ಮಡಿಕೇರಿ, ಮಾ. ೮: ಕೋದಂಡ ರಾಮ ದೇವಾಲಯದಲ್ಲಿ ೩೫ನೇ ವರ್ಷದ ರಾಮೋತ್ಸವವನ್ನು ವಿಜೃಂಭಣೆಯಿAದ ನಡೆಸುವ ಪ್ರಯುಕ್ತ ರಾಮೋತ್ಸವ ಮಹಿಳಾ ಸಮಿತಿಯಿಂದ ಸಭೆ ನಡೆಯಿತು.
ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮುಖಾಂತರ ಸಭೆ ಆರಂಭಿಸಲಾಯಿತು. ಸಭೆಯ ಅಧ್ಯಕ್ಷತೆ ಭಾರತಿ ರಮೇಶ್ ವಹಿಸಿಕೊಂಡು ರಾಮೋತ್ಸವದಲ್ಲಿ ಮಹಿಳಾ ಸಮಿತಿಯ ಪಾತ್ರದ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ಮಾತನಾಡಿದ ಉದ್ಯಮಿ ಜಯಂತಿ ಶೆಟ್ಟಿ, ರಾಮೋತ್ಸವ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ಕಡೆಯಿಂದಲೂ ಮಹಿಳೆಯರು ಬರಬೇಕು, ಮಡಿಕೇರಿಯ ಕೋದಂಡ ರಾಮ ದೇವಾಲಯದಲ್ಲಿ ಈ ರಾಮೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು ಜಾತಿಗಳನ್ನು ಮೀರಿ ನಡೆಯುತ್ತಿದೆ. ಇಲ್ಲಿ ಎಲ್ಲರೂ ಸಮಾನರು ಎಂದರು.
ರಾಮೋತ್ಸವ ಸಮಿತಿಯ ಅಧ್ಯಕ್ಷ ಕೆ.ಎಂ. ಗಣೇಶ್, ಈ ಉತ್ಸವ ಸಂಪೂರ್ಣವಾಗಿ ಯಶಸ್ವಿಯಾಗಬೇಕು. ಯಶಸ್ವಿಯಾಗಲು ಮಹಿಳಾ ಸಮಿತಿಯ ಪಾತ್ರ ಬಹಳಾ ಮುಖ್ಯವಾಗಿರುತ್ತದೆ. ಪ್ರತಿಯೊಂದು ಹಂತದಲ್ಲೂ ಮಹಿಳೆಯರ ಪ್ರಾತಿನಿದ್ಯ ನಮಗೆ ಶಕ್ತಿ ನೀಡುತ್ತದೆ ಎಂದರು ಹಾಗೂ ಉತ್ಸವದ ಸಂಪೂರ್ಣ ತಯಾರಿಯ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರಾಮೋತ್ಸವ ಸಮಿತಿಯ ಮಹಿಳಾ ಸಮಿತಿಯ ಉಪಾಧ್ಯಕ್ಷೆ ರಾಧಾರವಿ, ರಾಣಿ ಗಣಪತಿ, ಕೋದಂಡರಾಮ ದೇವಾಲಯದ ಭಜನಾ ತಂಡದ ಅಧ್ಯಕ್ಷೆ ವಿಶಾಲಾಕ್ಷಿ, ಮಹಿಳಾ ಸಮಿತಿಯ ಗೌರವ ಅಧ್ಯಕ್ಷೆ ಶೇಷಮ್ಮ ವೆಂಕಟೇಶ್, ಅನಿತಾ ತಿಮ್ಮಯ್ಯ, ಹೇಮಾವತಿ ಸುರೇಂದ್ರ, ನಿಶಾ ಮೋಹನ್, ಕಾರ್ಯದರ್ಶಿ ಹನುಮಕ್ಕ ರಮೇಶ್, ನಗರಸಭಾ ಸದಸ್ಯೆ ಕಲಾವತಿ, ರಾಮೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಬೊಳ್ಳಜಿರ ಬಿ. ಅಯ್ಯಪ್ಪ, ಸಹಕಾರ್ಯದರ್ಶಿ ಚಂದನ್ ನಂದರಬೆಟ್ಟು, ಮಹಿಳಾ ಘಟಕದ ಪ್ರಮುಖರು ಭಾಗವಹಿಸಿದ್ದರು.