ಮಡಿಕೇರಿ, ಮಾ. ೧೦: ಸುಸ್ಥಿರ ಹಾಗೂ ಜವಾಬ್ದಾರಿಯುತ ಪ್ರವಾಸೋದ್ಯಮ ವಲಯವನ್ನು ಸೃಷ್ಟಿಸಿ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಪ್ರಯತ್ನಗಳನ್ನು ನಡೆಸಲಾಗುವುದು ಎಂದು ಕೂರ್ಗ್ ಹೊಟೇಲ್ಸ್ ಮತ್ತು ರೆಸಾರ್ಟ್ಸ್ ಅಸೋಸಿಯೇಷನ್ (ಕೊಹೆರಾ) ಅಧ್ಯಕ್ಷ ಕುಂಡ್ಯೋಳAಡ ದಿನೇಶ್ ಕಾರ್ಯಪ್ಪ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧೯೯೦ ರಲ್ಲಿ ಆರಂಭಗೊAಡ ಕೊಡಗು ಜಿಲ್ಲಾ ಹೊಟೇಲ್, ರೆಸ್ಟೋರೆಂಟ್ ಹಾಗೂ ರೆಸಾರ್ಟ್ ಅಸೋಸಿಯೇಷನ್ ಹೆಸರನ್ನು ಕೂರ್ಗ್ ಹೊಟೇಲ್ಸ್ ಮತ್ತು ರೆಸಾರ್ಟ್ ಅಸೋಸಿಯೇಷನ್ (ಕೊಹೆರಾ) ಎಂದು ಬದಲಿಸಿ ಪದಾಧಿಕಾರಿಗಳನ್ನು ನೇಮಿಸಿ ಸಮಿತಿ ರಚನೆ ಮಾಡಲಾಗಿದೆ. ಅತಿಥಿ ಸತ್ಕಾರ ಉದ್ಯಮವನ್ನು ಜವಾಬ್ದಾರಿಯುತವಾಗಿ ಮುನ್ನಡೆಸುವ ಧ್ಯೇಯ ನಮ್ಮದಾಗಿದೆ. ಈ ಹಿನ್ನೆಲೆ ಉತ್ಸಾಹಿ, ಕಾರ್ಯೋ ನ್ಮುಖ ಸದಸ್ಯರನ್ನು ಸೇರಿಸಿಕೊಂಡು ಉತ್ತಮ ಭವಿಷ್ಯದತ್ತ ವಲಯವನ್ನು ಕೊಂಡೊಯ್ಯುವ ಭರವಸೆಯೊಂದಿಗೆ ಮುನ್ನಡೆಯ ಲಾಗುತ್ತಿದೆ. ಜಿಲ್ಲೆಯ ಹೊಟೇಲ್, ರೆಸಾರ್ಟ್, ರೆಸ್ಟೋರೆಂಟ್, ಅತಿಥಿ ಸತ್ಕಾರ ಉದ್ಯಮ ನಡೆಸುತ್ತಿರುವ ಆಸಕ್ತ, ಉತ್ಸಾಹಿ ಸದಸ್ಯರುಗಳು ಪ್ರತಿನಿಧಿಸುವ ಸಾಮೂಹಿಕ ಸಂಸ್ಥೆ ಇದಾಗಿದೆ. ಪ್ರವಾಸೋದ್ಯಮ ಜೊತೆಗೆ ನೈತಿಕವಾಗಿ ಪರಿಸರವನ್ನು ಮತ್ತು ಜಿಲ್ಲೆಯ ಮೂಲ ಸಂಸ್ಕೃತಿಯನ್ನು ಸಂರಕ್ಷಿಸುವ ಜವಾಬ್ದಾರಿಯುತ ಮಾರ್ಗದರ್ಶಿ ಶಕ್ತಿಯಾಗಿ ಸಂಸ್ಥೆ ಕಾರ್ಯ ನಿರ್ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯದರ್ಶಿ ನಾಸೀರ್ ಅಹಮ್ಮದ್ ಮಾತನಾಡಿ, ಕೊಡಗಿನ ನೈಸರ್ಗಿಕ ಸೌಂದರ್ಯ ಮತ್ತು ಪರಂಪರೆಯನ್ನು ಗೌರವಿಸುವ ಜವಾಬ್ದಾರಿಯುತ ಪ್ರವಾಸೋದ್ಯಮ ವನ್ನು ಪ್ರೋತ್ಸಾಹಿಸುವುದು, ಉದ್ಯಮಶೀಲತೆ, ಪಾಲುದಾರರ ನಡುವೆ ಸಹಯೋಗ, ಸಂಯೋಜನೆ ವೃದ್ಧಿಸುವುದು, ಉತ್ತಮ ಗುಣಮಟ್ಟದ ಸೇವೆ ಒದಗಿಸುವುದು. ಈ ನಿಟ್ಟಿನಲ್ಲಿ ಅಗತ್ಯ ತರಬೇತಿ ನೀಡುವುದು, ತ್ಯಾಜ್ಯ, ನಿರ್ವಹಣೆ, ನೀರಿನ ಉಳಿತಾಯ, ಸಮುದಾಯ ಆಧರಿತ ಪ್ರವಾಸೋದ್ಯಮ, ಪರಿಸರ ಪ್ರಜ್ಞೆ ರೂಢಿಸುವ ನಿಟ್ಟಿನಲ್ಲಿ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡು ಅಗತ್ಯ ಮಾರ್ಗದರ್ಶನ, ತರಬೇತಿ ನೀಡಿ ಜಾಗೃತಿ ಮೂಡಿಸಿ ಸುಸ್ಥಿರ ಪ್ರವಾಸೋದ್ಯಮ ಸೃಷ್ಟಿಸುವ ಹೆಬ್ಬಯಕೆ ಹೊಂದಲಾಗಿದೆ ಎಂದು ವಿವರಿಸಿದರು.

ಗ್ರಾಮೀಣ ಪ್ರವಾಸೋದ್ಯಮವನ್ನು ಬೆಂಬಲಿಸಿ ಕೃಷಿಯೊಂದಿಗೆ ಸ್ಥಿರ ಆದಾಯ ಸೃಷ್ಟಿಸಿ ಹುಟ್ಟೂರಿನಲ್ಲಿ ಉದ್ಯೋಗ ಸೃಷ್ಟಿಸಿ ವಲಸೆಯನ್ನು ತಪ್ಪಿಸುವ ಉದ್ದೇಶವನ್ನು ಹೊಂದ ಲಾಗಿದೆ. ಕೊಡಗು ಪ್ರಪಂಚದಲ್ಲಿಯೇ ಗಮನ ಸೆಳೆದ ಜಿಲ್ಲೆಯಾಗಿರುವ ಹಿನ್ನೆಲೆ ಉದ್ಯಮವನ್ನು ವ್ಯವಸ್ಥಿತಗೊಳಿಸಲು ಸಂಘ ಬದ್ಧವಾಗಿ ಕಾರ್ಯ ನಿರ್ವಹಿಸಲಿದೆ ಎಂದರು.

ಸಂಘದ ಸಲಹೆಗಾರ ಬಿ.ಆರ್. ನಾಗೇಂದ್ರ ಪ್ರಸಾದ್ ಮಾತನಾಡಿ, ಜಿಲ್ಲೆಯಲ್ಲಿ ಸಾವಿರಾರು ಹೋಂಸ್ಟೇ, ನೂರಾರು ಹೊಟೇಲ್, ಲಾಡ್ಜ್ಗಳಿವೆ. ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಸಾವಿರಾರು ಕೋಟಿ ವ್ಯವಹಾರವೂ ನಡೆಯುತ್ತದೆ. ಆದರೆ, ಸುಸ್ಥಿರ ಪ್ರವಾಸೋದ್ಯಮ ಸೃಷ್ಟಿಯಾಗದ ಬೇಸರವಿದ್ದು ಇದನ್ನು ನೀಗಿಸಲು ಸಂಘ ಪ್ರಯತ್ನ ನಡೆಸಲಿದೆ. ಹೊಸ ಜಾಗಗಳನ್ನು ಪರಿಚಯಿಸಿ ಜನರನ್ನು ಆಕರ್ಷಿಸುವ ಕೆಲಸ ನಡೆಯಲಿದೆ. ಏಪ್ರಿಲ್

(ಮೊದಲ ಪುಟದಿಂದ) ತಿಂಗಳಿನಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ವಿಚಾರ ಸಂಕಿರಣ, ಸಮ್ಮೇಳನ ಹಾಗೂ ತರಬೇತಿ ಶಿಬಿರಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದರು.

ಪದಾಧಿಕಾರಿಗಳ ನೇಮಕ

ಸಂಘದ ಅಧ್ಯಕ್ಷರಾಗಿ ದಿನೇಶ್ ಕಾರ್ಯಪ್ಪ, ಕಾರ್ಯದರ್ಶಿ ನಾಸೀರ್ ಅಹಮ್ಮದ್, ಉಪಾಧ್ಯಕ್ಷರುಗಳಾಗಿ ಮಂಜುನಾಥ್, ಜಹೀರ್ ಅಹಮ್ಮದ್, ಬಿ.ಎಸ್. ಸುಂದರ್, ರತೀಶ್, ಖಜಾಂಜಿ ಅಪ್ಪಾರಂಡ ಸಾಗರ್ ಗಣಪತಿ, ಸಹಖಜಾಂಜಿ ಮಂಜುನಾಥ್, ಸದಸ್ಯರಾಗಿ ಶಕ್ತಿಧರ್, ಸಂಜಯ್, ಹರಿಕೃಷ್ಣ, ಜಿಷ್ಣು, ಮುದ್ದಪ್ಪ, ಮುಖ್ಯ ಸಲಹೆಗಾರರಾಗಿ ನಾಗೇಂದ್ರ ಪ್ರಸಾದ್, ಜಿ. ಚಿದ್ವಿಲಾಸ್, ಭಾಸ್ಕರ್, ಮೋಹನ್ ದಾಸ್, ಜೆ.ವಿ. ಕೋಟಿ, ಆಸೀಫ್ ಅವರುಗಳು ನೇಮಕಗೊಂಡಿದ್ದಾರೆ.

ಗೋಷ್ಠಿಯಲ್ಲಿ ಉಪಾಧ್ಯಕ್ಷರುಗಳಾದ ಮಂಜುನಾಥ್, ಜಹೀರ್ ಅಹ್ಮದ್, ಖಜಾಂಜಿ ಸಾಗರ್ ಗಣಪತಿ ಹಾಜರಿದ್ದರು.