ಮಡಿಕೇರಿ, ಮಾ. ೧೨ : ಇಲ್ಲಿನ ಮದೆ ಗ್ರಾಮದ ಬಿಜಿಎಸ್ ಮದೆನಾಡು ಶಾಲೆಯ ೫ನೇ ತರಗತಿ ವಿದ್ಯಾರ್ಥಿನಿ ಸಿಂಚನಾ ಯೋಗಾಸನದಲ್ಲಿ ಮೂರು ವಿಶ್ವದಾಖಲೆ ನಿರ್ಮಿಸಿದ್ದು, ಅವರು ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ಗೆ ಸೇರ್ಪಡೆಯಾಯಿತು.
ಈಕೆ ಡಿಂಬಾಸನದಲ್ಲಿ ೧೫ ಮೀಟರ್ ದೂರ ನಡೆದು ನಂತರ, ೧ ನಿಮಿಷ ೪ ಸೆಕೆಂಡ್‌ಗಳ ಕಾಲ ಉರಬ್ರಾಸನದಲ್ಲಿ ಹಾಗೂ ೧ ನಿಮಿಷ ೪೫ ಸೆಕೆಂಡ್‌ಗಳ ಕಾಲ ಮೃಗಮುಖಾಸನದಲ್ಲಿದ್ದು ದಾಖಲೆ ಮಾಡಿದಳು.
ಮಧ್ಯಪ್ರದೇಶದಿಂದ ಬಂದಿದ್ದ ಗೋಲ್ಡನ್ ಬುಕ್ ಅಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಏಷ್ಯಾ ವಿಭಾಗದ ಮುಖ್ಯಸ್ಥ ಡಾ. ಮನೀಷ್ ಬಿಷ್ಣೋಯಿ ಪ್ರಮಾಣಪತ್ರ ವಿತರಿಸಿದರು.
ಯೋಗ ಕಲಿಸಿದ ಆಕೆಯ ತಾಯಿ ರೇಣುಕಾ ಹಾಗೂ ಪ್ರೋತ್ಸಾಹಿಸಿದ ತಂದೆ ಕೀರ್ತಿಕುಮಾರ್ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಮಾತನಾಡಿ, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿ ಎಂದರು.
ಕಸಾಪ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ‘ಬಾಲಕಿಯು ಇಡೀ ರಾಷ್ಟç ಗಮನಿಸುವ ಕೆಲಸ ಮಾಡಿದ್ದಾಳೆ. ಪ್ರಾಥಮಿಕ ಹಂತದಲ್ಲಿಯೇ ಬಾಲಕಿ ಈ ಸಾಧನೆ ಮಾಡಿರುವುದು ಶ್ಲಾಘನೀಯ ಎಂದರು.
ಯೋಗ ಗುರು ಕೆ.ಕೆ. ಮಹೇಶ್‌ಕುಮಾರ್, ಮದೆ ವಿ.ಎಸ್.ಎಸ್.ಎನ್ ಅಧ್ಯಕ್ಷ ಧನಂಜಯ ಅಗೋಳಿಕಜೆ, ಡಿಡಿಪಿಐ ರಂಗಧಾಮಪ್ಪ, ಸಾಹಿತಿ ಬಿ.ಆರ್.ಜೋಯಪ್ಪ ಹಾಗೂ ಶಾಲೆಯ ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಜರಿದ್ದರು.