ಸೋಮವಾರಪೇಟೆ, ಮಾ. ೧೩: ಸೋಮವಾರಪೇಟೆ ಪಟ್ಟಣ ಸೇರಿದಂತೆ ಪಶ್ಚಿಮ ಭಾಗದ ಪ್ರದೇಶಗಳಲ್ಲಿ ವರ್ಷದ ಪ್ರಥಮ ಮಳೆ ಸುರಿದಿದ್ದು, ಇಳೆಯನ್ನು ತಂಪಾಗಿಸಿತು. ನಿನ್ನೆ ರಾತ್ರಿ ಸುರಿದ ವರ್ಷಾಧಾರೆಯು ರೈತಾಪಿ ವರ್ಗದ ಮೊಗದಲ್ಲಿ ಸಂತಸಕ್ಕೆ ಕಾರಣವಾಯಿತು.
ರಾತ್ರಿ ೮ ಗಂಟೆಯಿAದ ೯ ಗಂಟೆಯವರೆಗೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಉತ್ತಮ ಮಳೆ ಸುರಿಯಿತು. ಬಿಸಿಲ ಬೇಗೆಯಿಂದ ಬಿಸಿಯೇರಿದ್ದ ವಾತಾವರಣ ತಂಪಾಯಿತು.
ಇನ್ನು ಕಾಫಿ ತೋಟಗಳಿಗೆ ವರ್ಷದ ಆರಂಭಿಕ ಮಳೆ ಉತ್ತಮ ಹವಾಮಾನ ಸೃಷ್ಟಿಸಿದ್ದು, ಕಾಫಿ ಗಿಡಗಳಲ್ಲಿ ಮೊಗ್ಗು ಮೂಡಿ ಹೂವಾಗಿ ಅರಳಲು ಸಹಕಾರಿಯಾಯಿತು.
ಪಟ್ಟಣ ವ್ಯಾಪ್ತಿಯಲ್ಲಿ ಸರಾಸರಿ ೮೦ ಸೆಂಟ್ಸ್ ಮಳೆಯಾಯಿತು. ರಸ್ತೆಯಲ್ಲಿದ್ದ ಧೂಳು ತೊಳೆದು ವಾತಾವರಣ ತಿಳಿಯಾಯಿತು.
ಶಾಂತಳ್ಳಿ ಹೋಬಳಿಯಾದ್ಯಂತ ಉತ್ತಮ ಮಳೆ ಸುರಿಯಿತು. ಕಂಬಳ್ಳಿಗೆ ಮುಕ್ಕಾಲು ಇಂಚು ಮಳೆ ದಾಖಲಾಯಿತು. ಕೊತ್ತನಳ್ಳಿ, ನಗರಳ್ಳಿ, ಯಡೂರು, ಕುಮಾರಳ್ಳಿ, ಹರಗ, ಗುಡ್ಡಳ್ಳಿ, ಹರಪಳ್ಳಿ ಭಾಗಕ್ಕೆ ಸರಿಸುಮಾರು ೧ ಇಂಚಿನಷ್ಟು ಮಳೆಯಾಯಿತು. ಚಿಕ್ಕತೋಳೂರು ಭಾಗದ ಕೆಲವೆಡೆ ಒಂದೂವರೆಯಿAದ ಎರಡೂವರೆ ಇಂಚಿನಷ್ಟು ಧಾರಾಕಾರ ಮಳೆಯಾದ ಬಗ್ಗೆ ವರದಿಯಾಗಿದೆ.
ಇನ್ನು ಸಿಂಗನಳ್ಳಿಗೆ ೧.೩೦ ಇಂಚು, ಇನಕನಹಳ್ಳಿಗೆ ೧.೨೫ ಇಂಚು, ಗರ್ವಾಲೆಗೆ ೯೮ ಸೆಂಟ್ಸ್ ಮಳೆಯಾಗಿದೆ. ಬೇಳೂರು, ಕುಸುಬೂರು ಭಾಗಕ್ಕೆ ಉತ್ತಮ ಮಳೆಯಾಗಿದ್ದು, ನೇಗಳ್ಳೆ ಭಾಗದಲ್ಲಿ ಸಾಧಾರಣ ಮಳೆ ಸುರಿದಿದೆ. ಒಟ್ಟಾರೆ ವರ್ಷದ ಪ್ರಥಮ ಮಳೆ ಇಳೆಯನ್ನು ತಂಪಾಗಿಸುವುದರೊAದಿಗೆ, ಬೆಳೆಗಾರರ ಸಂತಸಕ್ಕೂ ಕಾರಣವಾಗಿದೆ.ಶನಿವಾರಸಂತೆ ಪಟ್ಟಣ ಹಾಗೂ ಹೋಬಳಿಯಾದ್ಯಂತ ಬುಧವಾರ ರಾತ್ರಿ ವರ್ಷದ ಪ್ರಥಮ ವರ್ಷಧಾರೆ ಗುಡುಗು-ಮಿಂಚು ಆರ್ಭಟ ಸಹಿತ ಸುರಿದು ಬಿಸಿಲ ಬೇಗೆಗೆ ಕಾದಿದ್ದ ಇಳೆ ತಂಪಾಯಿತು. ಕಾಫಿ ಬೆಳೆಗಾರರ ಮೊಗದಲ್ಲೂ ಮಂದಹಾಸ ಮೂಡಿತು.
ಶನಿವಾರಸಂತೆ ಪಟ್ಟಣ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ೩೩-೪೫ ಸೆಂಟ್ ಮಳೆಯಾಗಿದೆ. ಹಂಡ್ಲಿ, ದುಂಡಳ್ಳಿ, ನಿಡ್ತ, ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೬೫ ಸೆಂಟ್‌ನಿAದ ೧ ಇಂಚಿಗೂ ಅಧಿಕ ಮಳೆಯಾಗಿದೆ.
ಪ್ರದೇಶದಿಂದ ಪ್ರದೇಶಕ್ಕೆ ಮಳೆ ಪ್ರಮಾಣ ವ್ಯತ್ಯಾಸವಿದ್ದರೂ ಸುರಿದ ಮಳೆಯಿಂದಾಗಿ ತೋಟದಲ್ಲಿ ಕಾಫಿ ಹೂವುಗಳು ಅರಳಿ ಪರಿಮಳ ಬೀರಬಹುದು. ಆದರೆ ಮಳೆಯನ್ನೇ ಅವಲಂಭಿಸಿರುವ ತೋಟಗಳಲ್ಲಿ ಒಂದು ವಾರದಲ್ಲೇ ಮತ್ತೆ ಮಳೆಯಾದರೆ ಉತ್ತಮ. ಇಲ್ಲವಾದಲ್ಲಿ ಅರಳಿರುವ ಹೂ ಒಣಗಿ ಉದುರಿ ಹೋಗುತ್ತದೆ. ಕಾಯಿಗಟ್ಟುವ ಮೊದಲೇ ಹೂ ಒಣಗದಂತಿರಲು ಮತ್ತೆ ಮಳೆ ಸುರಿಯಲೇಬೇಕು ಎಂದು ಅಪ್ಪಶೆಟ್ಟಳ್ಳಿ ಗ್ರಾಮದ ಬೆಳೆಗಾರ ಹಾಗೂ ಕೃಷಿ ವಿಜ್ಞಾನಿ ಎ.ಡಿ. ಮೋಹನ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.