ಮಡಿಕೇರಿ, ಮಾ. ೮: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಸದಸ್ಯತ್ವ ಹೆಚ್ಚಿಸಲು ಅಭಿಯಾನಕ್ಕೆ ತೀರ್ಮಾನಿಸಿದ್ದು, ಹಳೇ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆದುಕೊಳ್ಳುವಂತೆ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮನವಿ ಮಾಡಿದ್ದಾರೆ. ೧೯೪೯ರಲ್ಲಿ ಪ್ರಾರಂಭವಾದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿಗೆ ಈಗಾಗಲೇ ೭೫ ವರ್ಷ ತುಂಬಿದ್ದು, ವಜ್ರ ಮಹೋತ್ಸವದ ಹೊಸ್ತಿಲಿನಲ್ಲಿದೆ. ಇದರ ಪ್ರಯುಕ್ತವಾಗಿ ಕಾಲೇಜಿನೊಂದಿಗೆ ಕೈ ಜೋಡಿಸಿ, ವಿದ್ಯಾರ್ಥಿಗಳಿಗೆ ಉಪಯೋಗ ವಾಗುವಂತಹ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ತೀರ್ಮಾನಿಸಲಾಗಿದೆ. ಜೊತೆಗೆ ಸಂಘದಿAದ ಕಾಲೇಜಿನ ಡಿಜಿ ಟಲ್ ಲೈಬ್ರರಿಗೆ, ವಿದ್ಯಾರ್ಥಿಗಳ ಸ್ಫೋರ್ಟ್ಸ್ ಕಿಟ್‌ಗೆ ಧನ ಸಹಾಯ ನೀಡಿದ್ದು, ಮುಂದಿನ ದಿನಗಳಲ್ಲಿ ಹಲವು ಕಾರ್ಯ ಕ್ರಮ ಹಮ್ಮಿಕೊಳ್ಳುವ ಹಿನ್ನೆಲೆ ದಾನಿಗಳು ಕೈಜೋಡಿಸಿದರೆ ಅಭಿವೃದ್ಧಿ ಕೆಲಸ ಮಾಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದ್ದಾರೆ.