ಮಡಿಕೇರಿ, ಮಾ. ೭ : ಕೊಡಗು ವಿ.ವಿ.ಯನ್ನು ರದ್ದುಪಡಿಸಲು ಹೊರಟಿರುವುದು, ಪರಿಶಿಷ್ಟ ಜಾತಿ ಮತ್ತು ಪಂಗಡದ ಹಣ ದುರುಪಯೋಗ, ಸಿ ಮತ್ತು ಡಿ ಜಾಗವನ್ನು ಅರಣ್ಯೀಕರಣ ಮಾಡಲು ಹೊರಡಿಸಿರುವುದು, ಮುಡಾ ಹಗರಣ, ಅಲ್ಪಸಂಖ್ಯಾತರ ಒಲೈಕೆಗಾಗಿ ಯೋಜನೆಗಳನ್ನು ಜಾರಿಗೊಳಿಸುತ್ತಿರುವುದು, ಹಿಂದೂ ಧಮನಕಾರಿ ನೀತಿಗಳ ವಿರುದ್ಧದ ಕಾಂಗ್ರೆಸ್ ಸರಕಾರದ ಧೋರಣೆಯನ್ನು ಖಂಡಿಸಿ ಬಿಜೆಪಿಯವರು ಕಾಂಗ್ರೆಸ್ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ವತಿಯಿಂದ ಇಲ್ಲಿನ ಹಳೆ ಖಾಸಗಿ ಬಸ್ ನಿಲ್ದಾಣದಲ್ಲಿ ನಿನ್ನೆಯಿಂದ ಹಮ್ಮಿಕೊಳ್ಳಲಾಗಿದ್ದ ಅಹೋರಾತ್ರಿ ಧರಣಿಯಲ್ಲಿಂದು ಪಾಲ್ಗೊಂಡು ಮಾತನಾಡಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉನ್ನತ ವಿದ್ಯಾರ್ಜನೆಗೆ ವಿದ್ಯಾರ್ಥಿಗಳು ಮಂಗಳೂರು, ಮೈಸೂರು ಕಡೆಗಳಿಗೆ ತೆರಳಬೇಕಾಗಿತ್ತು. ಕೊಡಗು ವಿ.ವಿ. ಆದ ಬಳಿಕ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ದೊರಕಿದೆ. ಆದರೆ ಇದೀಗ ಹಣಕಾಸಿನ ಕೊರತೆಯಿಂದಾಗಿ ಸರಕಾರ ಮುಚ್ಚಲು ಹೊರಟಿದೆ. ವಿಲೀನಗೊಳಿಸುವುದಾಗಿ ಹೇಳಿಕೆ ನೀಡುತ್ತಿದೆಯಾದರೂ ಹಣಕಾಸು ಒದಗಿಸಲು ವಿಫಲವಾಗಿ ಮುಚ್ಚಲು ನಿರ್ಣಯ ಕೈಗೊಂಡಿದೆ. ಇದು ಸರಿಯಾದ ಕ್ರಮವಲ್ಲವೆಂದು ಹೇಳಿದರು.

ಪರಿಶಿಷ್ಟರಿಗೆ ಮೀಸಲಿಟ್ಟಿದ್ದ ೨೫ ಸಾವಿರ ಕೋಟಿ ಹಣವನ್ನು ಸರಕಾರ ದುರುಪಯೋಗಪಡಿಸಿಕೊಂಡಿದೆ. ಇದು ಖಂಡನೀಯ. ಪರಿಶಿಷ್ಟರನ್ನು ಸರಕಾರ ಬಲಿಷ್ಠವಾಗಿ ರೂಪಿಸಬೇಕು. ಅನುದಾನವನ್ನು ಆ ಸಮುದಾಯಕ್ಕೆ ಮೀಸಲಿಡಬೇಕೆಂದು ಹೇಳಿದರು.

ಸಿ ಮತ್ತು ಡಿ ಜಾಗವನ್ನು ಕೂಡ ದುರುಪಯೋಗ

(ಮೊದಲ ಪುಟದಿಂದ) ಮಾಡಿಕೊಂಡು ಅರಣ್ಯ ಇಲಾಖೆಗೆ ನೀಡಲು ನಿರ್ಣಯ ಮಾಡಿದೆ. ಸರಕಾರದ ಈ ನಡೆ ಖಂಡನೀಯ. ಈ ಮೂರು ಅಂಶಗಳನ್ನು ಮುಂದಿಟ್ಟುಕೊAಡು ಧರಣಿ ನಡೆಸಲಾಗುತ್ತಿದ್ದು, ಇದಕ್ಕೆ ಸರಕಾರ ಶಾಶ್ವತವಾದ ಪರಿಹಾರ ನೀಡ ಬೇಕಾಗಿದೆ ಎಂದು ಆಗ್ರಹಿಸಿದರು.

ರೈಲ್ವೆಗೆ ತಡೆ

ಬಹಳ ವರ್ಷಗಳ ಬೇಡಿಕೆಯಾಗಿರುವ ಕುಶಾಲನಗರಕ್ಕೆ ರೈಲ್ವೇ ಸಂಪರ್ಕ ಕಲ್ಪಿಸುವ ಸಂಬAಧ ಬೆಳಗೊಳದಿಂದ ಸಂಪರ್ಕ ಕಲ್ಪಿಸಲು ಕೇಂದ್ರದಿAದ ಯೋಜನೆ ರೂಪಿಸಲಾಗಿತ್ತು. ಆದರೆ ರಾಜ್ಯ ಸರಕಾರ ಸಂಪರ್ಕ ಸಾಧ್ಯವಿಲ್ಲವೆಂದು ತಡೆ ಮಾಡಿದೆ. ಸರಕಾರ ಎಲ್ಲದರಲ್ಲೂ ವಿಫಲವಾಗಿದೆ. ಕೇಂದ್ರದ ಯೋಜನೆಗಳನ್ನು ಜಾರಿಗೊಳಿಸದೆ ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ. ರಾಜ್ಯ ಸರಕಾರ ಒಳ್ಳೆಯ ಕೆಲಸ ಮಾಡಲಿ ಎಂದು ಹೇಳಿದರು.

ರದ್ದು ಮಾಡಲು ಅವಕಾಶವಿದೆಯಾ...?

ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಜಿ. ಬೋಪಯ್ಯ ಮಾತನಾಡಿ ರಾಜ್ಯ ಸರಕಾರಕ್ಕೆ ಕೊಡಗಿನ ಬಗ್ಗೆ ಕಾಳಜಿ ಇಲ್ಲ. ಬಿಜೆಪಿ ಸರಕಾರ ಇದ್ದಾಗ ತಾನು ಹಾಗೂ ಅಪ್ಪಚ್ಚು ರಂಜನ್ ಅವರ ಪ್ರಯತ್ನದಿಂದ ಕೊಡಗು ವಿ.ವಿ. ತಂದಿದ್ದು, ೧೦೦ ಎಕರೆ ಜಾಗ ಕೂಡ ಮೀಸಲಿಡಲಾಗಿದೆ. ಆದರೆ ಇದೀಗ ಕಾಂಗ್ರೆಸ್ ಸರಕಾರ ರದ್ದುಪಡಿಸಲು ಪ್ರಯತ್ನಿಸುತ್ತಿದೆ. ಇದನ್ನು ವಿಪಕ್ಷ ನಾಯಕ ಅಶೋಕ್ ಪ್ರಶ್ನಿಸಿದ ಸಂದರ್ಭ ವಿಲೀನಗೊಳಿಸುತ್ತಿರು ವುದಾಗಿ ಉತ್ತರ ನೀಡುತ್ತಿದ್ದಾರೆ. ಈ ರೀತಿಯ ನಾಟಕ ಬಹಳ ದಿವಸ ನಡೆಯಲ್ಲ. ಬಿಜೆಪಿ ಸರಕಾರ ಜಾರಿಗೆ ತಂದಿದ್ದ ರೈತರು, ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ, ಭಾಗ್ಯಲಕ್ಷಿö್ಮ ಯೋಜನೆ ಎಲ್ಲವನ್ನೂ ರದ್ದುಗೊಳಿಸುತ್ತಿದೆ. ಸಂವಿಧಾನದಲ್ಲಿ ಒಂದು ಸರಕಾರ ಜಾರಿಗೆ ತಂದ ಯೋಜನೆಯನ್ನು ರದ್ದುಗೊಳಿಸುವಂತೆÀ ಬರೆದಿದೆಯೇ? ಇದಕ್ಕೆ ಅವಕಾಶವಿದೆಯೋ ಎಂದು ಪ್ರಶ್ನಿಸಿದರು.

ಅರಣ್ಯ, ದೇವಸ್ಥಾನದಲ್ಲಿ ಪಾರಂಪರಿಕವಾಗಿ ಬಳಸುವ ವನ್ಯಪ್ರಾಣಿಗಳ ಕೊಂಬು, ಮುಂತಾದವುಗಳನ್ನೂ ಬಳಸದಂತೆ ಸುತ್ತೂಲೆ ಹೊರಡಿಸುವುದು, ಸಿ ಮತ್ತು ಡಿ ಜಾಗವನ್ನು ಅರಣ್ಯಕ್ಕೆ ಸೇರಿಸುವುದು ಸೇರಿದಂತೆ ಜನವಿರೋಧಿ ನೀತಿಯನ್ನೇ ಸರಕಾರ ಮುಂದುವರಿಸುತ್ತಿದೆ ಎಂದು ಆರೋಪಿಸಿದರು.

ಕಸ ಸಮಸ್ಯೆಗೆ ಅಡ್ಡಿ

ಮಡಿಕೇರಿಯಲ್ಲಿ ಕಸ ವಲೇವಾರಿ ದೊಡ್ಡ ಸಮಸ್ಯೆಯಾಗಿದ್ದು, ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ನಮ್ಮ ಸರಕಾರ ಇದ್ದಾಗ ಮೊಣ್ಣಂಗೇರಿಯಲ್ಲಿ ೧೦ ಎಕರೆ ಜಾಗ ಗುರುತಿಸಿ, ರೂ. ೬೦ ಲಕ್ಷ ಅನುದಾನ ನೀಡಲಾಗಿತ್ತು. ಆದರೆ ಕಾಂಗ್ರೆಸ್ ಸರಕಾರ ಬಂದ ಕೂಡಲೇ ಇದಕ್ಕೆ ಅಡ್ಡಿಪಡಿಸಿ ಗುರುತಿಸಲಾದ ಜಾಗ ಅರಣ್ಯ ಪ್ರದೇಶವೆಂದು ಹೇಳುತ್ತಾ ಅದಕ್ಕೂ ತಡೆಯೊಡ್ಡಿರುವುದಾಗಿ ಬೋಪಯ್ಯ ಆರೋಪಿಸಿದರು.

ಶಾಸಕರುಗಳ ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಸಮಸ್ಯೆಗಳಿದ್ದರೆ ಸರಿಪಡಿಸಲಿ. ಅದು ಬಿಟ್ಟು ವಾಟ್ಸಾö್ಯಪ್‌ಗಳಲ್ಲಿ ಸುಳ್ಳು ಮಾಹಿತಿಗಳನ್ನು ಹಾಕಿ ಜನರನ್ನು ತಪ್ಪು ದಾರಿಗೆ ಎಳೆಯುವುದು ತರವಲ್ಲವೆಂದು ಹೇಳಿದರು.

ಕೊಡಗಿನವರು ಯೋಗ್ಯರಲ್ಲ...!

ಧರಣಿಯಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ ಅಶ್ವತ್ಥ್ ನಾರಾಯಣ ಗೌಡ ಮಾತನಾಡಿ, ಕೊಡಗಿನವರು ವಿಶ್ವವಿದ್ಯಾಲಯ ಹೊಂದಲು ಯೋಗ್ಯರಲ್ಲ ಎಂದು ಕಾಂಗ್ರೆಸ್ ಸರಕಾರ ಭಾವಿಸಿದಂತಿದೆ. ಹಾಗಾಗಿ ಕೊಡಗು ವಿ.ವಿ. ಮುಚ್ಚಲು ಯತ್ನಿಸುತ್ತಿದೆ ಎಂದು ಆರೋಪಿಸಿದರು. ಬಿಜೆಪಿ ಸರಕಾರ ಜಾರಿಗೆ ತಂದ ವಿ.ವಿ.ಯನ್ನು ರಾಜಕೀಯ ಪ್ರೇರಿತವಾಗಿ ಮುಚ್ಚಲು ಯತ್ನಿಸುತ್ತಿದ್ದು, ಇದು ಉತ್ತಮ ಬೆಳವಣಿಗೆಯಲ್ಲ. ಹೋರಾಟದ ಮೂಲಕ ಇದಕ್ಕೆ ಉತ್ತರ ನೀಡಲಿದ್ದೇವೆ ಎಂದರು.

ಧರಣಿ ಅಂತ್ಯ

ನಿನ್ನೆಯಿAದ ನಡೆದ ಅಹೋರಾತ್ರಿ ಧರಣಿ ಇಂದು ಮಧ್ಯಾಹ್ನ ೨.೩೦ಕ್ಕೆ ಅಂತ್ಯಗೊAಡಿತು. ಇದೇ ಸಂದರ್ಭ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಅಪರ ಜಿಲ್ಲಾಧಿಕಾರಿ ಐಶ್ವಯ ಅವರ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು.

ಈ ಸಂದರ್ಭ ಮಾಜಿ ಸಚಿವ ಅಪ್ಪಚ್ಚು ರಂಜನ್, ವಿಧಾನಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಪ್ರಮುಖರಾದ ಉಮೇಶ್ ಸುಬ್ರಮಣಿ, ಬಿ.ಬಿ. ಭಾರತೀಶ್, ಕಾಂಗೀರ ಸತೀಶ್, ಸುವಿನ್ ಗಣಪತಿ, ಡಾ. ಎಂ.ಜಿ. ಪಾಟ್ಕರ್, ಅನಿತಾ ಪೂವಯ್ಯ, ಸುಲೋಚನಾ ಭಟ್, ಮಹೇಶ್ ಜೈನಿ, ಬಿ.ಕೆ. ಅರುಣ್ ಕುಮಾರ್, ಪರಮೇಶ್ವರ, ಮನು ಮುತ್ತಪ್ಪ, ಸವಿತಾ ರಾಖೇಶ್, ಎಸ್.ಸಿ. ಸತೀಶ್ ಕುಮಾರ್, ಅರುಣ್ ಶೆಟ್ಟಿ, ಮನು ಮಂಜುನಾಥ್, ನೆಲ್ಲಿರ ಚಲನ್, ಇತರರಿದ್ದರು.