*ಗೋಣಿಕೊಪ್ಪ, ಮಾ. ೭: ಕುಂದ-ಈಚೂರು ಗ್ರಾಮದಲ್ಲಿ ವಾಸವಿದ್ದ ವೈ.ಎಂ. ಲಕ್ಷö್ಮಣ (೩೫) ನಾಪತ್ತೆಯಾಗಿದ್ದಾರೆ. ಸುಮಾರು ೫ ಅಡಿ ಎತ್ತರ ಇರುವ ಇವರು ಯರವ, ಕನ್ನಡ, ಕೊಡವ ಭಾಷೆ ಮಾತನಾಡುತ್ತಾರೆ. ಫೆಬ್ರವರಿ ೨೪ ರಂದು ತಂಗಿಯನ್ನು ನೋಡಿಕೊಂಡು ಬರುವುದಾಗಿ ಹೋದವರು ಹಿಂತಿರುಗಿ ಬಂದಿಲ್ಲ ಎಂದು ತಂದೆ ವೈ.ಸಿ. ಮುತ್ತ ದೂರು ದಾಖಲಿಸಿದ್ದಾರೆ. ಕಂಡು ಬಂದಲ್ಲಿ ೯೪೮೦೮೦೪೯೩೫ ಸಂಖ್ಯೆಗೆ ಮಾಹಿತಿ ನೀಡುವಂತೆ ಗೋಣಿಕೊಪ್ಪ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.