ಕುಶಾಲನಗರ, ಮಾ. ೧೧: ಕುಶಾಲನಗರ ತಾಲೂಕು ಶಿರಂಗಾಲ ಗ್ರಾಮದಲ್ಲಿ ಮಾರ್ಚ್ ೧೪ ರಿಂದ ಮೂರು ದಿನಗಳ ಕಾಲ ಶ್ರೀ ಮಂಟಿಗಮ್ಮ ದೇವಿಯ ಹಬ್ಬ ಮತ್ತು ಉತ್ಸವ ಹಾಗೂ ಮಾರ್ಚ್ ೧೭ರಂದು ಉಮಾ ಮಹೇಶ್ವರ ರಥೋತ್ಸವ ನಡೆಯಲಿದೆ ಎಂದು ಶ್ರೀ ಮಂಟಿಗಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಎಸ್ ಎಸ್ ಚಂದ್ರಶೇಖರ್ ತಿಳಿಸಿದ್ದಾರೆ.

ಅವರು ಕುಶಾಲನಗರ ಪತ್ರಿಕಾ ಭವನದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು ತಾಲೂಕಿನ ಗಡಿಭಾಗದ ಶಿರಂಗಾಲ ಗ್ರಾಮದಲ್ಲಿ ಮಾರ್ಚ್ ೧೪ ರಿಂದ ಮೂರು ದಿನಗಳ ಕಾಲ ಗ್ರಾಮದ ಇತಿಹಾಸವುಳ್ಳ ಶ್ರೀ ಮಂಟಿಗಮ್ಮ ದೇವಿಯ ದ್ರೆöÊವಾರ್ಷಿಕ ಹಬ್ಬ ಹಾಗೂ ಜಾತ್ರೋತ್ಸವ ನಡೆಯಲಿದೆ. ೧೪ರಂದು ಸಂಜೆ ಗ್ರಾಮದ ಮೂಲಸ್ಥಾನ ಕೋಟೆಯ ದೇವಸ್ಥಾನದಿಂದ ಪವಿತ್ರ ಬನಕ್ಕೆ ದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಒಯ್ಯಲಾಗುತ್ತದೆ.

ಮಾರ್ಚ್ ೧೫ರಂದು ಬೆಳಿಗ್ಗೆ ೬ ಗಂಟೆಯಿAದ ದೇವಿಯ ದರ್ಶನ ಹಾಗೂ ಪೂಜಾ ಕಾರ್ಯಕ್ರಮಗಳು ನಡೆಯಲಿವೆ . ದೇವಿಯ ದರ್ಶನ ೧೫ ರಿಂದ ಎರಡು ದಿನಗಳ ಕಾಲ ಇರುತ್ತದೆ ಎಂದು ಮಾಹಿತಿ ನೀಡಿದರು. ಹಗಲು ಗ್ರಾಮೀಣ ಜಾನಪದ ಜಾತ್ರೆ ಕ್ರೀಡೋತ್ಸವ ಮನೋರಂಜನೆ ಕಾರ್ಯಕ್ರಮಗಳು ಜರುಗಲಿವೆ. ಮಾರ್ಚ್ ೧೬ರಂದು ಗೆಳೆಯರ ಬಳಗದ ವತಿಯಿಂದ ಬೆಂಗಳೂರು ಸ್ನೇಹ ಮೆಲೋಡಿಸ್ ಆರ್ಕೆಸ್ಟಾç ತಂಡದಿAದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಮಾರ್ಚ್ ೧೦ ರಂದು ಪಲ್ಲಕ್ಕಿ ಉತ್ಸವ ಮತ್ತು ಮಹಾದ್ವಾರ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭ ಬೆಳಿಗ್ಗೆ ೭ ಗಂಟೆಗೆ ಕೊಡ್ಲಿಪೇಟೆ ಕಿರಿ ಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಅವರ ನೇತೃತ್ವದಲ್ಲಿ ಗಂಗಾಜಲ ಹಾಗೂ ಮೆರವಣಿಗೆ ಮೂಲಕ ಶ್ರೀ ಮಂಟಿಗಮ್ಮ ದೇವಾಲಯಕ್ಕೆ ಪಲ್ಲಕ್ಕಿ ಉತ್ಸವ ಮೂರ್ತಿ ತೆರಳಲಿದೆ ಎಂದು ತಿಳಿಸಿದರು.

ದಿನಾಂಕ ೧೦ ರಂದು ಬೆಳಿಗ್ಗೆ ೯.೪೫ ಕ್ಕೆ ಮುಖ್ಯ ರಸ್ತೆ ಬಳಿ ನಿರ್ಮಾಣಗೊಂಡಿರುವ ಮಹಾ ದ್ವಾರ ಲೋಕಾರ್ಪಣೆ ಗೊಳಿಸಲಾಗುವುದು ಎಂದು ಹೇಳಿದರು. ಮಾರ್ಚ್ ೧೭ರಂದು ಉಮಾ ಮಹೇಶ್ವರ ರಥೋತ್ಸವ ಗ್ರಾಮದಲ್ಲಿ ಜರಗಲಿದ್ದು ಈ ಸಂಬAಧ ಮಾರ್ಚ್ ೧೭ರಂದು ಹೂವಿನಿಂದ ಅಲಂಕೃತ ರಥವನ್ನು ಸಜ್ಜುಗೊಳಿಸಿ ಮಧ್ಯಾಹ್ನ ೧೨:೩೦ ಕ್ಕೆ ಉಮಾಮಹೇಶ್ವರ ಸ್ವಾಮಿ ವಾರ್ಷಿಕ ರಥೋತ್ಸವ ನಡೆಯಲಿದೆ.

ಗ್ರಾಮದ ಜಾತ್ರೋತ್ಸವ ಅಂಗವಾಗಿ ಮಾರ್ಚ್ ೧೪ರಂದು ರಾತ್ರಿಯಿಂದ ೧೬ರ ತನಕ ಮೂರು ದಿನಗಳ ಕಾಲ ಭಕ್ತಾದಿಗಳಿಗೆ ಬೆಳಗಿನ ಉಪಹಾರ ಮತ್ತು ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭ ಸಮಿತಿಯ ಉಪಾಧ್ಯಕ್ಷ ಎಸ್ ಜೆ ಉಮೇಶ್ ಕಾರ್ಯದರ್ಶಿ ಎಂ ಎಸ್ ಗಣೇಶ್ ,ದೇವಸ್ಥಾನ ಕಟ್ಟಡ ಸಮಿತಿಯ ಗೌರವಾಧ್ಯಕ್ಷ ಎಸ್ ಆರ್ ಕಾಳಿಂಗಪ್ಪ, ಅಧ್ಯಕ್ಷರಾದ ಎಸ್ ಕೆ ಪ್ರಸನ್ನ, ಕಾರ್ಯದರ್ಶಿ ಬಿ ಎಸ್ ಬಸವಣ್ಣಯ್ಯ ಇದ್ದರು.