ನಾಪೋಕ್ಲು, ಮಾ. ೧೩: ಇಲ್ಲಿಗೆ ಸಮೀಪದ ಮೂರ್ನಾಡುನಲ್ಲಿ ಹೆಲ್ತ್ ಫಸ್ಟ್ ಆಸ್ಪತ್ರೆ ಮೂರ್ನಾಡು ಇದರ ವತಿಯಿಂದ ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಹೆಲ್ತ್ ಫಸ್ಟ್ ಆಸ್ಪತ್ರೆಯಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಅಧಿಕ ರಕ್ತದೊತ್ತಡ, ಶ್ವಾಸಕೋಶದ ಹಾರೈಕೆ, ಪೌಷ್ಟಿಕಾಂಶದ ಮೌಲ್ಯಮಾಪನ, ಡಯಾಬಿಟಿಸ್ ಮತ್ತು ಸ್ತನ ಕ್ಯಾನ್ಸರ್ ತಪಾಸಣೆ, ಮಹಿಳೆಯರ ಆರೋಗ್ಯ, ದೃಷ್ಟಿ ತಪಾಸಣೆ ಹಾಗೂ ಮಾರ್ಗದರ್ಶನವನ್ನು ಆಸ್ಪತ್ರೆಯ ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳು ನೀಡಿದರು.

ಈ ಸಂದರ್ಭ ಜನರಲ್ ಸರ್ಜನ್ ಡಾ. ಧನಶ್ರೀ ಬಿ.ವಿ. ಅವರು ಉಚಿತ ವೈದ್ಯಕೀಯ ಸಮಾಲೋಚನೆಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಮೂರ್ನಾಡು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಕನ್ನು ಅಪ್ಪಚ್ಚು, ಕಾರ್ಯದರ್ಶಿ ಪಿ.ಎಂ. ಅಪ್ಪಣ್ಣ, ಖಜಾಂಚಿ ಅರುಣ್ ಅಪ್ಪಚ್ಚು, ಕೊಡವ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ರೇಖಾ ತಮ್ಮಯ್ಯ, ಕಾರ್ಯದರ್ಶಿ ಗೀತಾ ಪವಿತ್ರ ಹಾಗೂ ಸದಸ್ಯರು, ಸಾರ್ವಜನಿಕರು ಇದ್ದರು.