ಸೋಮವಾರಪೇಟೆ, ಮಾ. ೮: ತಾಲೂಕಿನ ಕೆಲವೊಂದು ಕಲ್ಲುಕೋರೆಗಳಿಂದ ಎಂ.ಸ್ಯಾAಡ್, ಜಲ್ಲಿ ಕಲ್ಲುಗಳನ್ನು ಸಾಗಾಟಗೊಳಿಸುವ ಟಿಪ್ಪರ್, ಟ್ರಾö್ಯಕ್ಟರ್, ಲಾರಿ ಚಾಲಕರು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಸಾಮಾಗ್ರಿಗಳನ್ನು ಸಾಗಾಟಗೊಳಿಸುತ್ತಿರುವುದರಿಂದ ತಿರುವು ರಸ್ತೆಗಳಲ್ಲಿ ಜಲ್ಲಿ, ಕಲ್ಲುಪುಡಿ ರಸ್ತೆಗೆ ಬಿದ್ದು, ದ್ವಿಚಕ್ರ ವಾಹನ ಸವಾರರಿಗೆ ಸಂಚಕಾರ ತಂದಿಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಬಾಣಾವರ ವ್ಯಾಪ್ತಿಯಲ್ಲಿರುವ ಕಲ್ಲುಕೋರೆಗಳಿಂದ ಜಲ್ಲಿ, ಎಂ.ಸ್ಯಾAಡ್ ಸಾಗಿಸುವ ಲಾರಿ ಚಾಲಕರು ವಾಹನದ ಗರಿಷ್ಠ ಪ್ರಮಾಣಕ್ಕಿಂತ ಹೆಚ್ಚು ಜಲ್ಲಿ, ಕಲ್ಲುಪುಡಿಯನ್ನು ಸಾಗಾಟಗೊಳಿಸುತ್ತಿದ್ದು, ಟಾರ್ಪಲ್ ಕಟ್ಟದೇ ಇರುವುದರಿಂದ ತಿರುವು ರಸ್ತೆಗಳಲ್ಲಿ ಕಲ್ಲುಪುಡಿ ಕೆಳಕ್ಕೆ ಉದುರಿ ಇತರ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.
ಬಾಣಾವರ ಜಂಕ್ಷನ್ನಲ್ಲಿ, ಅಬ್ಬೂರುಕಟ್ಟೆ ಹಾಗೂ ತಣ್ಣೀರುಹಳ್ಳ, ಬಿಎಸ್ಎನ್ಎಲ್ ಟವರ್ ಸಮೀಪದ ತಿರುವು ರಸ್ತೆಗಳಲ್ಲಿ ಕಲ್ಲುಪುಡಿಗಳು ರಸ್ತೆಯ ತುಂಬೆಲ್ಲಾ ಹರಡಿ, ದ್ವಿಚಕ್ರ ವಾಹನಗಳ ಸವಾರರಿಗೆ ಸಮಸ್ಯೆಯಾಗುತ್ತಿದೆ. ಈಗಾಗಲೇ ಹಲವಷ್ಟು ಮಂದಿ ಸ್ಕಿಡ್ ಆಗಿ ಬಿದ್ದು, ಗಾಯಗೊಂಡಿದ್ದಾರೆ.
ಈ ಬಗ್ಗೆ ಕೋರೆ ಮಾಲೀಕರಿಗೆ, ಲಾರಿ, ಟಿಪ್ಪರ್ ಚಾಲಕರಿಗೆ ತಿಳಿಸಿದರೆ, ಉಡಾಫೆಯ ವರ್ತನೆ ತೋರುತ್ತಿದ್ದಾರೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಜಲ್ಲಿ, ಎಂ.ಸ್ಯಾAಡ್ ಸಾಗಿಸುವ ವಾಹನಗಳು, ಸಾಗಾಟದ ಸಂದರ್ಭ ನಿಯಮಗಳನ್ನು ಗಾಳಿಗೆ ತೂರುವ ವಾಹನಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅಂತೆಯೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಕಲ್ಲುಕೋರೆಗಳಿಗೆ ತೆರಳಿ, ಸಾಗಾಟ ಸಂಬAಧಿತ ನಿರ್ದೇಶನಗಳನ್ನು ಪಾಲಿಸುವ ಬಗ್ಗೆ ಸೂಚನೆ ನೀಡಬೇಕೆಂದು ಒತ್ತಾಯಿಸಿದ್ದಾರೆ.