(ಕಾಯಪಂಡ ಶಶಿ ಸೋಮಯ್ಯ)

ಮಡಿಕೇರಿ, ಮಾ. ೮ : ಕೊಡವ ಕೌಟುಂಬಿಕ ಹಾಕಿ ಉತ್ಸವಕ್ಕೆ ದಿನಗಣನೆ ಆರಂಭಗೊAಡಿದೆ. ಬೆಳ್ಳಿಹಬ್ಬ ಸಂಭ್ರಮದ ಈ ಬಾರಿಯ ಹಾಕಿ ನಮ್ಮೆ ಮಾರ್ಚ್ ೨೮ ರಿಂದ ಪ್ರಾರಂಭಗೊಳ್ಳಲಿದ್ದು, ಇನ್ನೇನು ಕೆಲವು ದಿನಗಳಷ್ಟೇ ಬಾಕಿ ಉಳಿದಿದೆ. ಕೊಡಗು ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ಕೌಟುಂಬಿಕ ಹಾಕಿ ಪಂದ್ಯಾವಳಿ ಮೂರನೇ ಬಾರಿಗೆ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಹಾಕಿ ಕಲರವ ಶುರುವಾಗಲಿದೆ. ೨೦೦೫ರಲ್ಲಿ ನಡೆದ ಬಿದ್ದಂಡ ಕಪ್ ಹಾಗೂ ೨೦೧೬ರ ಶಾಂತೆಯAಡ ಕಪ್‌ನ ಬಳಿಕ ಇದೀಗ ಬೆಳ್ಳಿಹಬ್ಬ ಸಂಭ್ರಮದ ವರ್ಷದಲ್ಲಿ ಮುದ್ದಂಡ ಕಪ್ ಹಾಕಿ ನಮ್ಮೆ ಜರುಗಲಿದ್ದು ಆಯೋಜಕರು ಬಿರುಸಿನ ಸಿದ್ಧತೆ ಯಲ್ಲಿ ತೊಡಗಿಸಿ ಕೊಂಡಿದ್ದಾರೆ.

ಮಾರ್ಚ್ ೫ರಂದು ಭೂಮಿ ಪೂಜೆಯೊಂದಿಗೆ ಮೈದಾನದ ಕೆಲಸ ಹಾಗೂ ಗ್ಯಾಲರಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡ ಲಾಗಿದೆ. ಫೀ.ಮಾ. ಕಾರ್ಯಪ್ಪ ಕಾಲೇಜಿನ ಎರಡು ಮೈದಾನ ಹಾಗೂ ಜಿಲ್ಲಾ ಪೊಲೀಸ್ ಮೈದಾನ ಸೇರಿ ಒಟ್ಟು ಮೂರು ಮೈದಾನಗಳಲ್ಲಿ ಪಂದ್ಯಾವಳಿ ಜರುಗಲಿದೆ. ಇದೀಗ ಕಾರ್ಯಪ್ಪ ಕಾಲೇಜು ಆವರಣದಲ್ಲಿ ಎರಡು ಮೈದಾನಗಳನ್ನು ಸಮತಟ್ಟುಗೊಳಿಸುವುದರೊಂದಿಗೆ ಹಾಕಿ ಅಂಕಣವಾಗಿ ಸಜ್ಜುಗೊಳಿಸುವ ಕಾರ್ಯ ಹಾಗೂ ಅಂದಾಜು ೨೫ ಸಾವಿರಕ್ಕೂ ಅಧಿಕ ಮಂದಿ ಕುಳಿತು ಪಂದ್ಯಾವಳಿ ವೀಕ್ಷಿಸಲು ಅನುಕೂಲವಾಗುವಂತೆ ಮುಖ್ಯ ಮೈದಾನದ ಸುತ್ತಲೂ ೧೧ ಮೆಟ್ಟಿಲಿನ ಗ್ಯಾಲರಿ, ವಿ.ಐ.ಪಿ. ಗ್ಯಾಲರಿ ತಲೆಎತ್ತಲಿದೆ. ಪುಚ್ಚಿಮಾಡ ಚಂಗಪ್ಪ ಉಸ್ತುವಾರಿಯಲ್ಲಿ ಗ್ಯಾಲರಿ ನಿರ್ಮಾಣ ಕೆಲಸ ಸಾಗುತ್ತಿದೆ.

ಟಾಟಾ ಕಾಫಿ ಸಂಸ್ಥೆಯ ಸಹಕಾರದಲ್ಲಿ ರಾಜು ಉಸ್ತುವಾರಿಯಲ್ಲಿ ಮೈದಾನ ಸಜ್ಜುಗೊಳ್ಳುತ್ತಿದೆ. ಈ ಕೆಲಸಕ್ಕೆ ಟಾಟಾ ಕಾಫಿ ಸಂಸ್ಥೆ ರೋಲರ್, ವಾಟರ್ ಟ್ಯಾಂಕರ್ ಸೇರಿದಂತೆ ೮ ಕಾರ್ಮಿಕರನ್ನು ವ್ಯವಸ್ಥೆ ಮಾಡಿಕೊಟ್ಟಿದೆ. ರಾಷ್ಟಿçÃಯ ಹಾಕಿ ತೀರ್ಪುಗಾರ ಅಪ್ಪಚೆಟ್ಟೋಳಂಡ ಅಯ್ಯಪ್ಪ ಪಂದ್ಯಕ್ಕೆ ಮೈದಾನದ ಅಂಕಣವನ್ನು ಅಂತಿಮಪಡಿಸಲಿದ್ದಾರೆ.

(ಮೊದಲ ಪುಟದಿಂದ)

ಮಾರ್ಕಿAಗ್ : ಮೈದಾನ ಸಿದ್ಧತೆ ಹಾಗೂ ಇತರ ಅಗತ್ಯತೆಗಾಗಿ ಸ್ಥಳೀಯ ವ್ಯಾಪ್ತಿಯ ಯಾಲದಾಳು ಗಣಪತಿ, ಬಾಳೆಯಡ ಮೀನಕುಮಾರಿ ಅವರುಗಳು ನೀರಿನ ವ್ಯವಸ್ಥೆ ಕಲ್ಪಿಸಲು ಸಹಕರಿಸುತ್ತಿದ್ದಾರೆ.

೨ ಸಾವಿರ ವಾಹನ ನಿಲುಗಡೆಗೆ ವ್ಯವಸ್ಥೆ

ಮೈದಾನದ ಸುತ್ತಲೂ ಹಾಗೂ ಆಸುಪಾಸಿನಲ್ಲಿ ಸುಮಾರು ೨ ಸಾವಿರ ವಾಹನಗಳ ನಿಲುಗಡೆಗೆ ಮುದ್ದಂಡ ಕಪ್ ಆಯೋಜಕರು ಹಲವರ ಸಹಕಾರದೊಂದಿಗೆ ವ್ಯವಸ್ಥೆ ಮಾಡುತ್ತಿದ್ದಾರೆ. ಕಾಲೇಜಿನ ಆವರಣದೊಂದಿಗೆ ಸನಿಹದಲ್ಲಿ ಜಾಗ ಹೊಂದಿರುವ ಯಾಲದಾಳು ಮನೋಜ್ ಬೋಪಯ್ಯ ಅವರಿಗೆ ಸೇರಿದ ಸ್ಥಳದಲ್ಲಿ ೫೦೦ ರಿಂದ ೬೦೦ ಆಸುಪಾಸಿನಲ್ಲಿ ಸುಮಾರು ೨ ಸಾವಿರ ವಾಹನಗಳ ನಿಲುಗಡೆಗೆ ಮುದ್ದಂಡ ಕಪ್ ಆಯೋಜಕರು ಹಲವರ ಸಹಕಾರದೊಂದಿಗೆ ವ್ಯವಸ್ಥೆ ಮಾಡುತ್ತಿದ್ದಾರೆ. ಕಾಲೇಜಿನ ಆವರಣದೊಂದಿಗೆ ಸನಿಹದಲ್ಲಿ ಜಾಗ ಹೊಂದಿರುವ ಯಾಲದಾಳು ಮನೋಜ್ ಬೋಪಯ್ಯ ಅವರಿಗೆ ಸೇರಿದ ಸ್ಥಳದಲ್ಲಿ ೫೦೦ ರಿಂದ ೬೦೦ ವಾಹನ, ಬಿದ್ದಂಡ ದಿಲೀಪ್ ನಾಚಪ್ಪ ಅವರ ಸ್ಥಳದಲ್ಲೂ ೫೦೦ ರಿಂದ ೬೦೦ ವಾಹನಗಳನ್ನು ನಿಲುಗಡೆ ಮಾಡಬಹುದಾದ ರೀತಿಯಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಸಿದ್ಧತೆ ನಡೆದಿದೆ. ಮಾರ್ಚ್ ೨೦ರ ವೇಳೆಗೆ ಗ್ಯಾಲರಿ ಪೂರ್ಣಗೊಳ್ಳಲಿದೆ ಎಂದು ಮುದ್ದಂಡ ಕುಟುಂಬಸ್ಥರಾದ ಡೀನ್ ಬೋಪಣ್ಣ, ರಾಯ್ ತಮ್ಮಯ್ಯ, ಚಂಗಪ್ಪ ಅವರುಗಳು ಸ್ಥಳಕ್ಕೆ ತೆರಳಿದ್ದ ‘ಶಕ್ತಿ’ ಪ್ರತಿನಿಧಿಯೊಂದಿಗೆ ವಿವರಿಸಿದರು.

ಮಾರ್ಚ್ ೨೫ ರಿಂದ ಒಲಂಪಿಕ್ ಟಾರ್ಚ್ ಮಾದರಿ ಜ್ಯೋತಿ

೨೫ನೆಯ ವರ್ಷದ ಹಾಕಿ ಉತ್ಸವದ ಹಿನ್ನೆಲೆ ಈ ಬಾರಿ ಮುದ್ದಂಡ ಕುಟುಂಬಸ್ಥರು ಒಲಂಪಿಕ್ ಕ್ರೀಡಾಜ್ಯೋತಿ ಮಾದರಿಯಲ್ಲಿ ಈತನಕ ಉತ್ಸವ ಆಯೋಜಿಸಿರುವ ಕುಟುಂಬದ ಸ್ಥಳಕ್ಕೆ ಕ್ರೀಡಾಜ್ಯೋತಿ ಕೊಂಡೊಯ್ಯಲಿದ್ದಾರೆ.

ಮಾರ್ಚ್ ೨೫ರಂದು ಕರಡದ ಪಾಂಡAಡ ಕುಟುಂಬದ ಐನ್‌ಮನೆಗೆ ವಾಲಗ, ದುಡಿಕೊಟ್ಟ್ ಪಾಟ್ ಸಹಿತವಾಗಿ ತೆರಳಿ ಅಲ್ಲಿ ಕುಟುಂಬಸ್ಥರ ಸ್ವಾಗತದೊಂದಿಗೆ ಈ ಕ್ರೀಡಾಜ್ಯೋತಿ ಹೊರಡಲಿದೆ. ನಂತರ ಈತನಕ ಉತ್ಸವ ಆಯೋಜಿಸಿರುವ ಎಲ್ಲಾ ಕುಟುಂಬದ ಸ್ಥಳಗಳಿಗೂ ಜ್ಯೋತಿಯೊಂದಿಗೆ ತೆರಳಲಾಗುವುದು. ಅಂತಿಮವಾಗಿ ಈ ಹಿಂದೆ ಮಡಿಕೇರಿ ಸನಿಹದಲ್ಲಿರುವ ಆಯೋಜಕ ಕುಟುಂಬದಲ್ಲಿ ಒಂದಾದ ಶಾಂತೆಯAಡ ಕುಟುಂಬದ ಸ್ಥಳಕ್ಕೆ ತೆರಳಲಾಗುವುದು. ಉತ್ಸವ ಆರಂಭದ ದಿನವಾದ ಮಾರ್ಚ್ ೨೮ರಂದು ಈ ಕ್ರೀಡಾಜ್ಯೋತಿ ಅಲ್ಲಿಂದ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತಕ್ಕೆ ಆಗಮಿಸಲಿದೆ. ಅಲ್ಲಿಂದ ಒಡ್ಡೋಲಗ, ದುಡಿಕೊಟ್ಟ್ ಪಾಟ್, ತಳಿಯತಕ್ಕಿ ಬೊಳ್‌ಚ ಸಹಿತವಾಗಿ ಕೊಡವ ಸಂಪ್ರದಾಯವನ್ನು ಪ್ರತಿಬಿಂಬಿಸುವ ಮಾದರಿಯಲ್ಲಿ ಕಾರ್ಯಪ್ಪ ಕಾಲೇಜು ಮೈದಾನದತ್ತ ಸಾಂಪ್ರದಾಯಿಕ ಮೆರವಣಿಗೆ ನಡೆಸಲು ಉದ್ದೇಶಿಸಲಾಗಿದೆ. ಅಲ್ಲಿ ಈ ತನಕ ಉತ್ಸವ ನಡೆಸಿರುವ ಇನ್ನಿತರ ಕುಟುಂಬದೊAದಿಗೆ ಸೇರಿ ಆಗಸಕ್ಕೆ ಗುಂಡು ಹಾರಿಸುವುದು, ಬಾಳೆ ಮರ್ಯಾದಿ ಮತ್ತಿತರ ರಂಗುರAಗಿನ ಹಲವು ವೈವಿಧ್ಯಮಯ ಕಾರ್ಯಕ್ರಮ ಪ್ರತಿಷ್ಠಿತ ತಂಡಗಳ ನಡುವೆ ಪ್ರದರ್ಶನ ಪಂದ್ಯ, ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಹಾಕಿ ಉತ್ಸವ ಶುಭಾರಂಭಗೊಳ್ಳಲಿದೆ ಎಂದು ಆಯೋಜಕರು ಮಾಹಿತಿ ನೀಡಿದರು.