ಮಡಿಕೇರಿ, ಮಾ. ೧೨ : ರಾಷ್ಟಿçÃಯ ಹೆದ್ದಾರಿ-೭೫ರ ನಡುವಿನ ಸಂಪಾಜೆಯಿAದ ಕುಶಾಲನಗರ ತನಕದ ರಸ್ತೆ ಬದಿಗಳಲ್ಲಿ ಗೂಡಂಗಡಿಗಳನ್ನು ನಿರ್ಮಿಸಿಕೊಂಡು ವ್ಯಾಪಾರ ನಡೆಸುತ್ತಿರುವವರಿಗೆ ಹೆದ್ದಾರಿ ಪ್ರಾಧಿಕಾರ ಸೂಚನೆ ನೀಡಿದ್ದರು, ತೆರವಿಗೆ ತಾ. ೧೫ರ ತನಕ ಗಡುವು ನೀಡಿದೆ. ನಿಗದಿತ ಅವಧಿಯೊಳಗೆ ತೆರವುಗೊಳಿಸದಿದ್ದಲ್ಲಿ ಪೊಲೀಸರ ಸಮ್ಮುಖದಲ್ಲಿ ಕಾರ್ಯಾಚರಣೆ ನಡೆಸಿ ತೆರವು ಮಾಡುವ ಎಚ್ಚರಿಕೆಯನ್ನು ನೀಡಿದೆ.

ಈಗಾಗಲೇ ಈ ಬಗ್ಗೆ ಅಧಿಕೃತ ಪ್ರಕಟಣೆ ಹಾಗೂ ವ್ಯಾಪಾರಿಗಳಿಗೆ ನೋಟಿಸ್ ನೀಡಿ ತೆರವಿಗೆ ಪ್ರಾಧಿಕಾರದ ಅಧಿಕಾರಿಗಳು ಕಾರ್ಯಪ್ರವೃತ್ತಗೊಂಡಿದ್ದು, ವ್ಯಾಪಾರಿಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ‘ಯಾವುದೇ ಕಾರಣಕ್ಕೂ ಕಾರ್ಯಾಚರಣೆ ಸ್ಥಗಿತಗೊಳಿಸುವ ಮಾತಿಲ್ಲ’ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ತಾ. ೧೫ರೊಳಗೆ ಅಂಗಡಿ ತೆರವು ಮಾಡದಿದ್ದಲ್ಲಿ ತಾ. ೧೬ ರಂದು ಗೂಡಂಗಡಿಗಳ ಮೇಲೆ ‘ಜೆಸಿಬಿ’ ಪ್ರಯೋಗ ಸಾಧ್ಯತೆ ದಟ್ಟವಾಗಿದೆ.

ಯಾಕಾಗಿ ಕ್ರಮ?

ಕುಶಾಲನಗರದಿಂದ ಸಂಪಾಜೆ ತನಕ ಶೆಡ್‌ಗಳನ್ನು ನಿರ್ಮಿಸಿಕೊಂಡು ಹಣ್ಣು, ತರಕಾರಿ, ಜ್ಯೂಸ್, ಕ್ಯಾಂಟೀನ್, ಎಳನೀರು ಸೇರಿದಂತೆ ಇನ್ನಿತರ ವ್ಯಾಪಾರದಲ್ಲಿ ತೊಡಗಿಸಿಕೊಂಡ ಹಿನ್ನೆಲೆ ಪ್ರಯಾಣಿಕರು ರಸ್ತೆ ಬದಿಗಳಲ್ಲಿರುವ ಅಂಗಡಿಗಳ ಮುಂದೆ ವಾಹನಗಳನ್ನು ನಿಲ್ಲಿಸಿಕೊಳ್ಳುತ್ತಿರುವುದರಿಂದ ರಾಷ್ಟಿçÃಯ ಹೆದ್ದಾರಿಯಲ್ಲಿ ಓಡಾಡುವ ವಾಹನಗಳ ಸರಾಗ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದೆ. ರಸ್ತೆಯಲ್ಲಿನ ವಾಹನ ನಿಲುಗಡೆಯಿಂದಾಗಿ ಅಪಘಾತ ಸಂಭವಿಸುವ ಸಾಧ್ಯತೆಯಿರುವುದರಿಂದ ಹೆದ್ದಾರಿ ಪ್ರಾಧಿಕಾರ ಈ ಕ್ರಮಕ್ಕೆ ಮುಂದಾಗಿದೆ.

ಅನಧಿಕೃತ ಅಂಗಡಿಗಳನ್ನು ಹಾಕಿಕೊಂಡಿರುವುದಕ್ಕೆ ಈ ಹಿಂದಿನಿAದಲೂ ವ್ಯಾಪಕ ವಿರೋಧ ವ್ಯಕ್ತವಾಗುತಿತ್ತು. ತಿರುವುಗಳಲ್ಲಿ ಅಂಗಡಿಗಳಿರುವ ಹಿನ್ನೆಲೆ ಅಪಘಾತ ಸಾಧ್ಯತೆಯೂ ಇದೆ ಎಂಬ ದೂರುಗಳು ಇದ್ದವು. ಈ ಸಂಬAಧ ಸದ್ಯ ೨೫ ರಿಂದ ೩೦ ಅಂಗಡಿಗಳನ್ನು ಗುರುತಿಸಲಾಗಿದೆ.

ನಿಯಮಗಳ ಉಲ್ಲಂಘನೆ

ಗೂಡAಗಡಿ ನಿರ್ಮಿಸಿಕೊಂಡವರು ನಿಯಮಗಳನ್ನು ಗಾಳಿಗೆ ತೂರಿ ವ್ಯಾಪಾರ ಮಾಡುತ್ತಿರುವುದು ಕಂಡು ಬಂದಿದೆ.

ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ನಿಯಮದಡಿ ಹೆದ್ದಾರಿ ಮಧ್ಯಭಾಗದಿಂದ ಬದಿಗೆ ೪೦ ಮೀಟರ್ ತನಕ ಯಾವುದೇ ಕಟ್ಟಡ, ತಾತ್ಕಲಿಕ ಶೆಡ್ ನಿರ್ಮಾಣ ಅಥವಾ ಯಾವುದೇ ವ್ಯಾಪಾರ ವಹಿವಾಟಿಗೆ ಅವಕಾಶವಿರುವುದಿಲ್ಲ. ಹೆದ್ದಾರಿ ಗಡಿ ರೇಖೆಯಿಂದ ೧೨ ಮೀಟರ್ ಅಂತರದಲ್ಲಿ ವಾಣಿಜ್ಯ ಚಟುವಟಿಕೆ ನಡೆಸಲು ನಿರ್ಬಂಧವಿದೆ.

ಅದಲ್ಲದೆ ವ್ಯಾಪಾರ ನಡೆಸಲು ಪ್ರಾಧಿಕಾರದ ಅನುಮತಿ ಕಡ್ಡಾಯವಾಗಿರುತ್ತದೆ. ಸ್ಥಳೀಯ ಗ್ರಾ.ಪಂ., ನಗರಸಭೆ, ಪುರಸಭೆ ಸೇರಿದಂತೆ ಸ್ಥಳೀಯಾಡಳಿತದ ಅನುಮತಿ ಪಡೆದರೂ ಅದು ಗಣನೆಗೆ ಬರುವುದಿಲ್ಲ. ಹೆದ್ದಾರಿ ಪ್ರಾಧಿಕಾರ ಅಂಗಡಿ ನಿರ್ಮಾಣಕ್ಕೆ ಅವಕಾಶವೂ ನೀಡುವುದಿಲ್ಲ ಎಂದು ಅಧಿಕಾರಿಗಳು ‘ಶಕ್ತಿ’ಗೆ ತಿಳಿಸಿದ್ದಾರೆ.