ಗೋಣಿಕೊಪ್ಪಲು, ಮಾ. ೧೧: ಪ್ರತಿಷ್ಠಿತ ೫ನೇ ವರ್ಷದ ಕೆಂಬಟ್ಟಿ ಕ್ರಿಕೆಟ್ ಕಪ್ ಅನ್ನು ಗೆಲ್ಲುವ ಮೂಲಕ ಜೋಡು ಬೀಟಿಯ ಡೈಮಂಡ್ ಸ್ಟಾರ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಬಿಳುಗುಂದದ ಬಿವೈಸಿ ತಂಡವು ರನ್ರ‍್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು. ಜಿಲ್ಲೆಯ ೨೩ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಮೊದಲು ಬ್ಯಾಟ್ ಮಾಡಿದ ಬಿಳುಗುಂದದ ಬಿವೈಸಿ ತಂಡವು ಕೇವಲ ೧೬ ರನ್ ಗಳಿಸು ವಷ್ಟರಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

ಬ್ಯಾಟಿAಗ್ ಆರಂಭಿಸಿದ ಜೋಡು ಬೀಟಿಯ ಡೈಮಂಡ್ ಸ್ಟಾರ್ ತಂಡವು ಕೇವಲ ೧ ಓವರ್‌ನಲ್ಲಿ ೧೭ ರನ್ ಬಾರಿಸುವ ಮೂಲಕ ವಿಜಯದ ನಗೆ ಬೀರಿತು. ವಿಜೇತ ತಂಡಕ್ಕೆ ನಗದು, ಆಕರ್ಷಕ ಟ್ರೋಫಿಯೊಂದಿಗೆ ಗಣ್ಯರು ನಗದು ಬಹುಮಾನ ವಿತರಿಸಿದರು. ಅಮ್ಮತ್ತಿಯ ಶಾಲಾ ಮೈದಾನದಲ್ಲಿ ಶ್ರೀ ಅಯ್ಯಪ್ಪ ಯೂತ್ ಕ್ಲಬ್, ಶ್ರೀ ನೀಲಮ್ಮ ಪೊಮ್ಮಕ್ಕಡ ಕೂಟ ಕೋತೂರು ಹಾಗೂ ಕೊಡಗು ಕೆಂಬಟ್ಟಿ ಕ್ರೀಡೋ ತ್ಸವ ಸಮಿತಿ ವತಿಯಿಂದ ೫ನೇ ವರ್ಷದ ಕ್ರೀಡಾಕೂಟ ನಡೆಯಿತು.

ಕ್ರೀಡೋತ್ಸವದ ಅಂಗವಾಗಿ ಕ್ರಿಕೆಟ್, ವಾಲಿಬಾಲ್, ಮಹಿಳೆಯರಿ ಗಾಗಿ ಹಗ್ಗಜಗ್ಗಾಟ ಜರುಗಿತು. ಜಿಲ್ಲೆಯ ವಿವಿಧ ಭಾಗದಿಂದ ಕೆಂಬಟ್ಟಿ ಸಮಾಜ ದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿ ಸಿದ್ದರು. ಅಂತಿಮ ಪಂದ್ಯಾವಳಿಯನ್ನು ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ, ವೀರಾಜಪೇಟೆ ಪುರಸಭಾ ಸದಸ್ಯ ಮೊಹಮ್ಮದ್ ರಾಫಿ, ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ. ಮೇಚಿರ ಸುಭಾಶ್ ನಾಣಯ್ಯ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರೊ. ಡಾ. ಕೊಲೆಯಂಡ ಮೋಹನ್ ಅಪ್ಪಾಜಿ ಸೇರಿದಂತೆ ಇನ್ನಿತರ ಗಣ್ಯರು ಉದ್ಘಾಟಿಸಿದರು.

ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ, ಪ್ರತಿವರ್ಷವು ಕ್ರೀಡೋತ್ಸವವು ಉತ್ತಮ ರೀತಿಯಲ್ಲಿ ನಡೆಯುವಂತಾಗಲಿ. ಸಮಾಜದಲ್ಲಿ ಸೇವೆ ಮಾಡುತ್ತಿರುವವರನ್ನು ಕ್ರೀಡೋತ್ಸವದ ಅಂಗವಾಗಿ ಗುರುತಿಸಿ ಗೌರವಿಸುವಂತಾಗಬೇಕು ಎಂದರು. ಕಾರ್ಯಕ್ರಮದ ಅಂಗವಾಗಿ ಹಲವು ಗಣ್ಯರು ಮಾತನಾಡಿದರು.

ಶ್ರೀ ಅಯ್ಯಪ್ಪ ಯೂತ್ ಕ್ಲಬ್ ಅಧ್ಯಕ್ಷ ಜೋಕುಟ್ಟಡ ಸೃಜನ್ ಅಧ್ಯಕ್ಷತೆಯಲ್ಲಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಉಪ ತಹಶೀಲ್ದಾರ್ ಚಟ್ಟಕುಟ್ಟಡ ಪೊನ್ನಪ್ಪ, ಕಾಂಗ್ರೆಸ್ ಪ್ರಮುಖರಾದ ಉದಯ್ ಮಾದಪ್ಪ, ಮೊಹಮ್ಮದ್ ನಯಾಜ್, ಪತ್ರಕರ್ತ ಚಟ್ಟಕುಟ್ಟಡ ಶಶಿ ಅಚ್ಚಪ್ಪ, ಸಮಾಜ ಸೇವಕ ಮೂಳೆಕುಟ್ಟಡ ದಿನೇಶ್ ಪೆಗ್ಗೋಲಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ಕಾರ್ಯ ಕ್ರಮದ ಅಂಗವಾಗಿ ಬಿಲ್ಲಿರಿಕುಟ್ಟಂಡ ಮೋನಿಷ್ ಕುಟ್ಟಪ್ಪ ಹಾಗೂ ದೋಣಕುಟ್ಟಂಡ ಸಿಂಚನಾ ಅವರನ್ನು ಸಮಾಜದ ಪರವಾಗಿ ಸನ್ಮಾನಿಸಲಾ ಯಿತು. ಇದೇ ವೇಳೆ ಕಾರ್ಯಕ್ರಮದಲ್ಲಿ ವಿವಿಧ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಹಿಳೆಯರಿಗಾಗಿ ನಡೆದ ಹಗ್ಗಜಗ್ಗಾಟ, ಪುರುಷರಿಗಾಗಿ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾ ವಳಿಯಲ್ಲಿ ಭಾಗವಹಿಸಿದ್ದ ವಿಜೇತ ತಂಡಕ್ಕೆ ಗಣ್ಯರು ಬಹುಮಾನ ವಿತರಿಸಿದರು.

ಕಾರ್ಯಕ್ರಮದಲ್ಲಿ ಕೆಂಬಟ್ಟಿ ಸಮುದಾಯದ ಪ್ರಮುಖರಾದ ಜೋಕುಟ್ಟಡ ಬೊಗ್ಗುರು, ರಾಜ, ಕೂಪರೆಕುಟ್ಟಡ ಸಾಗರ್ ಪೂವಣ್ಣ, ಮುಂಜಕುಟ್ಟಡ ರಾಜ, ಜಾನಕಿ, ಉತ್ತುಕುಟ್ಟಡ ಮನು ಬಿದ್ದಪ್ಪ, ತಿಮ್ಮಣ್ಣ ಸೋಮಣ್ಣ, ಮೂಳೆಕುಟ್ಟಡ, ಕಂಬರೆಕುಟ್ಟಡ, ಕುಟುಂಬದ ಪ್ರಮುಖರು, ಚಟ್ಟಕುಟ್ಟಡ ಸುಬ್ಬಕ್ಕಿ ಮುತ್ತಪ್ಪ, ಮುಂಜಕುಟ್ಟಡ ಸುಬ್ರಮಣಿ, ಚಟ್ಟಕುಟ್ಟಡ ಗೀತಾ ಅಜೀತ, ಚಿಮ್ಮಿಕುಟ್ಟಡ ಸುಬ್ರಮಣಿ, ಮಂಜಕುಟ್ಟಡ ಬೋಪಣ್ಣ, ಶರೀನಾ, ಕುಂಞಮಾಡ ಮುತ್ತಪ್ಪ, ಸದಾಶಿವ, ಪುದಿಯೊಕ್ಕಡ ರಮೇಶ್, ಈರ ಸುಬ್ಬಯ್ಯ, ಕುಶನ್ ರೈ, ಶೈಲಾ ರಂಜು, ಸಂಗೀತ ಲೋಕೇಶ್, ಕಾಡ್ಯಮಾಡ ಮಧು, ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.