ಮಡಿಕೇರಿ, ಮಾ. ೧೦: ಜಿಲ್ಲಾ ತೋಟಗಾರಿಕಾ ಇಲಾಖೆ ಹಾಗೂ ಸಹಕಾರಿ ಸಂಘಗಳ ಉಪನಿಬಂಧಕರ ಇಲಾಖೆಗಳಲ್ಲಿ ಉದ್ಯೋಗಿಯಾಗಿದ್ದು, ನಿವೃತ್ತರಾಗಿದ್ದ ಹೆಚ್.ಪಿ. ಗಂಗಮ್ಮ (೭೭) ಅವರು ತಾ. ೧೦ ರಂದು ರಾತ್ರಿ ನಿಧನರಾದರು. ದಿಢೀರ್ ಅನಾರೋಗ್ಯಕ್ಕೆ ಒಳಗಾದ ಅವರನ್ನು ಕುಶಾಲನಗರದ ನಿವಾಸದಿಂದ ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭ ಆಸ್ಪತ್ರೆ ತಲುಪುವ ಮುನ್ನವೆ ನಿಧನರಾದರು.

ದಿ. ಗಂಗಾಧರಯ್ಯ ಅವರ ಪತ್ನಿಯಾಗಿದ್ದ ಮೃತ ಗಂಗಮ್ಮ ಅವರು ಇಬ್ಬರು ಪುತ್ರರುಗಳಾದ ಮಡಿಕೇರಿಯಲ್ಲಿ ಶಕ್ತಿ ಪತ್ರಿಕೆಯ ಏಜೆನ್ಸಿ ನಿರ್ವಹಿಸುತ್ತಿರುವ ಟಿ.ಜಿ. ಸತೀಶ್ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಪ್ತ ಸಹಾಯಕರಾಗಿರುವ ಟಿ.ಜಿ. ಷಣ್ಮುಖ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಶಕ್ತಿ ಬಳಗ ಸಂತಾಪ ಸೂಚಿಸುತ್ತದೆ. ಅಂತ್ಯಕ್ರಿಯೆ ತಾ. ೧೧ ರಂದು (ಇಂದು) ನಡೆಯಲಿದೆ.