ಮಡಿಕೇರಿ, ಮಾ. ೧೧: ನೆಲ್ಲಿಹುದಿಕೇರಿ ನಲ್ವತ್ತೇಕರೆಯ ಶ್ರೀ ಮಹಾದೇವ ಮಾರಿಯಮ್ಮ ಕ್ಷೇತ್ರದ ಪ್ರಥಮ ವರ್ಷದ ವಾರ್ಷಿಕ ಮಹೋತ್ಸವ ಕಾರ್ಯಕ್ರಮ ವಿವಿಧ ಪೂಜಾ ಕೈಂಕರ್ಯಗಳೊAದಿಗೆ ವಿಜೃಂಭಣೆಯಿAದ ನಡೆಯಿತು.

ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ ಅಪಾರ ಸಂಖ್ಯೆಯ ಭಕ್ತರು ಪೂಜೋತ್ಸವದಲ್ಲಿ ಪಾಲ್ಗೊಂಡರು. ಉತ್ಸವದ ಕೊನೆಯ ದಿನದಂದು ಮಹಾಗಣಪತಿ ಹೋಮ, ಮಹಾಪೂಜೆ, ನಂತರ ಚಂಡೆವಾದ್ಯಗಳೊAದಿಗೆ ದೇವರ ಉತ್ಸವ ಮೂರ್ತಿಯನ್ನು ಹೊತ್ತು ಕಾವೇರಿ ನದಿಯಲ್ಲಿ ಜಳಕ ಪೂಜಾ ಕಾರ್ಯಗಳು ನಡೆದ ನಂತರ ಮಹಾದೇವ ಮಾರಿಯಮ್ಮ ಕ್ಷೇತ್ರದವರೆಗೆ ಸ್ಥಳೀಯ ಭಕ್ತಾದಿಗಳು ಕಲಶದೊಂದಿಗೆ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು. ದೇವರ ನೃತ್ಯದ ನಂತರ ಮಹಾಪೂಜೆ ಮತ್ತು ದೇವರಿಗೆ ಮಹಾ ಮಂಗಳಾರತಿಯೊAದಿಗೆ ವಾರ್ಷಿಕೋತ್ಸವ ತೆರೆಕಂಡಿತು. ಜಿಲ್ಲೆಯ ನಾನಾ ಭಾಗದಿಂದ ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣಾ ಕಾರ್ಯ ನಡೆದು ಕ್ಷೇತ್ರದ ತಂತ್ರಿಗಳಾದ ಪುತ್ತೂರಿನ ಬ್ರಹ್ಮಶ್ರೀ ಗಿರೀಶ್ ತಂತ್ರಿಗಳ ನೇತೃತ್ವದಲ್ಲಿ ಪೂಜಾ ಕಾರ್ಯಗಳನ್ನು ನಡೆಸಲಾಯಿತು. ವಾರ್ಷಿಕೋತ್ಸವದ ಅಂಗವಾಗಿ ಕ್ಷೇತ್ರ ತಳಿರು ತೋರಣ ವಿದ್ಯುತ್ ದೀಪ ಹಾಗೂ ಹೂವಿನ ಅಲಂಕಾರಗಳಿAದ ಕಂಗೊಳಿಸುತ್ತಿತ್ತು. ಈ ಸಂದರ್ಭ ಮಹಾದೇವರ ಮಾರಿಯಮ್ಮ ಕ್ಷೇತ್ರದ ಅಧ್ಯಕ್ಷ ವಸಂತ್‌ಕುಮಾರ್ ಹೊಸಮನೆ ಮತ್ತು ಕಾರ್ಯದರ್ಶಿ ಭಾನುಪ್ರಕಾಶ್, ಪ್ರಮುಖರಾದ ಸುರೇಂದ್ರ, ಕೆ.ಎನ್. ವಾಸು ಸೇರಿದಂತೆ ಗ್ರಾಮಸ್ಥರು, ತಕ್ಕ ಮುಖ್ಯಸ್ಥರು, ಭಕ್ತಾದಿಗಳು ಹಾಜರಿದ್ದರು.