*ಗೋಣಿಕೊಪ್ಪ, ಮಾ. ೧೩: ನೆಸ್ಲೆ ಇಂಡಿಯಾ ಲಿಮಿಟೆಡ್ ಹಾಗೂ ಹಾಕಿ ಕೂರ್ಗ್ ಸಹಯೋಗದಲ್ಲಿ ತಾ.೨೧ ರಿಂದ ಗೋಣಿಕೊಪ್ಪ ಕಾವೇರಿ ಕಾಲೇಜು ಮೈದಾನದಲ್ಲಿ ನೆಸ್‌ಕೆಫೆ ಕೊಡಗು ಕಪ್ ಹಾಕಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಹಾಕಿ ಕೂರ್ಗ್ ಅಧ್ಯಕ್ಷ ಪಳಂಗAಡ ಲವಕುಮಾರ್ ತಿಳಿಸಿದ್ದಾರೆ.

ತಾ.೨೩ ರವರೆಗೆ ನಡೆಯುವ ಟೂರ್ನಿಯಲ್ಲಿ ೮ ತಂಡಗಳು ಸೆಣೆಸಾಟ ನಡೆಸಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೂರ್ನಾಡು ಬ್ಲೇಜ್ ಕ್ಲಬ್, ಮೂರ್ನಾಡು ಎಂಆರ್‌ಎಫ್, ಬೇರಳಿನಾಡ್ ಯುಎಸ್‌ಸಿ, ಬಲಮುರಿ ಕ್ಲಬ್, ಬೇಗೂರು ಈಶ್ವರ ಯೂತ್ ಕ್ಲಬ್, ಕೋಣನಕಟ್ಟೆ ಇಲೆವೆನ್, ಕಕ್ಕಬ್ಬೆ ಮಲ್ಮ, ಕುಂದ ಬೊಟ್ಟಿಯತ್‌ನಾಡ್ ತಂಡಗಳು ಸ್ಪರ್ಧಿಸಲಿವೆ ಎಂದು ತಿಳಿಸಿದರು.

ವಿಜೇತ ಪ್ರಥಮ ತಂಡಕ್ಕೆ ೭೫ ಸಾವಿರ ನಗದು, ದ್ವಿತೀಯ ತಂಡಕ್ಕೆ ೫೦ ಸಾವಿರ, ಸೆಮಿಫೈನಲ್‌ಗೆ ಪ್ರವೇಶಿಸಿದ ಎರಡು ತಂಡಗಳಿಗೆ ತಲಾ ೨೫ ಸಾವಿರ, ಉಳಿದ ತಂಡಗಳಿಗೆ ತಲಾ ೧೦ ಸಾವಿರ ನಗದು ಬಹುಮಾನ ನೀಡಲಾಗುತ್ತದೆ ಎಂದರು.

ಉದ್ಘಾಟನೆ ಕಾರ್ಯಕ್ರಮಕ್ಕೆ ಕ್ಯಾಲ್ಸ್ ಮುಖ್ಯಸ್ಥ ದತ್ತ ಕರುಂಬಯ್ಯ, ನೆಸ್ಟೆ÷್ಲ ಮಿಡ್ಲ್ ಈಸ್ಟ್ ಮತ್ತು

ನಾರ್ತ್ ಆಫ್ರಿಕಾ

(ಮೊದಲ ಪುಟದಿಂದ) ವ್ಯಾವಹಾರಿಕ ಅಭಿವೃದ್ಧಿ ಮಾಜಿ ವ್ಯವಸ್ಥಾಪಕ ಕರ್ತಮಾಡ ವಿಕ್ರಂ ಸುಬ್ಬಯ್ಯ, ಹಿರಿಯರಾದ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಭಾಗವಹಿಸಲಿದ್ದಾರೆ. ಸಮಾರೋಪಕ್ಕೆ ನೆಸ್ಲೆ ಇಂಡಿಯಾ ಲಿಮಿಟೆಡ್ ಮುಖ್ಯಸ್ಥ ಸುರೇಶ್ ನಾರಾಯಣ್, ಸಿಇಓ ಮನೀಶ್ ತಿವಾರಿ, ಸಂಸದ ಯದುವೀರ್ ಒಡೆಯರ್, ಮಾಜಿ ಸಂಸದ ಪ್ರತಾಪ್ ಸಿಂಹ, ಒಲಂಪಿಯನ್‌ಗಳಾದ ವಿ. ಆರ್. ರಘುನಾಥ್, ಸಣ್ಣುವಂಡ ಕೆ. ಉತ್ತಪ್ಪ, ಅಶ್ವಿನಿ ನಾಚಪ್ಪ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಮೈದಾನದ ಉಸ್ತುವಾರಿಯನ್ನು ಗುಮ್ಮಟ್ಟಿರ ಮುತ್ತಣ್ಣ, ಕಳ್ಳಿಚಂಡ ಗೌತಂ, ಸಂತೋಷ್, ಮಿನ್ನಂಡ ಜೋಯಪ್ಪ ನಿಭಾಯಿಸುತ್ತಿದ್ದಾರೆ. ಕ್ರೀಡಾಭಿಮಾನಿಗಳು ಉತ್ತಮ ಹಾಕಿ ಆಟ ಕಣ್ತುಂಬಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಹಾಕಿ ಕೂರ್ಗ್ ಉಪಾಧ್ಯಕ್ಷೆ ಯಮುನ ಚೆಂಗಪ್ಪ, ಕಾರ್ಯದರ್ಶಿ ಅಮ್ಮಾಂಡಿರ ಚೇತನ್ ಇದ್ದರು.