ಮಡಿಕೇರಿ, ಮಾ. ೧೨: ಗೋ ಸೇವಾ ಗತಿ ವಿಧಿ ಕರ್ನಾಟಕ, ರಾಧಾ ಸುರಭಿ ಗೋ ಮಂದಿರ, ರಾಷ್ಟಿçÃಯ ಗೋ ಸೇವಾ ಸಂಸ್ಥಾನ ಟ್ರಸ್ಟ್ ವತಿಯಿಂದ ದೇಶೀಯ ಗೋವುಗಳ ಉಳಿವು ಮತ್ತು ವಿಷಮುಕ್ತಗಾಳಿ, ಮಣ್ಣು, ಆಹಾರ ಪ್ರಕೃತಿ, ಸಂಸ್ಕೃತಿಯ ರಕ್ಷಣೆಗಾಗಿ ರಾಜ್ಯಾದ್ಯಂತ ನಡೆಸುತ್ತಿರುವ ನಂದಿ ರಥಯಾತ್ರೆ, ಮಡಿಕೇರಿಗೆ ಆಗಮಿಸಿದ ಸಂದರ್ಭ ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ ಸ್ವಾಗತ ಕೋರಲಾಯಿತು ಬಳಿಕ ಶಾಂತಿನಿಕೇತನ ಸಮೀಪ ಗೋವುಗಳಿಗೆ ಭಕ್ತರು ಪೂಜೆ ಸಲ್ಲಿಸಿ ಹಣ್ಣು ಹಂಪಲು ನೀಡಿ ಉಪಚರಿಸಿದರು.
ಈ ವೇಳೆ ಮಾತನಾಡಿದ ಗತಿ ವಿಧಿ ಕೊಡಗು ಜಿಲ್ಲಾ ಸಂಯೋಜಕ್ ಗೋಸೇವಾ ಪ್ರದೀಪ್ ವಾಲ್ನೂರು, ರಾಜ್ಯದಲ್ಲಿ ಎರಡನೇ ವರ್ಷದ ನಂದಿ ರಥಯಾತ್ರೆ ನಡೆಸಲಾಗುತ್ತಿದೆ. ದೇಶೀ ಗೋತಳಿಯ ರಕ್ಷಣೆ, ಗೋಮಾತೆಯನ್ನು ವಿಶ್ವಮಾತೆಯನ್ನಾಗಿ ಘೋಷಿಸಬೇಕು ಮತ್ತು ಭಾರತ ವಿಶ್ವ ಗುರುವಾಗಬೇಕೆಂಬ ಸಂಕಲ್ಪದೊAದಿಗೆ ಯಾತ್ರೆ ಸಾಗಿದೆ ಎಂದು ತಿಳಿಸಿದರು.ಸೋಮವಾರಪೇಟೆ, ಮಾ. ೧೨: ಕರ್ನಾಟಕ ಗೋ ಸೇವಾ ಗತಿವಿಧಿಯ ನೇತೃತ್ವದಲ್ಲಿ ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ರಾಧಾ ಸುರಭಿ ಗೋ ಮಂದಿರ, ಗೋ ಸೇವಾ ಸಂಸ್ಥಾನದಿAದ ಕಳೆದ ಡಿ. ೩೧ ರಂದು ಪ್ರಾರಂಭಗೊAಡು ಕರ್ನಾಟಕ ರಾಜ್ಯಾದ್ಯಂತ ಸಂಚರಿಸುತ್ತಿರುವ ನಂದಿ ರಥಯಾತ್ರೆ ಸೋಮವಾರಪೇಟೆಗೆ ಆಗಮಿಸಿದ ಸಂದರ್ಭ, ಸಾರ್ವಜನಿಕರು ಹಾಗೂ ಗೋ ಪ್ರೇಮಿಗಳು ಭವ್ಯ ಸ್ವಾಗತ ಕೋರಿದರು.
ನಿನ್ನೆ ಸಂಜೆ ತೊರೆನೂರು ಗ್ರಾಮ ಪಂಚಾಯಿತಿಯ ಸಿದ್ದಲಿಂಗಪುರ, ಅರಸಿನಕುಪ್ಪೆ ಗ್ರಾಮದಲ್ಲಿರುವ ಶ್ರೀ ಮಂಜುನಾಥ ಸ್ವಾಮಿ ಕ್ಷೇತ್ರಕ್ಕೆ ಆಗಮಿಸಿದ ರಥಯಾತ್ರೆಯನ್ನು, ದೇವಾಲಯದ ಪ್ರಧಾನ ಗುರುಗಳಾದ ಶ್ರೀ ರಾಜೇಶ್ನಾಥ್ ಜೀ ಅವರ ನೇತೃತ್ವದಲ್ಲಿ, ಪ್ರಧಾನ ಅರ್ಚಕ ಜಗದೀಶ್ ಉಡುಪ ಅವರ ಪೌರೋಹಿತ್ವದೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲಾಯಿತು.
ಅರಸಿನಕುಪ್ಪೆ ಗ್ರಾಮದ ಮಹಿಳೆಯರು ರಥಯಾತ್ರೆಗೆ ಆರತಿ ಬೆಳಗಿ, ಕಲಶÀದೊಂದಿಗೆ ಗ್ರಾಮಸ್ಥರ ಸಮ್ಮುಖದಲ್ಲಿ ಮೆರವಣಿಗೆ ತೆರಳಿದರು. ನಂತರ ದೇವಾಲಯ ಆವರಣದಲ್ಲಿ ಜೋಡಿ ನಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಇದೇ ಸಂದರ್ಭ ಶ್ರೀ ಮಂಜುನಾಥ ದೇವಾಲಯದಲ್ಲಿ ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿತು. ಸಾರ್ವಜನಿಕ ಭಕ್ತಾದಿಗಳಿಗೆ ಪ್ರಸಾದ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ರಥಯಾತ್ರೆ ಸಂಚರಿಸಿದ್ದು, ಗೋ ಸಂತತಿ ಉಳಿವಿನ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಏ. ೫ ರಂದು ಮಂಗಳೂರಿನಲ್ಲಿ ಸಮಾರೋಪ ನಡೆಯಲಿದೆ ಎಂದು ಜಿಲ್ಲಾ ಗೋ ಸೇವಾ ಗತಿವಿಧಿ ಸಂಚಾಲಕ ಪ್ರದೀಪ್ ತಿಳಿಸಿದರು. ರಥಯಾತ್ರೆ ಪ್ರಧಾನ ಕಾರ್ಯದರ್ಶಿ ನವೀನ್ ಮಾರ್ಲ ಹಾಜರಿದ್ದರು.
ಸೋಮಮವಾರಪೇಟೆಗೆ ರಥಯಾತ್ರೆ ಆಗಮಿಸಿದ ಸಂದರ್ಭ ಇಲ್ಲಿನ ಅಂಬೇಡ್ಕರ್ ಪ್ರತಿಮೆ ಬಳಿ ಹಿಂದೂ ಜಾಗರಣಾ ವೇದಿಕೆ, ವಿಶ್ವ ಹಿಂದೂ ಪರಿಷತ್ ಸೇರಿದಂತೆ ವಿವಿಧ ಸಂಘ-ಸAಸ್ಥೆಗಳ ನೇತೃತ್ವದಲ್ಲಿ, ಸಾರ್ವಜನಿಕರು ಭವ್ಯ ಸ್ವಾಗತ ಕೋರಿದರು.
ಇಲ್ಲಿನ ಬಸವೇಶ್ವರ ದೇವಾಲಯದಲ್ಲಿ ನಂದಿ ರಥಯಾತ್ರೆಗೆ ವೀರಶೈವ ಸಮಾಜದ ವತಿಯಿಂದ ಪೂಜೆ ಸಲ್ಲಿಸಿ, ಸ್ವಾಗತ ಕೋರಲಾಯಿತು. ಈ ಸಂದರ್ಭ ಸಮಾಜದ ಯಜಮಾನ ಬಿ.ಪಿ. ಶಿವಕುಮಾರ್, ಶೆಟ್ರು ಬಿ.ಆರ್. ಮೃತ್ಯುಂಜಯ, ಕಾರ್ಯದರ್ಶಿ ಸಿ.ಸಿ. ನಾಗರಾಜ್, ಖಜಾಂಚಿ ಎಚ್.ಎಸ್. ಯುವರಾಜ್, ಪದಾಧಿಕಾರಿಗಳಾದ ಕೆ.ಎನ್. ತೇಜಸ್ವಿ, ಎ.ಎಸ್. ಮಲ್ಲೇಶ್, ಎ. ಮಂಜು ನೀಲಕಂಠ, ಕೆ.ಜೆ. ಗಿರೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನಂತರ ಪಟ್ಟಣದ ಖಾಸಗಿ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಸಲಾ ಯಿತು. ಬಸ್ ನಿಲ್ದಾಣದಲ್ಲಿ ನಂದಿ ಪೂಜೆ ನಡೆಯಿತು. ಈ ಸಂದರ್ಭ ವಿಶ್ವ ಹಿಂದೂ ಪರಿಷತ್ನ ಪರಮೇಶ್, ಹಿಂದೂ ಜಾಗರಣಾ ವೇದಿಕೆಯ ಉಮೇಶ್, ಸುಭಾಷ್ ತಿಮ್ಮಯ್ಯ, ಪ್ರಮುಖರಾದ ಮಹೇಶ್ ತಿಮ್ಮಯ್ಯ, ಸೋಮೇಶ್, ರೂಪಾ ಸತೀಶ್, ಶರತ್ಚಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು. ನಂತರ ರಥಯಾತ್ರೆಯು ಶನಿವಾರಸಂತೆ, ಮನೆಹಳ್ಳಿ ಮಠಕ್ಕೆ ತೆರಳಿತು.ಶನಿವಾರಸಂತೆ : ಮಂಗಳೂರಿನಿAದ ಆರಂಭಗೊAಡು ರಾಜ್ಯಾದ್ಯಂತ ಸಂಚರಿಸಿದ ನಂದಿ ರಥಯಾತ್ರೆ ಶನಿವಾರಸಂತೆಗೆ ಆಗಮಿಸಿದಾಗ ಹಿಂದೂ ಜಾಗರಣಾ ವೇದಿಕೆ ಹಾಗೂ ಸಾರ್ವಜನಿಕರಿಂದ ಭವ್ಯ ಸ್ವಾಗತ ನೀಡಲಾಯಿತು.
ಗುಡುಗಳಲೆ ವೃತ್ತಕ್ಕೆ ಆಗಮಿಸಿದ ನಂದಿ ರಥ ಮುಖ್ಯರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿ ಇರುವ ಬನ್ನಿ ಮಂಟಪ ತಲುಪಿತು. ಹಿಂದೂ ಜಾಗರಣಾ ವೇದಿಕೆ ಮುಖಂಡರಾದ ಪುನೀತ್ ತಾಳೂರು ಹಾಗೂ ಸೋಮಶೇಖರ್ ಪೂಜಾರಿ ಹಣತೆ ಬೆಳಗಿಸಿ, ಮಾಲಾರ್ಪಣೆ ಮಾಡಿ ಗೋವುಗಳನ್ನು ಪೂಜಿಸಿದರು.
ಈ ಸಂದರ್ಭ ಹಿಂದೂ ಜಾಗರಣಾ ವೇದಿಕೆ ಮುಖಂಡರಾದ ಬಿ.ಎಸ್. ಅನಂತಕುಮಾರ್, ಯೋಗಾನಂದ್, ಸೋಲಾರ್ ಪ್ರತಾಪ್, ಸುರೇಶ್, ರಕ್ಷಿತ್ ಗೌಡ, ಸುಧಾ, ಸಂಜಯ್, ಚಂದನ್, ಕಿರಣ್, ಕಾರ್ಯಕರ್ತರು, ಇತರರು ಹಾಜರಿದ್ದರು. ಭಕ್ತರು ಪೂಜಿಸಿ ನಮಿಸಿದರು. ಕಾಣಿಕೆ ಅರ್ಪಿಸಿದರು. ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು. ಗೋ ಉತ್ಪನ್ನಗಳ ಮಾರಾಟವೂ ನಡೆದು ಸಹಕರಿಸಲಾಯಿತು. ಈ ಸಂದರ್ಭ ಹಿಂದೂ ಜಾಗರಣಾ ವೇದಿಕೆ ಮುಖಂಡರಾದ ಬಿ.ಎಸ್. ಅನಂತಕುಮಾರ್, ಯೋಗಾನಂದ್, ಸೋಲಾರ್ ಪ್ರತಾಪ್, ಸುರೇಶ್, ರಕ್ಷಿತ್ ಗೌಡ, ಸುಧಾ, ಸಂಜಯ್, ಚಂದನ್, ಕಿರಣ್, ಕಾರ್ಯಕರ್ತರು, ಇತರರು ಹಾಜರಿದ್ದರು.