ವೀರಾಜಪೇಟೆ, ಮಾ. ೯: ಇಲ್ಲಿನ ಬಿಲ್ಲವ ಸೇವಾ ಸಂಘ ವತಿಯಿಂದ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬಟ್ಟಿ ಗ್ರಾಮದ ಶ್ರೀ ನಾರಾಯಣ ಗುರು ಮಂದಿರದ ಆವರಣದಲ್ಲಿ ರೂ. ೨ ಕೋಟಿ ೫೦ ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬಿಲ್ಲವ ಕಲ್ಯಾಣ ಮಂಟಪಕ್ಕೆ ಆರ್ಯ ಈಡಿಗ ಮಹಾ ಸಂಸ್ಥಾನ ಶ್ರೀ ರೇಣುಕಾಪೀಠ, ಶ್ರೀ ನಾರಾಯಣ ಗುರುಮಠ ಸೋಲೂರು ಪೀಠಾಧಿಪತಿಗಳಾದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಆಶೀರ್ವಚನ ನೀಡಿದ ಅವರು, ಪ್ರಪಂಚದಲ್ಲಿ ಅನೇಕ ಜಾತಿ, ಧರ್ಮಗಳಿವೆ. ನಾವು ಮಾಡುವ ಪರಿಕರ್ಮದಿಂದ ಸಮಾಜ ಸುಭಿಕ್ಷೆಯ ಮಾರ್ಗದಲ್ಲಿರುತ್ತದೆ. ಜಾಗತಿಕ ಮಟ್ಟದಲ್ಲಿ ಧರ್ಮ ಜಾಗೃತಿಯಾಗಬೇಕು. ಧರ್ಮದ ಉಳಿವಿನೊಂದಿಗೆ ಜನಾಂಗದ ಏಳಿಗೆಯಾಗಬೇಕು. ಸಂಕಲ್ಪದಿAದ ಮಾತ್ರ ನಾವು ಹಮ್ಮಿಕೊಂಡಿರುವ ಕಾರ್ಯಗಳು ಸುಲಲಿತವಾಗಿ ನಡೆಯುತ್ತವೆ. ಜನಾಂಗ ಬಾಂಧವರು ಸಂಘಟಿತರಾಗಿ, ವಿಚಲಿತರಾಗದೆ, ಆರಾಧಿಸುವ ದೇವರುಗಳ ಅನುಗ್ರಹದೊಂದಿಗೆ ಕಟ್ಟಡ ಕಾರ್ಯಗಳು ಸುಗಮವಾಗಲಿ ಎಂದು ಹಾರೈಸಿದರು.
ಬಿಲ್ಲವ ಸೇವಾ ಸಂಘ ವೀರಾಜಪೇಟೆ ತಾಲೂಕು ಅಧ್ಯಕ್ಷ ಬಿ.ಎಂ. ಗಣೇಶ್ ಮಾತನಾಡಿ, ಬಿಲ್ಲವ ಸಮಾಜದ ಏಳಿಗೆಗಾಗಿ ಸಂಘಟಿತ ಮನೋಭಾವದಿಂದ ಸಂಘವು ಹಲವಾರು ಜನಾಂಗ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಸರ್ಕಾರದಿಂದ ಲಭಿಸುವ ಅನುದಾನಗಳ ಬಗ್ಗೆ ಜನಪತ್ರಿನಿಧಿಗಳೊಂದಿಗೆ ಚರ್ಚಿಸಲಾಗುತ್ತಿದೆ. ಎರಡು ವರ್ಷದ ಅವಧಿಯಲ್ಲಿ ಕಲ್ಯಾಣ ಮಂಟಪದ ಕಾಮಗಾರಿ ಪೂರ್ಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಮೊದಲಿಗೆ ಶ್ರೀ ವಿಖ್ಯಾತಾನಂದ ಸ್ವಾಮೀಜಿಗಳಿಗೆ ಜನಾಂಗದ ವತಿಯಿಂದ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಬಳಿಕ ಶ್ರೀಗಳು ಶ್ರೀ ನಾರಾಯಣ ಗುರು ಮಂದಿರದಲ್ಲಿ ಗುರು ನಾರಾಯಣ ಮೂರ್ತಿಗೆ ಮಹಾಮಂಗಳಾರತಿ ಸಲ್ಲಿಸಿದರು. ಸಾಮೂಹಿಕ ಪ್ರಾಥÀðನೆ ನೆರವೇರಿಸಿದರು. ನಂತರದಲ್ಲಿ ಕಲ್ಯಾಣ ಮಂಟಪದ ಶಿಲಾನ್ಯಾಸ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಬಿ.ಎನ್. ರಾಜು, ವೀರಾಜಪೇಟೆ ಉಪ ವಿಭಾಗದ ಡಿವೈಎಸ್ಪಿ ಮಹೇಶ್ ಕುಮಾರ್, ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ವಾಣಿಶ್ರೀ, ಬಿಲ್ಲವ ಸೇವಾ ಸಂಘದ ವೀರಾಜಪೇಟೆ ಸ್ಥಾಪಕ ಅಧ್ಯಕ್ಷ ಸುಬ್ಬಪ್ಪ ಪೂಜಾರಿ, ಗೌರವ ಅಧ್ಯಕ್ಷ ಬಿ.ಆರ್. ರಾಜಾ, ಜಿಲ್ಲಾ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ರಘು ಆನಂದ್, ತಾಲೂಕು ಉಪಾಧ್ಯಕ್ಷ ಬಿ.ಜಿ. ಪುರುಷೋತ್ತಮ, ಕಾರ್ಯದರ್ಶಿ ಜನಾರ್ಧನ, ಸಹ ಕಾರ್ಯದರ್ಶಿ ಮಣಿ ಲಕ್ಷö್ಮಣ್, ಕೋಶಾಧಿಕಾರಿ ಬಿ.ಎಂ. ಸತೀಶ್ ಹಾಗೂ ವೀರಾಜಪೇಟೆ, ಮಡಿಕೇರಿ ಸುಂಟಿಕೊಪ್ಪ, ಸೋಮವಾರಪೇಟೆ ಬಿಲ್ಲವ ಸೇವಾ ಸಂಘದ ಪದಾಧಿಕಾರಿಗಳು, ಸಂಘದ ಆಡಳಿತ ಮಂಡಳಿಯ ಸರ್ವ ಸದಸ್ಯರು, ಜನಾಂಗ ಬಾಂಧವರು ಹಾಜರಿದ್ದರು.