ಶನಿವಾರಸಂತೆ, ಮಾ. ೮: ಸಮೀಪದ ದುಂಡಳ್ಳಿ ಗ್ರಾಮದಲ್ಲಿ ಶ್ರೀಲಕ್ಷಿö್ಮ ವೆಂಕಟೇಶ್ವರ ದೇವಾಲಯ ಸಮಿತಿ ಹಾಗೂ ಗ್ರಾಮಸ್ಥರು ಶಾಸಕ ಡಾ.ಮಂತರ್ ಗೌಡ ಅವರಿಗೆ ಸನ್ಮಾನ ಕಾರ್ಯ ಕ್ರಮವನ್ನು ಹಮ್ಮಿ ಕೊಂಡಿದ್ದರು.

ಶಾಸಕರನ್ನು ಸನ್ಮಾನಿಸಿದ ಬಳಿಕ ಗ್ರಾಮಸ್ಥರು ಶಾಸಕರಿಗೆ ಮನವಿಯನ್ನು ಸಲ್ಲಿಸಿ, ಗ್ರಾಮದಲ್ಲಿ ನಿರ್ಮಾಣ ಮಾಡುತ್ತಿರುವ ಶ್ರೀಲಕ್ಷಿö್ಮÃ ವೆಂಕಟೇಶ್ವರ ದೇವಾಲಯಕ್ಕೆ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸುವಂತೆ ಕೋರಿದರು.

ಈ ಸಂದರ್ಭ ಶಾಸಕರು ಮಾತನಾಡಿ, ಗ್ರಾಮದಲ್ಲೊಂದು ದೇವಾಲಯವಿದ್ದರೆ ಗ್ರಾಮಕ್ಕೆ ಶೋಭೆ.ಗ್ರಾಮಸ್ಥರು ಒಗ್ಗಟ್ಟಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಲು ಸಹಕಾರಿಯಾಗುತ್ತದೆ.ಈ ದೇವಾಲಯ ಮುಜರಾಯಿ ಇಲಾಖೆಗೆ ಒಳಪಡುವುದಿಲ್ಲ. ಆದ್ದರಿಂದ ಕ್ರಿಯಾ ಯೋಜನೆ ಸಿದ್ಧಪಡಿಸಿ,ಮುಜರಾಯಿ ಇಲಾಖೆಗೆ ಅರ್ಜಿ ನೀಡಬೇಕು. ಶಾಸಕರ ನಿಧಿಗೆ ಅನುದಾನ ಬಂದಲ್ಲಿ ಹಂಚಿಕೆಯಾಗುತ್ತದೆ ಎಂದು ಹೇಳಿದರು.