ಮಡಿಕೇರಿ, ಮಾ. ೯: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ. ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು, ಮಡಿಕೇರಿ. ಹಾಗೂ ಶ್ರೀಮತಿ ಸುಲೋಚನಾ ಡಾ ಎಂ.ಜಿ ನಾಗರಾಜ್ ದಂಪತಿ ದತ್ತಿ ಇವರ ಸಂಯುಕ್ತ ಆಶ್ರಯದಲ್ಲಿ ಕೊಡಗು ಜಿಲ್ಲೆಯ ಸಾಹಿತ್ಯ, ಕಲೆ, ಜಾನಪದ, ಪರಿಸರ ಮತ್ತು ಪುರಾತತ್ವ ಕುರಿತ ವಿಚಾರಗೋಷ್ಠಿ,ಕವಿಗೋಷ್ಠಿ ಹಾಗೂ ಸಾಂಸ್ಕöÈತಿಕ ಕಾರ್ಯಕ್ರಮ ಮಡಿಕೇರಿಯ ಎಫ್.ಎಂ.ಸಿ ಕಾಲೇಜು ಸಭಾಂಗಣದಲ್ಲಿ ತಾ. ೧೧ರ ಬೆಳಿಗ್ಗೆ ೧೦.೦೦ ಗಂಟೆಗೆ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಪಿ ಕೇಶವ ಕಾಮತ್ ಅಧ್ಯಕ್ಷರು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವಹಿಸಲಿದ್ದು, ಉದ್ಘಾಟನೆ ಯನ್ನು ಡಾ.ಕೋಡಿರ ಲೋಕೇಶ್, ಮಾಜಿ ಮುಖ್ಯಸ್ಥರು, ಇತಿಹಾಸ ವಿಭಾಗ, ಮಂಗಳೂರು ವಿಶ್ವವಿದ್ಯಾಲಯ ಇವರು ನಡೆಸಿಕೊಡಲಿದ್ದಾರೆ. ಪ್ರಾಸ್ತಾವಿಕ ನುಡಿಯನ್ನು ಟಿ.ಪಿ ರಮೇಶ್ ಮಾಜಿ ಅಧ್ಯಕ್ಷರು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಡಲಿದ್ದಾರೆ.
ಮುಖ್ಯ ಭಾಷಣಕಾರರಾಗಿ ವೀರಾಜಪೇಟೆಯ ಸಂತ ಅನ್ನಮ್ಮ ಪದವಿ ಕಾಲೇಜಿನ ಉಪನ್ಯಾಸಕರಾದ ಪ್ರತಿಮಾ ರೈ ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ. ಎಂ. ಜಿ ನಾಗರಾಜ್, ಸಾಹಿತಿ, ಖ್ಯಾತ ಸಂಶೋಧಕರು ಹಾಗೂ ದತ್ತಿದಾನಿ, ಬೆಂಗಳೂರು, ಮೇ.ಡಾ. ಬಿ ರಾಘವ, ಪ್ರಾಂಶುಪಾಲರು, ಎಫ್.ಎಂ.ಸಿ ಕಾಲೇಜು, ಮಡಿಕೇರಿ. ಡಾ. ಶ್ರೀಧರ್ ಹೆಗಡೆ, ಮುಖ್ಯಸ್ಥರು, ಹಿಂದಿ ವಿಭಾಗ ಸಾಹಿತಿಗಳು, ಎಫ್.ಎಂ.ಸಿ ಕಾಲೇಜು ಮಡಿಕೇರಿ, ಶ್ರೀಮತಿ ಕಡ್ಲೇರ ತುಳಸಿ ಮೋಹನ್, ಅಧ್ಯಕ್ಷರು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಭಾಗವಹಿಸಲಿದ್ದಾರೆ.
ಮಧ್ಯಾಹ್ನ ೧೨ ಗಂಟೆಗೆ ಕೊಡಗಿನ ಜನಪದ ಕಲೆ ದೇವರ ಕಾಡುಗಳು ಮತ್ತು ಪುರಾತತ್ವ ಸಂಸ್ಕöÈತಿ ಕುರಿತು ವಿಚಾರಗೋಷ್ಠಿ ಏರ್ಪಡಿಸಲಾಗಿದ್ದು ಅಧ್ಯಕ್ಷತೆಯನ್ನು ಕೊಡಗು ವಿಶ್ವವಿದ್ಯಾಲಯದ ಕನ್ನಡ ಅದ್ಯಾಪಕ ಡಾ. ಜûಮೀರ್ ಅಹಮದ್ ವಹಿಸಲಿದ್ದಾರೆ. ಕೊಡಗಿನ ಜಾನಪದ ಕಲೆ ಕುರಿತು ಸಾಹಿತಿ, ಪತ್ರಕರ್ತರು ನಿವೃತ್ತ ಪ್ರಾಂಶುಪಾಲ ಡಾ. ಜೆ ಸೋಮಣ್ಣ ಮಾತನಾಡಲಿದ್ದಾರೆ. ಕೊಡಗಿನ ದೇವರ ಕಾಡುಗಳ ಕುರಿತು ಅರಣ್ಯ ಕಾಲೇಜಿನ ಮಾಜಿ ಮುಖ್ಯಸ್ಥ ಡಾಕ್ಟರ್ ಸಿ ಜಿ ಕುಶಾಲಪ್ಪ ಮಾತನಾಡಲಿ ದ್ದಾರೆ. ಕೊಡಗಿನ ಪುರಾತತ್ವ ಸಂಸ್ಕöÈತಿ ಕುರಿತು ಪುರಾತತ್ವ ಇಲಾಖೆಯ ಸಹ ನಿರ್ದೇಶಕರಾದ ರೇಖಾ ಅವರು ಉಪನ್ಯಾಸ ನೀಡಲಿದ್ದಾರೆ.
ಮಧ್ಯಾಹ್ನ ೨ ಗಂಟೆಗೆ ಜಿಲ್ಲೆಯ ಆಯ್ದ ಕವಿಗಳ ಕವಿಗೋಷ್ಠಿಯನ್ನು ಏರ್ಪಡಿಸಲಾಗಿದ್ದು, ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಜಿಲ್ಲೆಯ ಹಿರಿಯ ಸಾಹಿತಿಗಳಾದ ಬಿ.ಎ. ಶಂಷುದ್ದೀನ್ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಆರ್ ಐಶ್ವರ್ಯ ನೆರವೇರಿಸಲಿದ್ದಾರೆ. ಗೋಷ್ಠಿಯ ಆಶಯ ನುಡಿಯನ್ನು ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ನಯನಾ ಕಷ್ಯಪ್ ನಡೆಸಿಕೊಡಲಿದ್ದಾರೆ.
ಕವಿಗೋಷ್ಠಿಯಲ್ಲಿ ಲೀಲಾವತಿ ತೋಡಿಕಾನ, ಶ್ವೇತಾ ರವೀಂದ್ರ, ಡಾ. ಕಾವೇರಿ ಪ್ರಕಾಶ್, ಪುಷ್ಪಲತಾ ಶಿವಪ್ಪ, ವಿಮಲಾ ದಶರಥ್, ರೇವತಿ ರಮೇಶ್, ಕೆ.ಜಿ.ಅರ್ಪಿತಾ, ಗಿರೀಶ್ ಕಿಗ್ಗಾಲು, ಟಾಮಿ ಥೋಮಸ್, ನಾ ಕನ್ನಡಿಗ, ವಿ.ಎಸ್ ವೈಲೇಶ್, ರಂಜಿತ್ ಕವಲಪಾರ ಹಾಗೂ ಜಗದೀಶ್ ಜೋಡುಬೀಟಿ ಭಾಗವಹಿಸಲಿದ್ದಾರೆ.
ಅಪರಾಹ್ನ ೩ ಗಂಟೆಗೆ ಸಮಾರೋಪ ಮತ್ತು ಸಾಂಸ್ಕöÈತಿಕ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಬಿ.ಜಿ.ಅನಂತ ಶಯನ ವಹಿಸಲಿದ್ದಾರೆ. ಸಮಾರೋಪ ಭಾಷಣ ವನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ ಮುನೀರ್ ಅಹ್ಮದ್ ನೆರವೇರಿಸ ಲಿದ್ದಾರೆ. ಮಡಿಕೇರಿಯ ಪೊಲೀಸ್ ವೃತ್ತ ನಿರೀಕ್ಷಕರಾದ ಪಿ.ಕೆ. ರಾಜು ರವರು ಸಾಂಸ್ಕöÈತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಪ್ರಶಂಸನಾ ಪತ್ರ ವಿತರಣೆ ಮಾಡಲಿದ್ದಾರೆ. ನಂತರ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕöÈತಿಕ ಕಾರ್ಯಕ್ರಮ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ ಮುನೀರ್ ಅಹ್ಮದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.