ಚೆಯ್ಯಂಡಾಣೆ, ಮಾ. ೯: ನಾಪೋಕ್ಲು ಸಮೀಪದ ಚೆರಿಯಪರಂಬುವಿನ ಮುಹಿಯುದ್ದೀನ್ ಜುಮಾ ಮಸೀದಿಯ ೨೦೨೫-೨೬ನೇ ಸಾಲಿನ ನೂತನ ಆಡಳಿತ ಮಂಡಳಿಗೆ ಪದಾಧಿಕಾರಿ ಗಳನ್ನು ಇತ್ತೀಚೆಗೆ ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಪಿ.ಎ. ಅಹ್ಮದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಪಿ.ಎಂ. ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿಯಾಗಿ ಪಿ.ಎ. ಸಿರಾಜುದ್ದೀನ್, ಕೋಶಾಧಿಕಾರಿಯಾಗಿ ಬಶೀರ್ ಪಿ.ಹೆಚ್., ಸಹ ಕಾರ್ಯದರ್ಶಿಯಾಗಿ ಆಲಿ ಪಿ.ಎಂ., ಬಿ.ಇ. ಜಾಸಿರ್, ಸಮಿತಿ ಸದಸ್ಯರಾಗಿ ಪಿ.ಎಂ. ಅಶ್ರಫ್, ಹಾಶಿಮ್ ಪಿ.ಎ., ಎನ್.ಎ. ಅಶ್ರಫ್, ಮೊಯ್ದು ಕುಂಞÂ, ಪೀರ್ಸಾಹೆಬ್ ಆಯ್ಕೆಯಾದರು.
ಚೆರಿಯಪರಂಬುವಿನ ಮದರಸ ಸಭಾಂಗಣದಲ್ಲಿ ನಡೆದ ಜಮಾಅತ್ನ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.