ಸಿದ್ದಾಪುರ, ಮಾ. ೮: ಐತಿಹಾಸಿಕ ನೆಲ್ಲಿಹುದಿಕೇರಿ ಶ್ರೀ ಸತ್ಯನಾರಾಯಣ ದೇವಾಲಯದ ವಾರ್ಷಿಕೋತ್ಸವ ತಾ. ೧೯ ರಿಂದ ೨೧ ರವರೆಗೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

ತಾ. ೧೯ ರಂದು ಬೆಳಿಗ್ಗೆ ೬.೩೦ಕ್ಕೆ ಗಣಹೋಮ, ಸಂಜೆ ೬.೩೦ಕ್ಕೆ ತಕ್ಕರ ಮನೆಯಿಂದ ಭಂಡಾರ ಇಳಿಸುವುದು, ೭ ಗಂಟೆಗೆ ಶುದ್ಧ ಕಲಶ, ದೇವರ ಬಲಿ, ಮಹಾಪೂಜೆ ನಡೆಯಲಿದೆ.

ತಾ. ೨೦ ರಂದು ಬೆಳಿಗ್ಗೆ ೬.೩೦ ಕ್ಕೆ ಇರುಬೆಳಕು, ೧೦.೩೦ಕ್ಕೆ ಸಾಮೂಹಿಕ ಆಶ್ಲೇಷ ಬಲಿ, ೧೨.೩೦ ಕ್ಕೆ ಮಹಾಪೂಜೆ, ಸಂಜೆ ೫ ಗಂಟೆಗೆ ಶ್ರೀ ಪೋದಮ್ಮ ದೇವಸ್ಥಾನದಲ್ಲಿ ಅಕ್ಕಿಹೇರುವುದು, ಮಹಾಪೂಜೆ, ನೆರುಪು ಬಲಿ, ಮಹಾಪೂಜೆ ನಡೆಯಲಿದೆ.

ತಾ. ೨೧ ರಂದು ೮.೩೦ಕ್ಕೆ ಸಾನಿದ್ಯ ಕಲಶ, ೯.೩೦ಕ್ಕೆ ಸಾಮೂಹಿಕ ಸತ್ಯನಾರಾಯಣ ಪೂಜೆ, ೧.೩೦ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ೩.೩೦ಕ್ಕೆ ತೆಂಗಿನಕಾಯಿಗೆ ಗುಂಡು ಹೊಡೆಯುವುದು, ೪.೩೦ಕ್ಕೆ ಪೋದಮ್ಮ ದೇವಸ್ಥಾನದಲ್ಲಿ ವಸಂತಪೂಜೆ, ೭.೩೦ಕ್ಕೆ ಬಟ್ಟಲು ಕಾಣಿಕೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ತಾ. ೨೨ ರಂದು ಶುದ್ಧ ಕಲಶ, ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.