ವೀರಾಜಪೇಟೆ, ಮಾ.೯: ವೀರಾಜಪೇಟೆ ನ್ಯಾಯಾಲಯ ಸಮುಚ್ಚಯದಲ್ಲಿ ನಡೆದ ರಾಷ್ಟಿçÃಯ ಲೋಕ್ ಅದಾಲತ್ನಲ್ಲಿ ಒಟ್ಟು ೭೩೪ ಪ್ರಕರಣಗಳನ್ನು ಇತ್ಯರ್ಥಪಡಿಸಲು ಆಯ್ದುಕೊಳ್ಳಲಾಗಿತ್ತು. ಅದರಲ್ಲಿ ೩೪೬ ನ್ಯಾಯಾಲಯದ ಪ್ರಕರಣಗಳು ಇತ್ಯರ್ಥಗೊಂಡಿವೆ. ಹಾಗೂ ಚೆಕ್ ಬೌನ್ಸ್ ೪೬ ಪ್ರಕರಣಗಳಲ್ಲಿ ಒಟ್ಟುಮೊತ್ತ ೭೬,೭೪.೧೧೧ ರೂ, ರಾಜಿ ಸಂದಾನದ ಮೂಲಕ ಸಿವಿಲ್ ಮೊಕದ್ದಮೆಗಳಲ್ಲಿ ೩೭ ಪ್ರಕರಣಗಳು ಇತ್ಯರ್ಥಗೊಂಡಿದೆ.
ಬ್ಯಾAಕ್ ಪೂರ್ವದಾವೆ ಒಟ್ಟು ೧,೧೩೮ ಪ್ರಕರಣಗಳು ರಾಜಿ ಸಂದಾನದ ಮೂಲಕ ಇತ್ಯರ್ಥ ಗೊಂಡಿದ್ದು, ಒಟ್ಟು ಮೊತ್ತ ೩, ೬೨, ೫೯.೬೫೫ ರೂ,ಆಗಿದೆ. ಲೋಕ್ ಅದಾಲತ್ನಲ್ಲಿ ೨ನೇ ಅಪರ ಜಿಲ್ಲಾ ಸತ್ರ ನ್ಯಾಯಾಧೀಶರಾದ ಎಸ್. ಸುಜಾತ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್. ಮಂಜುನಾಥ್, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಂತೋಷ ಕೊಟಾರಿ, ಮತ್ತು ವಕೀಲರಾದ ವಿ.ಎಸ್.ಪ್ರೀತಂ, ಬಿ.ಬಿ.ಮಾದಪ್ಪ, ಅನುಪಮ ಕಿಶೋರ್, ಮತ್ತಿತರರು ಉಪಸ್ಥಿತರಿದ್ದರು.