ಕೂಡಿಗೆ, ಮಾ. ೯: ಕುಶಾಲನಗರ ಪುರಸಭೆಯ ವ್ಯಾಪ್ತಿಯ ಎಲ್ಲಾ ವಾರ್ಡ್ಗಳಿಗೆ ಹಂತಹAತವಾಗಿ ಕುಡಿಯುವ ನೀರನ್ನು ಶಾಶ್ವತವಾಗಿ ಸರಬರಾಜು ವ್ಯವಸ್ಥೆ ಮಾಡಲು ಬೃಹತ್ ಪೈಪ್‌ಲೈನ್ ಕಾಮಗಾರಿ ಆರಂಭವಾಗಿದೆ. ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರ ಹೊಸ ಚಿಂತನೆಯೊAದಿಗೆ ಕೂಡಿಗೆಯಲ್ಲಿ ಕಾವೇರಿ ಹಾರಂಗಿ ನದಿ ಸಂಗಮವಾಗುವ ಸ್ಥಳದಿಂದ ನೂತನ, ಆಧುನಿಕ ತಂತ್ರಜ್ಞಾನದ ಯಂತ್ರಗಳ ಬಳಕೆ ಮೂಲಕ ನೀರನ್ನು ತೆಗೆದು ಕುಶಾಲನಗರ ಪುರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್ಗಳಿಗೆ ಕುಡಿಯುವ ನೀರನ್ನು ಒದಗಿಸುವ ಯೋಜನೆ ಕಾಮಗಾರಿಯ ಪ್ರಕ್ರಿಯೆಯು ಅಂದಾಜು ರೂ. ೩೦.೮೬ ಕೋಟಿ ವೆಚ್ಚದ ಕಾಮಗಾರಿಯು ಆರಂಭಗೊAಡಿದೆ.

ಕುಶಾಲನಗರ ಪಟ್ಟಣ ವ್ಯಾಪ್ತಿಯ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ಅನೇಕ ವರ್ಷಗಳಿಂದಲೂ ನಗರಕ್ಕೆ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ ಬೇಸಿಗೆ ಸಂದರ್ಭ ಕಾವೇರಿ ನದಿಯ ನೀರು ಕಡಿಮೆಯಾಗಿ ಕುಡಿಯುವ ನೀರಿನ ವ್ಯವಸ್ಥೆ ಭಾರೀ ತೊಂದರೆ ಆಗುತ್ತಿರುವುದನ್ನು ತಪ್ಪಿಸಲು, ಸಾರ್ವಜನಿಕರಿಂದ ಸಂಪೂರ್ಣ ಮಾಹಿತಿ ಅರಿತÀ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹಾರಂಗಿಯಿAದ ಕುಶಾಲನಗರಕ್ಕೆ ಕುಡಿಯುವ ನೀರಿನ ಸರಬರಾಜು ಬಗ್ಗೆ ಅನೇಕ ಸಲಹೆಗಳು ಬಂದರೂ ಸಹ, ಕುಶಾಲನಗರ ಪುರಸಭೆ ವ್ಯಾಪ್ತಿಗೆ ಹತ್ತಿರ ಮತ್ತು ವರ್ಷಪೂರ್ತಿ ನದಿಯಲ್ಲಿ ನೀರು ಇರುವ ಸ್ಥಳವಾಗಿರುವ ಕೂಡಿಗೆಯ ಸಂಗಮದಿAದ ಕುಡಿಯುವ ನೀರಿನ ಸರಬರಾಜು ಮಾಡುವ ವ್ಯವಸ್ಥೆಗೆ ಒತ್ತುಕೊಟ್ಟರು. ಈಗಾಗಲೇ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮೂಲಕ ಸಂಬAಧಿಸಿದ ಜಾಗದ ಪರಿಶೀಲನೆ, ಮತ್ತು ಅದಕ್ಕೆ ಸಂಬAಧಿಸಿದ ಕ್ರಿಯಾ ಯೋಜನೆ ಅಂದಾಜು ಪಟ್ಟಿಯು ರೂ. ೩೦.೮೬. ಕೋಟಿ ವೆಚ್ಚದ ಟೆಂಡರ್ ಸಿದ್ಧವಾಗಿ ಸಂಗಮದಿAದ ಹಾಸನ ಕೂಡಿಗೆ ಹೆದ್ದಾರಿ ಅಂಚಿನಲ್ಲಿ ಬೃಹತ್ ಗಾತ್ರದ ಪೈಪ್ ಲೈನ್ ಅಳವಡಿಕೆ ಕಾಮಗಾರಿ ಆರಂಭಗೊAಡಿದೆ.

ಕುಶಾಲನಗರದ ಜಲಗಾರದ ಶುದ್ಧೀಕರಣ ಕೇಂದ್ರದ ಆವರಣದಲ್ಲಿ ಈಗಾಗಲೇ ೧೦ ಲಕ್ಷ ನೀರು ಸಾಮರ್ಥ್ಯದ ಬೃಹತ್ ಪ್ರಮಾಣದ ಟ್ಯಾಂಕ್ ನಿರ್ಮಾಣ ಕಾರ್ಯವು ಪೂರ್ಣಗೊಂಡಿದ್ದು ಮುಂದಿನ ಹಂತದ ಕಾಮಗಾರಿಯು ಭರದಿಂದ ಸಾಗುತ್ತಿದೆ.

ಅಮೃತ ೨.೦ ಯೋಜನೆಯ ಅಡಿಯಲ್ಲಿ ಶಾಶ್ವತ ಕುಡಿಯುವ ನೀರನ್ನು ಕಲ್ಪಿಸುವ ಯೋಜನೆ ರೂಪಿಸಲಾಗಿದೆ. ಕಾವೇರಿ - ಹಾರಂಗಿ ನದಿ ಸಂಗಮದಿAದ ಕೂಡಿಗೆ, ಕೂಡುಮಂಗಳೂರು, ಕೂಡ್ಲೂರು, ಗುಮ್ಮನಕೊಲ್ಲಿ, ಮುಳ್ಳುಸೋಗೆ ಮಾರ್ಗದ ಮೂಲಕ ಪೈಪ್ ಜೋಡಣೆ ಮೂಲಕ ಬಂದ ಹಾಸನ ಹೆದ್ದಾರಿಯ ಅಡ್ಡಲಾಗಿ ಗುಮ್ಮನಕೊಲ್ಲಿ ಗ್ರಾಮದ ಮೂಲಕ ಕುಶಾಲನಗರದ ಹೃದಯ ಭಾಗದಲ್ಲಿರುವ ಕರ್ನಾಟಕ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಬೃಹತ್ ಟ್ಯಾಂಕ್‌ಗೆ ನೀರನ್ನು ಅಲ್ಲಿಗೆ ಸರಬರಾಜು ಮಾಡಿ ಅದರ ಮೂಲಕ ಉಪ ಪೈಪ್‌ಗಳ ಜೋಡಣೆ ಮೂಲಕ ಪುರಸಭೆಯ ಎಲ್ಲಾ ವಾರ್ಡ್ಗಳಿಗೆ ಸಮರ್ಪಕವಾಗಿ ನೀರನ್ನು ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗುವುದು. ಸಂಬAಧಿಸಿದ ಜನಪ್ರತಿನಿಧಿಗಳು, ಮತ್ತು ಮಂಡಳಿಯ ಅಧಿಕಾರಿ ವರ್ಗದವರು, ಇಂಜಿನಿಯರ್ ವಿಭಾಗದವರು ಮುಂದಾಗಿ ಕುಶಾಲನಗರಕ್ಕೆ ಶಾಶ್ವತ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಗೆ ಮುಂದಾಗಿರುವುದು ಕಂಡುಬರುತ್ತದೆ. ಅದರಂತೆಯೇ ಟೆಂಡರ್ ದಾರನಿಂದ ಕಾಮಗಾರಿಯು ಭರದಿಂದ ನಡೆಯುತ್ತಿದೆ.

ಇದಕ್ಕೆ ಸಂಬAಧಿಸಿದAತೆ ಕರ್ನಾಟಕ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಸವೇಲ್, ಸಹಾಯಕ ಇಂಜಿನಿಯರ್ ಅಭಿಷೇಕ ಕಾಮಗಾರಿಯನ್ನು ಗುಣಮಟ್ಟವನ್ನು ಕಾಪಾಡಿಕೊಂಡು ಮುಂದಿನ ದಿನಗಳಲ್ಲಿ ಎಲ್ಲಾ ವಾರ್ಡ್ಗಳಿಗೆ ಉಪ ಪೈಪ್‌ಗಳ ಜೋಡಣೆ ನೀರು ಸರಬರಾಜು ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ.