ವೀರಾಜಪೇಟೆ, ಮಾ. ೧೧: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸ್ವಸಹಾಯ ಸಂಘಗಳ ಒಕ್ಕೂಟಗಳ ಆಶ್ರಯದಲ್ಲಿ ಕೃಷಿ ಕಾರ್ಯಕ್ರಮದಡಿಯಲ್ಲಿ ಕೃಷಿ ನೀರಾವರಿ ಮಾಹಿತಿ ಕಾರ್ಯಕ್ರಮ ವೀರಾಜಪೇಟೆ ವಲಯದ ಬೇಟೋಳಿ ಕಾರ್ಯಕ್ಷೇತ್ರದ ಬಾಳುಗೋಡುವಿನ ಜಯಂತ್ ಕೃಷಿ ತಾಕುವಿನಲ್ಲಿ ನಡೆಯಿತು. ಕೃಷಿ ನೀರಾವರಿ ಕಾರ್ಯ ಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಬೇಟೋಳಿ ಗ್ರಾಮ ಪಂಚಾಯಿತಿ ಕೃಷಿ ಸಖಿ ಎನ್.ಜಿ. ಮುತ್ತಮ್ಮ ಮಾತನಾಡಿ, ಕೃಷಿ ನೀರಾವರಿಯು ಕೃಷಿ ಉತ್ಪಾದನೆ ಯನ್ನು ಹೆಚ್ಚಿಸುವಲ್ಲಿ ಮತ್ತು ಕೃಷಿಕರ ಆದಾಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಾಗಿದೆ. ಕೃಷಿ ನೀರಾವರಿ ವಿಧಗಳು ನೀರು ಚೆಲ್ಲುವ ನೀರಾವರಿ, ಕಾಲುವೆ ನೀರಾವರಿ, ಬೋರ್ ಬಾವಿ ನೀರಾವರಿ, ಸ್ಪಿಂಕ್ಲರ್ ನೀರಾವರಿ, ಬಗ್ಗೆ ಮತ್ತು ಸರಕಾರವು ಕೃಷಿ ನೀರಾವರಿ ಹಲವು ಸೌಲಭ್ಯಗಳನ್ನು ಒದಗಿಸುತ್ತದೆ ಎಂದು ಮಾಹಿತಿ ನೀಡಿದರು.
ಕೃಷಿ ಮೇಲ್ವಿಚಾರಕರಾದ ವಸಂತ್ ಪ್ರಾಸ್ತಾವಿಕ ಮಾತನಾಡಿ ದರು, ಒಕ್ಕೂಟದ ಅಧ್ಯಕ್ಷೆ ಬಿ.ಜೆ. ಪುಷ್ಪವಲ್ಲಿ, ಒಕ್ಕೂಟದ ಉಪಾಧ್ಯಕ್ಷೆ ಪ್ರಪುಲ್ಲಾ, ಪ್ರಗತಿ ಬಂದು ಕೃಷಿಕರಾದ ವೆಂಕಟೇಶ್ ಮತ್ತು ಸುರಂಜನ್, ಸೇವಾ ಪ್ರತಿನಿಧಿಯಾದ ಪುಷ್ಪ, ಸಂಘದ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.