ಪೊನ್ನAಪೇಟೆ, ಮಾ. ೧೧: ಪೊನ್ನಂಪೇಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪೊನ್ನಂಪೇಟೆ ಶ್ರೀ ನಂದೀಶ್ವರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಇದೇ ಮೊದಲ ಬಾರಿಗೆ ಪೊನ್ನಂಪೇಟೆ ಮತ್ತು ವೀರಾಜಪೇಟೆ ತಾಲೂಕು ಆಟೋ ಚಾಲಕರು ಹಾಗೂ ಮಾಲೀಕರಿಗಾಗಿ ಆಯೋಜಿಸಲಾಗಿದ್ದ ಎರಡು ದಿನಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಗೋಣಿಕೊಪ್ಪ ಪ್ರಗತಿ ಕ್ರಿಕೆಟರ್ಸ್ ವಿರುದ್ಧ ಜಯ ಸಾಧಿಸುವ ಮೂಲಕ ವೀರಾಜಪೇಟೆ ಸ್ಟೆçÃಂಜರ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. ಗೋಣಿಕೊಪ್ಪ ಪ್ರಗತಿ ಕ್ರಿಕೆಟರ್ಸ್ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಗೋಣಿಕೊಪ್ಪಲು ಪ್ರಗತಿ ಕ್ರಿಕೆಟರ್ಸ್ ನಿಗದಿತ ೪ ಓವರ್‌ಗಳಲ್ಲಿ ೭ ವಿಕೆಟ್ ಕಳೆದುಕೊಂಡು ೪೨ ರನ್‌ಗಳಿಸಿತು. ಗೆಲ್ಲಲು ೪೩ ರನ್‌ಗಳ ಗುರಿ ಬೆನ್ನಟ್ಟಿದ ವೀರಾಜಪೇಟೆ ಸ್ಟೆçÃಂಜರ್ಸ್ ತಂಡ ಕೇವಲ ೩.೩ ಓವರ್‌ಗಳಲ್ಲಿ ಗುರಿ ಮುಟ್ಟುವ ಮೂಲಕ ವಿನ್ನರ್ಸ್ ಟ್ರೋಫಿ ತನ್ನದಾಗಿಸಿಕೊಂಡಿತು. ಗೋಣಿಕೊಪ್ಪ ಪ್ರಗತಿ ಕ್ರಿಕೆಟರ್ಸ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟು ಕೊಂಡರೆ, ಗೋಣಿಕೊಪ್ಪ ಫಿಯರ್ ಲೆಸ್ ಕ್ರಿಕೆಟರ್ಸ್ ತೃತೀಯ ಸ್ಥಾನ ಪಡೆದುಕೊಂಡಿತು.

ಬೆಸ್ಟ್ ಬ್ಯಾಟ್ಸ್ಮನ್ ಆಗಿ ಗೋಣಿಕೊಪ್ಪ ಫಿಯರ್ ಲೆಸ್ ಕ್ರಿಕೆಟರ್ಸ್ನ ಪವನ್ ನಾಯಕ್, ಬೆಸ್ಟ್ ಬೌಲರ್ ಆಗಿ ಪ್ರಗತಿ ಕ್ರಿಕೆಟರ್ಸ್ನ ಗುರು, ಬೆಸ್ಟ್ ಫೀಲ್ಡರ್ ಆಗಿ ಪೊನ್ನಂಪೇಟೆ ಶ್ರೀ ನಂದೀಶ್ವರ ಕ್ರಿಕೆಟರ್ಸ್ನ ಗಣಪತಿ, ಬೆಸ್ಟ್ ಆಲ್ ರೌಂಡರ್ ಆಗಿ ವೀರಾಜಪೇಟೆ ಸ್ಟೆçÃಂಜರ್ಸ್ನ ಜಯಂತ್ ರೈ, ಫೈನಲ್ ಪಂದ್ಯದ ಮ್ಯಾನ್ ಆಫ್ ದಿ ಮ್ಯಾಚ್ ಹಾಗೂ ಮ್ಯಾನ್ ಆಫ್ ದಿ ಸಿರೀಸ್ ಪ್ರಶಸ್ತಿಯನ್ನು ವೀರಾಜಪೇಟೆ ಸ್ಟೆçÃಂಜರ್ಸ್ನ ಭರತ್ ಪಡೆದುಕೊಂಡರು.

ಶ್ರೀ ನಂದೀಶ್ವರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಅಜ್ಜಿಕುಟ್ಟಿರ ಪೊನ್ನಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಪೊನ್ನಂಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೀರಂಡ ಕಂದ ಸುಬ್ಬಯ್ಯ, ದಾನಿಗಳಾದ ಪಟ್ರಂಗಡ ಶ್ರೀಮಂತ್, ಮತ್ರಂಡ ಸುಕು ಬೋಪಣ್ಣ, ಚೊಟ್ಟೆಯಂಡಮಾಡ ಕುಶ, ಕವನ್, ಶ್ರೀ ನಂದೀಶ್ವರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಉಪಾಧ್ಯಕ್ಷ ಚಮ್ಮಟ್ಟಿರ ಶಾಂತ ಪೊನ್ನಪ್ಪ, ಕಾರ್ಯದರ್ಶಿ ಬಿ.ಎಸ್. ಸುರೇಶ್, ಸಹಕಾರ್ಯದರ್ಶಿ ಚೀರಂಡ ಚಂಗಪ್ಪ, ಕ್ರೀಡಾ ಸಂಚಾಲಕ ಪೆಮ್ಮಂಡ ಉಮೇಶ್, ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದು ವಿಜೇತರಿಗೆ ಬಹುಮಾನ ವಿತರಿಸಿದರು.