ರತೀಶ್, ಮನು, ಪ್ರದೀಪ್, ಶೀಲಾ, ಸೀಮಾ ಇನ್ನಿತರರು ಹಾಜರಿದ್ದರು.ಸೋಮವಾರಪೇಟೆ: ಸಮೀಪದ ಗಾಂಧಿನಗರದಲ್ಲಿರುವ ಶ್ರೀ ದೊಡ್ಡ ಮಾರಿಯಮ್ಮ ದೇವಾಲಯ ಸಮಿತಿಯ ನೂತನ ಸಾಲಿನ ಆಡಳಿತ ಮಂಡಳಿ ಪದಾಧಿಕಾರಿಗಳ ಆಯ್ಕೆ ದೇವಾಲಯ ಆವರಣದಲ್ಲಿ ನಡೆಯಿತು.
೫೦ನೇ ವರ್ಷದ ಅದ್ಧೂರಿ ಜಾತ್ರಾ ಮಹೋತ್ಸವದ ಅಂಗವಾಗಿ ನೂತನ ಸಮಿತಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಹೆಚ್.ಜಿ. ಚಿಂತು ಆಯ್ಕೆಯಾದರು. ಕಾರ್ಯದರ್ಶಿಯಾಗಿ ದಿಲೀಪ್ ನೇಮಕಗೊಂಡರು.
ಸಮಿತಿಯ ಗೌರವಾಧ್ಯಕ್ಷರಾಗಿ ಸುಬ್ರಮಣಿ (ಬೋಜಣ್ಣ), ಗಂಗಾಧರ (ಪಾತಣ್ಣ) ಅಂಜನಿ ಹಾಗೂ ಗಂಗಾಧರ (ಪೂಜಾರಿ), ಗೌರವ ಸಲಹೆಗಾರರಾಗಿ ಮಂಜುನಾಥ್, ಕೇಶವ ಹಾಗೂ ದುರ್ಗೇಶ್ (ಚಿಕ್ಕಣ್ಣ), ಉಪಾಧ್ಯಕ್ಷರಾಗಿ ಐ.ಬಿ. ಕೃಷ್ಣ, ಗೋಪಿ, ಮೂರ್ತಿ, ಸಹ ಕಾರ್ಯದರ್ಶಿಯಾಗಿ ಭರತ್, ಖಜಾಂಚಿಯಾಗಿ ಅಯ್ಯಪ್ಪ, ಸಹ ಖಜಾಂಚಿಯಾಗಿ ಹೇಮಂತ್ ಹಾಗೂ ದೀಪಕ್, ಸಂಚಾಲಕರಾಗಿ ಅನಂತ್ ಹಾಗೂ ಮನು ಅವರುಗಳು ಆಯ್ಕೆಯಾದರು.