ವೀರಾಜಪೇಟೆ, ಮಾ. ೧೨: ವೀರಾಜಪೇಟೆ ಸಮೀಪದ ಮಲೆತಿರಿಕೆ ಬೆಟ್ಟದ ಶ್ರೀ ಮಲೆ ಮಹಾದೇಶ್ವರ ದೇವರ ವಾರ್ಷಿಕ ಹಬ್ಬ ತಾ. ೧೫ ರಿಂದ ೨೦ ರವರೆಗೆ ನಡೆಯಲಿದೆ. ತಾ. ೧೮ಕ್ಕೆ ದೊಡ್ಡ ಹಬ್ಬ ನಡೆಯಲಿದೆ.

ತಾ. ೧೫ ರಂದು ಸಂಜೆ ನಾಲ್ಕು ಗಂಟೆಗೆ ಕುಂದಿರ ಐನ್‌ಮನೆಯಿಂದ ಭಂಡಾರ ಬರುವುದು, ಸಂಜೆ ೭ ಗಂಟೆಗೆ ಕೊಡಿಮರ ನಿಲ್ಲಿಸುವುದು, ರಾತ್ರಿ ೮ಕ್ಕೆ ಮಹಾಪೂಜೆ ನಂತರ ಅನ್ನದಾನ ನಡೆಯಲಿದೆ.

ತಾ. ೧೬ ರಂದು ಬೆಳಿಗ್ಗೆ ೧೧ಕ್ಕೆ ನಾಗದೇವಾಲ ಯದಲ್ಲಿ ವಿಶೇಷ ಪೂಜೆ ಅಪರಾಹ್ನ ಅನ್ನದಾನ ನಡೆಯಲಿದೆ. ರಾತ್ರಿ ೮ ಗಂಟೆಗೆ ಕಾಪು, ನಂತರ ಮಹಾಪೂಜೆ ಬಳಿಕ ಅನ್ನದಾನ ನಡೆಯಲಿದೆ.

ತಾ. ೧೭ ರಂದು ೧೧ಕ್ಕೆ ಮಕ್ಕಾಟ್ ಸ್ಥಾನದಲ್ಲಿ ವಿಶೇಷ ಪೂಜೆ ಬಳಿಕ ಅನ್ನದಾನ ನಡೆಯಲಿದೆ. ರಾತ್ರಿ ೮ಕ್ಕೆ ಇರ್ ಬೊಳಕ್ ಮಹಾಪೂಜೆ ಬಳಿಕ ಅನ್ನದಾನ ನಡೆಯಲಿದೆ. ತಾ. ೧೮ ರಂದು ದೊಡ್ಡಹಬ್ಬ ನಡೆಯಲಿದ್ದು, ಅಪರಾಹ್ನ ೧೨ಕ್ಕೆ ನೆರಪು, ಎತ್ತ್ಪೋರಾಟ ತೆಂಗಿನಕಾಯಿಗೆ ಗುಂಡು ಹೊಡೆಯುವುದು ನಂತರ ಅಪರಾಹ್ನ ೧ ಗಂಟೆಗೆ ಮಹಾಪೂಜೆ ನಂತರ ಅನ್ನದಾನ ನಡೆಯಲಿದೆ. ಬಳಿಕ ಅಪರಾಹ್ನ ೩ ಗಂಟೆಗೆ ದೇವರು ಹೊರಗೆ ಬರುವುದು, ಸಂಜೆ ೬ ಗಂಟೆಗೆ ದೇವರ ಮೆರವಣಿಗೆ ವೀರಾಜಪೇಟೆ ಮುಖ್ಯ ರಸ್ತೆಯಲ್ಲಿ ನಡೆಯಲಿದೆ.

ವಿಶೇಷವಾಗಿ ವೀರಾಜಪೇಟೆ ಜೈನರ ಬೀದಿಯ ಬಸವೇಶ್ವರ ದೇವಾಲಯದಲ್ಲಿ ಪೂಜೆ ನಂತರ ಗಡಿಯಾರ ಕಂಬದ ಬಳಿ ಕೃಷ್ಣ ಸ್ಟೋರ್ ಸಮೀಪ ಪೂಜೆ ನಂತರ ದೇವಾಂಗ ಬೀದಿಯ ಜೇನು ಮೇಣ ಸಹಕಾರ ಸಂಘದ ಬಳಿಯ ಪಾರ್ವತಿ ದೇವಾಲಯದಲ್ಲಿ ಪೂಜೆ ಬಳಿಕ ದೇವರು ಮತ್ತೆ ದೇವಾಲಯಕ್ಕೆ ರಾತ್ರಿ ೧೦ ಗಂಟೆಗೆ ಹಿಂತಿರುಗಲಿದ್ದು, ಮಲೆಮಹಾದೇಶ್ವರ ದೇವಾಲಯದಲ್ಲಿ ಪೂಜೆ ನಡೆಯಲಿದೆ. ತಾ.೧೯ ರಂದು ಅಪರಾಹ್ನ ೧೨ ಗಂಟೆಗೆ ಮಹಾಪೂಜೆ ಮತ್ತು ಅನ್ನದಾನ ಸಂಜೆ ೬ ಗಂಟೆಗೆ ದೇವರಜಳಕ ಅವಭೃತ ಸ್ನಾನ ನಂತರ ರಾತ್ರಿ ೮ಕ್ಕೆ ದೇವರ ನೃತ್ಯ ನಂತರ ಅನ್ನದಾನ ನಡೆಯಲಿದೆ.

ತಾ. ೨೦ ರಂದು ಬೆಳಿಗ್ಗೆ ೧೧ಕ್ಕೆ ಕೊಡಿಮರ ಇಳಿಸುವುದು (ಕಳಮಡಕ್‌ವೊ) ಅಪರಾಹ್ನ ೧೨ ಕ್ಕೆ ಮಹಾಪೂಜೆ ಮತ್ತು ಅನ್ನದಾನ ನಡೆಯಲಿದೆ. ಈ ವಾರ್ಷಿಕೋತ್ಸವಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸುವಂತೆ ವಾಟೆರಿರ ಪೂವಯ್ಯ ಕೋರಿದ್ದಾರೆ. ಈ ಸಂದರ್ಭ ದೇವಾಲಯದ ತಕ್ಕರಾದ ಕೊಳುವಂಡ ಕಾರ್ಯಪ್ಪ, ಕಾರ್ಯದರ್ಶಿ ಬೊಳ್ಳಚಂಡ ಪ್ರಕಾಶ್, ಸಹಕಾರ್ಯದರ್ಶಿ ಚೋಕಂಡ ರಮೇಶ್ ಮತ್ತು ಖಜಾಂಚಿ ಚಾರಿಮಂಡ ಗಣಪತಿ ಉಪಸ್ಥಿತರಿದ್ದರು.