ತಾ. ೧೪ ರಂದು ವಾರ್ಷಿಕೋತ್ಸವ

ಹಿಂದೆ ವನವಾಸದಲ್ಲಿದ್ದ ಪಾಂಡವರು ಕರಡ ಗ್ರಾಮದ ಬೆಟ್ಟಸಾಲುಗಳ ನಡುವೆ ನೆಲೆಗೊಳಿಸಿದ ಅಪಾರಶಕ್ತಿ ದೇವನೆಲೆಯಾದ ಮಲೆತಿರಿಕೆ ದೇವಾಲಯದಲ್ಲಿನ ಮಲೆತಂಬ್ರಾನ್ ಎಂಬ ಅಪಾರ ಶಕ್ತಿನೆಲೆ ಈಶ್ವರ ದೇವಾಲಯದÀ ವಾರ್ಷಿಕೋತ್ಸವ ತಾ. ೧೪ ರಂದು ನಡೆಯಲಿದೆ.

“ಮಲೆ” ಎಂದರೆ ಬೆಟ್ಟದ ತಪ್ಪಲು “ತಿರಿಕೆ” ಎಂದರೆ ದೇವನೆಲೆ. ಆದ್ದರಿಂದಲೇ ಈ ನೆಲೆಯನ್ನು ಮಲೆತಿರಿಕೆ ಎಂದೇ ಕರೆಯಲಾಗುತ್ತಿದೆ. ಕೊಡಗಿನಲ್ಲಿ ಎರಡು ಮಲೆತಿರಿಕೆ ದೇವಾಲಯವಿದೆ. ವೀರಾಜಪೇಟೆಯಿಂದ ಸುಮಾರು ೧೫ ಕಿ.ಮೀ. ಕ್ರಮಿಸಿದರೆ ಕರಡ ಗ್ರಾಮದ ಕೊಡಗು-ಕೇರಳಗಡಿ ಭಾಗದಲ್ಲಿರುವ ಚೋಮಕುಂದ್‌ನಲ್ಲಿ ಕೊಡಗಿನ ಕುಲದೇವರು ಸೃಷ್ಟಿಯಾಗುವ ಮೊದಲೇ ಈನೆಲೆಯಲ್ಲಿ ಐದು ಕರಿಕಲ್ಲುಗಳು ಉದ್ಭವವಾಯಿತಂತೆ. ಪಂಚಪಾAಡವರು ಮಾಹಾದೇವರನ್ನು ಪೂಜೆ ಸಲ್ಲಿಸಲು ಈ ಐದು ಲಿಂಗವನ್ನು ಪ್ರತಿಷ್ಠಾಪಿಸಿ ಲಿಂಗಕ್ಕೆ ಅಭಿಷೇಕ ಮಾಡಲು ದೇವನೆಯ ಪಕ್ಕದ ಬಾಣಬಿಟ್ಟ ಜಾಗದಲ್ಲಿ ೫ ಕೆರೆಯನ್ನು ನಿರ್ಮಿಸಿ ಅಭಿಷೇಕ ಮಾಡುತ್ತಿದ್ದ ಬಗ್ಗೆಯೂ ಪ್ರತೀತಿ ಇದೆ. ಹರಕೆಯಾಗಿ ಒಪ್ಪಿಸಿದ ಮಣ್ಣಿನ ಬೇಟೆ ನಾಯಿಯ ರೂಪಗಳು, ಗಂಟೆಗಳು ಈ ದೇವನೆಲೆಯಲ್ಲಿ ಹೇರಳವಾಗಿ ಕಂಡುಬರುತ್ತಿವೆ.

ಹಿನ್ನೆಲೆ: ಟಿಪ್ಪು ಸುಲ್ತಾನ್ ಕೊಡಗಿನ ಹಲವು ದೇವಾಲಯವನ್ನು ನಾಶಪಡಿಸಿ ಕರಡ ಮಲೆತಿರಿಕೆ ದೇವಾಲಯವನ್ನು ನಾಶಪಡಿಸಲು ಮುಂದಾದಾಗ ನೈವೇದ್ಯ ಮಾಡುತ್ತಿದ್ದ ಅರ್ಚಕನಿಗೆ ಸುದ್ದಿ ತಿಳಿದು ಕೈಯಲಿದ್ದ ಮರದ ಸಟ್ಟುಗವನ್ನು ದೇವಾಲಯ ದಿಂದ ಎಸೆದರಂತೆ. ಅದು ಬಿದ್ದ ಜಾಗವನ್ನು ಚಟ್ಟುವಕುಂದ್ ಎಂದು ಕರೆಯಲಾಯಿತು. ಅಲ್ಲಿನ ತರಗೆಲೆಗಳು ಜೇನುನೊಣವಾಗಿ ಬಂದು ಟಿಪ್ಪುವಿನ ಸೈನ್ಯದ ಮೇಲೇರಿ ಓಡಿಸಿದ ಫಲವಾಗಿ ಕೊಕ್ಕಲೆ ಕಡಿಯತ್ ನಾಡೆಂದು ಹೆಸರಾಯಿತಂತೆ. ಟಿಪ್ಪು ಎಸೆದ ಖಡ್ಗವು ದೇವಾಲಯದಲ್ಲಿ ಇಂದು ಸಾಕ್ಷಿಯಾಗಿ ಇತಿಹಾಸ ಸಾರುತ್ತಿದೆ.

ಮತ್ತೊಂದು ಪುರಾತನ ಕಥೆಯಂತೆ ಪೂಜೆಗೆ ತಡವಾಗಿ ಬಂದ ಕೇರಳದ ಕಾಳೆಘಾಟ್ ತಂತ್ರಿ ಅಸಮಾಧಾನಗೊಂಡು ದೇವರನ್ನು ತನ್ನ ಶಂಖದಲ್ಲಿ ಹೊತ್ತೊಯ್ಯುತ್ತಿದ್ದ ಬಗ್ಗೆ ಮತ್ತೊಂದು ಪುರಾಣ ಕಥೆಯು ಇದೆ.

ಮಾರ್ಚ್ ೧ ರಿಂದ ಊರಿನವರು ದೇವರ ಸನ್ನಿಧಿಯಲ್ಲಿ ದೇವತಕ್ಕ ಮುಖ್ಯಸ್ಥರ ಸಮ್ಮುಖದಲ್ಲಿ ಹಬ್ಬಕಟ್ಟು ಬೀಳುವ ಸಂಪ್ರದಾಯವಿದೆ. ಅಂದು ದೇವಾಲಯದ ಶುದ್ಧ ಕಾರ್ಯ, ಕುಯ್ಯಪೊರೆಗೆ ಹುಲ್ಲು ಹಾಕುವುದು, ಕೆರೆಯ ಶದ್ಧೀಕಾರ್ಯ, ಬನಕ್ಕೆ ತೆರಳಿ ಸೊಪ್ಪನ್ನುತಂದು ಚಪ್ಪರ ಹಾಕುವುದು. ಮಲೆತಿರಿಕೆ ಶಾಸ್ತಾವುವನ್ನು ಮಲೆತಂಬ್ರಾನ್ ಎಂದೂ ಜೊತೆಗೆ ಬೆಟ್ಟ ಸಾಲುಗಳಲ್ಲಿರುವ ತುಂಬೆ ಹೂವಿನ ಪ್ರಿಯವಾದರಿಂದ ತುಂಬೆಮಲೆ ದೇವಯ್ಯನೆಂದು ಕರೆಯುತ್ತಾರೆ. ಈ ವಿಶೇಷ ನೆಲೆಯಲ್ಲಿ ಒಂದು ರಾತ್ರಿಯೊಳಗೆ ದೇವಾಲಯ ನಿರ್ಮಾಣ ಆಗಲೇಬೇಕೆಂಬ ನಿಯಮವಾದ್ದರಿಂದ ಅಂದಿನಿAದ ಇಂದಿನವರೆಗೂ ದೇವಾಲಯ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಈ ಬಾರಿ ದೇವಾಲಯದ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ.

ಇಲ್ಲಿನ ಸಂಪ್ರದಾಯದAತೆ ವಾರ್ಷಿಕೋತ್ಸವದ ಮುಂಚಿತವಾಗಿ ತಂದAತಹ ಮಣ್ಣಿನ ಕುಯ್ಯಮಡಿಕೆಯನ್ನು ಉತ್ಸವದ ಬೆಳಗಿನ ಜಾವ ಆ ವರ್ಷದ ಕುಯ್ಯತೆರಿಗೆಯ ಕುಟುಂಬದವರು ಮಡಕೆಯಲ್ಲಿ ದೇವಾಲಯದ ಸಮೀಪ ಕುಯ್ಯಕ್ಕಿಕೂಳ್ (ಅನ್ನ), ಚೆಕ್ಕೆಪಾರ (ಹಲಸಿನ ಹಣ್ಣಿನ ಉಪ್ಪಿನಕಾಯಿ), ಚಪ್ಪಲೆಪುಟ್ಟ್ ಮಾಡಿ ದೇವರ ಸನ್ನಿಧಿಯಲ್ಲಿ ಅರ್ಪಿಸಿದ ನಂತರವೇ ಉತ್ಸವಕ್ಕೆ ಬರುವ ಎಲ್ಲಾ ಭಕ್ತಾದಿಗಳಿಗೆ ನೀಡುವ ಸಂಪ್ರದಾಯ ಇಲ್ಲಿನ ವಿಶೇಷವಾಗಿದೆ. ಹಿಂದೆ ಪಾಂಡವರು ವನವಾಸದಲ್ಲಿದ್ದಾಗ ಈ ದೇವಾಲಯದ ಸಮೀಪವೇ ಅಡುಗೆ ಮಾಡಿ ಭೋಜನ ಮಾಡುತ್ತಿದ್ದ ಬಗ್ಗೆ ಪ್ರತೀತಿ ಇಂದು ನಡೆದು ಬರುತ್ತಿದೆ.

ಮಾ. ೧೪ ರ ಬೆಳಗ್ಗಿನ ಜಾವ ಪಟ್ರಪಂಡ ಕುಟುಂಬದಿAದ ಜೋಡೆತ್ತು ಪೋರಾಟವನ್ನು ದೇವಾಲಯಕ್ಕೆ ಒಪ್ಪಿಸಿದ ನಂತರ ನಾಡಿನವರು ಎತ್ತು ಪೋರಾಟವನ್ನು ದೇವರಿಗೆ ಅರ್ಪಿಸುವರು. ಕರಡದ ಭಗವತಿ ದೇವಾಲಯದಿಂದ ದೇವರ ಭಂಡಾರವನ್ನು ತಂದು ದೇವರ ಸನ್ನಿಧಿಯಲ್ಲಿ ಇಡಲಾಗುವುದು. ಊರಿನ ಹಿರಿಯರು ದುಡಿಕೊಟ್ಟ್ ಹಾಡನ್ನು ಹಾಡುವ ಮೂಲಕ ದೇವರನ್ನು ಕೊಂಡಾಡುವರು.

ಮಧ್ಯಾಹ್ನ ೧೨ ಗಂಟೆಗೆ ವಿಶೇಷ ಅಲಂಕೃತ ದೇವನೆಲೆಯಲ್ಲಿ ವಿಶೇಷ ಮಹಾಪೂಜೆ ನೆರವೇರಿಸುವರು. ಆ ಸಂದರ್ಭದಲ್ಲಿ ಹಲವರಿಗೆ ದೇವರು ಮೈಯಿಗೆ ಬರುವ ಮೂಲಕ ಅನುವಾದ ನೀಡುವರು. ನೆರೆದಿದ್ದ ಊರಿನವರು, ಭಕ್ತಾದಿಗಳು ಹರಕೆ ಭಂಡಾರವನ್ನು ಒಪ್ಪಿಸಿ ತೀರ್ಥ ಪ್ರಸಾದವನ್ನು ಪಡೆಯುವರು. ಎಲ್ಲರಿಗೂ ಪಾಯಸವನ್ನು ನೀಡುವರು. ಸಂಜೆ ಭಂಡಾರದ ಲೆಕ್ಕಾಚಾರ ಮುಗಿದ ನಂತರ ದೇವ ಭಂಡಾರವನ್ನು ಕರಡ ಭಗವತಿ ನೆಲೆಯಲ್ಲಿ ಒಪ್ಪಿಸುವ ಮೂಲಕ ಉತ್ಸವಕ್ಕೆ ತೆರೆ ಎಳೆಯಲಾಗುವುದು. - ಪುತ್ತರಿರ ಕರುಣ್ ಕಾಳಯ್ಯ, ಚೆಟ್ಟಳ್ಳಿ.