ಮಡಿಕೇರಿ, ಮಾ. ೧೦ : ಕೊಡಗು ಗೌಡ ಯುವ ವೇದಿಕೆ ಆಯೋಜಿಸುತ್ತಿರುª ಉPಐ ಸೀಸನ್ ೩ ಒಕ್ಕಲಿಗರ ಲೆದರ್‌ಬಾಲ್ ಕ್ರೀಡಾಕೂಟಕ್ಕೆ ಆಟಗಾರರ ಹರಾಜು ಪ್ರಕ್ರಿಯೆ ಗೌಡ ಸಮಾಜದ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟಕರಾಗಿ ಕೊಡಗು ಗೌಡ ಸಮಾಜ ಮಡಿಕೇರಿಯ ಕಾರ್ಯದರ್ಶಿ ಕೋಳುಮುಡಿಯನ ಅನಂತಕುಮಾರ್ ಭಾಗವಹಿಸಿದ್ದರು. ಅತಿಥಿಗಳಾಗಿ ಕೊಡಗು ಜಿಲ್ಲಾ ಒಕ್ಕಲಿಗ ಯುವ ವೇದಿಕೆಯ ಅಧ್ಯಕ್ಷರಾದ ಗಿರೀಶ್ ಮಲ್ಲಪ್ಪ, ಕುಶಾಲನಗರ ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ಎಒಎಲ್‌ಇಯ ಜನರಲ್ ಸೆಕ್ರೆಟರಿ ಕುರುಂಜಿ ಅಕ್ಷಯ್ ಚಿದಾನಂದ ಭಾಗವಹಿಸಿದ್ದರು. ಮಡಿಕೇರಿಯ ಯುವ ವಕೀಲರಾದ ಕೊಟ್ಟಕೇರಿಯನ ಶ್ರೀಜಾ ದಯಾನಂದ್ ಗಂಟೆ ಬಾರಿಸುವ ಮೂಲಕ ಬಿಡ್ಡಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದರು.

ಯುವ ವೇದಿಕೆಯ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನವೀನ್ ದೇರಳ ಸ್ವಾಗತಿಸಿ, ಪರಿಚನ ಸತೀಶ್ ವಂದಿಸಿದರು.