ಕುಶಾಲನಗರ, ಮಾ. ೯: ಇಲ್ಲಿನ ಬ್ಯಾಡ್ಮಿಂಟನ್ ಅಕಾಡೆಮಿ ವತಿಯಿಂದ ಮಾರ್ನಿಂಗ್ ಪ್ಲೇಯರ್ಸ್ ಆಯೋಜಿಸಿರುವ ಎರಡು ದಿನಗಳ ಅವಧಿಯ ಮಹಾಶಿವರಾತ್ರಿ ಕಪ್ - ೨೦೨೫ ಪಂದ್ಯಾವಳಿಗೆ ಶನಿವಾರ ಪಟ್ಟಣದ ಜಂಪ್ ಸ್ಮಾಶ್ ಒಳಾಂಗಣ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು.

ಕ್ರೀಡೆಗಳಿಂದ ಪರಸ್ಪರ ಸ್ನೇಹ ವಿಶ್ವಾಸ ವೃದ್ಧಿಯಾಗುತ್ತದೆ. ಜೊತೆಗೆ ಉತ್ತಮ ಆರೋಗ್ಯವಂತರಾಗಲೂ ಸಹಕಾರಿಯಾಗುತ್ತದೆ ಎಂದು ಕ್ರೀಡಾಂಗಣದ ಮಾಲೀಕರೂ ಆದ ವಕೀಲ ಶರತ್ ಶುಭ ಕೋರಿದರು.

ಎರಡು ದಿನಗಳ ಅವಧಿ ನಡೆಯುವ ಪಂದ್ಯಾವಳಿಯಲ್ಲಿ ಟೀಂ ಐಬಿ, ಟೀಂ ವಿಶಾಲ್, ಟೀಂ ಗೋಲ್ಡನ್ ರಾಕೆಟ್ಸ್, ಸೂಪರ್ ಮಾಸ್ಟರ್ಸ್, ಗೋಲ್ಡನ್ ರಾಕೆಟರ್ಸ್, ಟೀಂ ಎಇ, ಜಂಪ್ ಸ್ಮಾಶ್, ಟೀಂ ಆಯುಧಿ ಸೇರಿ ೭ ತಂಡಗಳ ಒಟ್ಟು ೭೭ ಆಟಗಾರರು ಶಿವರಾತ್ರಿ ಕಪ್‌ಗಾಗಿ ಸೆಣೆಸಾಡಲಿದ್ದಾರೆ.

ಪಂದ್ಯದಲ್ಲಿ ೧೫ ವರ್ಷದ ಕಿರಿಯ ಆಟಗಾರರಾದ ಪ್ರಣೀತ್ ಹಾಗೂ ಶಯನ್ ಸೋಮಣ್ಣ, ೫೫ ವರ್ಷದ ಹಿರಿಯ ಆಟಗಾರರಾದ ಪಾಣತ್ತಲೆ ಗಿರೀಶ್ ಹಾಗೂ ರಾಜೇಶ್ ಜೋಡಿ ಇರುವುದು ವಿಶೇಷ. ಪಂದ್ಯಾವಳಿಯ ಉದ್ಘಾಟನೆಯಲ್ಲಿ ಪಿಡಿಓ ಲೋಕೇಶ್, ಆಟಗಾರರಾದ ಪ್ರಶಾಂತ್, ಕೆ.ಎಸ್. ಮೂರ್ತಿ, ನವೀನ್, ನಿರಂಜನ್, ಥೋಮಸ್ ಮೊದಲಾದವರಿದ್ದರು.