ಕಣಿವೆ, ಮಾ. ೮: ದಿನೇ ದಿನೇ ಬಿಸಿಲ ಕಾವು ಏರುತ್ತಲೇ ಇದೆ. ಪರಿಣಾಮ ಜೀವನದಿ ಕಾವೇರಿಯಲ್ಲಿ ನೀರಿನ ಹರಿವು ಕ್ಷೀಣವಾಗಿದೆ. ಇನ್ನು ಒಂದು ವಾರದಲ್ಲಿ ಮಳೆ ಬರಲಿಲ್ಲವಾದರೆ ನದಿಯ ನೀರು ಸಂಪೂರ್ಣ ಬತ್ತಿಹೋಗುವ ಸಾಧ್ಯತೆಯಿದೆ.

ಈಗಾಗಲೇ ನದಿಯಲ್ಲಿ ನೀರಿಲ್ಲದೇ ಕೇವಲ ಕಲ್ಲು ಬಂಡೆಗಳೇ ಕಾಣ ಸಿಗುವ ನದಿಯಂಗಳದಲ್ಲಿ ಅಂದರೆ ನದಿಯ ಮಧ್ಯಭಾಗಕ್ಕೆ ಮಾಂಸ ಹಾಗೂ ಮದ್ಯದ ಬಾಟಲಿ ಗಳೊಂದಿಗೆ ಧಾವಿಸುವ ಮೋಜು ಮಸ್ತಿಗಾರರ ದಂಡು ಅಲ್ಲಿಯೇ ಮಾಂಸ ಬೇಯಿಸಿ ಮದ್ಯಪಾನ ಮಾಡುತ್ತಾ ಮೋಜು ಮಾಡುತ್ತಿರುವ ಚಿತ್ರಣ ನದಿಯ ತೀರದುದ್ದಕ್ಕೂ ಕಾಣಸಿಗುತ್ತಿದೆ.

ಸರ್ಕಾರಿ ಪಾಲಿಟೆಕ್ನಿಕ್ ಮುಂಬದಿ ಹಾಗೂ ಕಾವೇರಿ ನಿಸರ್ಗಧಾಮದ ಆಸುಪಾಸಿನ ಕಾವೇರಿ ನದಿಯೊಳಗೆ ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು, ಪ್ಯಾಕೆಟ್ ಗಳು, ಮಾಂಸ ಬೇಯಿಸಿ ತಿಂದು ಬಿಸಾಕಿ ರುವ ತ್ಯಾಜ್ಯಗಳ ರಾಶಿಯೇ ಕಂಡು ಬರುತ್ತಿದೆ. ಜೀವಕೋಟಿ ಗಳನ್ನು ಸಲಹುವ ಕಾವೇರಿ ನದಿಯನ್ನು ತಾಯಿಯಾಗಿ ಮತ್ತು ನದಿಯ ನೀರನ್ನು ಪವಿತ್ರವಾಗಿ ನಾವು ಪೂಜಿಸುತ್ತಿರುವಾಗ ಇಂತಹ ಅಜ್ಞಾನಿಗಳು ನದಿಯನ್ನು ದುರ್ಬಳಕೆ ಮಾಡುತ್ತಾ, ನದಿಯ ಸುಂದರ ಪರಿಸರವನ್ನು ಹಾಳುಮಾಡುತ್ತಿರುವ ಬಗ್ಗೆ ಸಂಬAಧಿಸಿದವರು ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.

- ಕೆ.ಎಸ್. ಮೂರ್ತಿ