ಶ್ರೀಮಂಗಲ, ಮಾ. ೮: ಪೊನ್ನಂಪೇಟೆ ತಾಲೂಕು ಬಾಡಗರಕೇರಿಯ ಐತಿಹಾಸಿಕ ಶ್ರೀ ಮೃತ್ಯುಂಜಯ ದೇವಸ್ಥಾನದ ವಾರ್ಷಿಕ ಉತ್ಸವಕ್ಕೆ ಇಂದು ಸಂಜೆ ಕೊಡಿಮರ ನಿಲ್ಲಿಸುವ ಮೂಲಕ ಚಾಲನೆ ದೊರೆತಿದೆ. ಅದಕ್ಕೂ ಮುನ್ನ ಮುಂಜಾನೆ ಆರು ಗಂಟೆಗೆ ಸಾಂಪ್ರದಾಯಿಕ ತಳಿಯತಕ್ಕಿ ಹಾಗೂ ದುಡಿಕೊಟ್ಟ್ ಪಾಟ್‌ನೊಂದಿಗೆ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯ ಆರಂಭವಾಯಿತು.
ಕೊಡವ ಸಾಂಪ್ರದಾಯಿಕ ಕುಪ್ಯ ಚೇಲೆ ಸಹಿತ ಪುರುಷರು ದುಡಿಕೊಟ್ಟ್ ಪಾಟ್‌ನೊಂದಿಗೆ ಹಾಗೂ ಕೊಡವ ಪದ್ಧತಿಯ ಸೀರೆ, ವಸ್ತç ಸಹಿತ ತಳಿಯತಕ್ಕಿ ಬೊಳಕ್‌ನೊಂದಿಗೆ ಮಹಿಳೆಯರು ದೇವಸ್ಥಾನ ಮುಖ್ಯದ್ವಾರದಿಂದ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರು.
ಶ್ರೀ ಮೃತ್ಯುಂಜಯ, ಗಣಪತಿ ಹಾಗೂ ನಾಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಾಡಿನ ಒಳಿತಿಗಾಗಿ ಶತರುದ್ರಾಭಿಷೇಕ ಪೂಜೆಯನ್ನು ಆಯೋಜಿಸಲಾಗಿತ್ತು.
ದೇವತಕ್ಕ ಅಣ್ಣೀರ ಕುಟುಂಬದ ದಾದ ಗಣಪತಿ, ನಾಡ್‌ತಕ್ಕ ಕಾಯಪಂಡ ಕುಟುಂಬದ ಅಯ್ಯಪ್ಪ ಅವರು ೧೧ ದಿನ ನಡೆಯುವ ವಾರ್ಷಿಕೋತ್ಸವದ ನಿರ್ವಿಘ್ನವಾಗಿ ನಡೆಯಲು ಹಾಗೂ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು.
ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಚೋನಿರ ಸುಬ್ರಮಣಿ, ಉಪಾಧ್ಯಕ್ಷ ಕಾಯಪಂಡ ಸ್ಟಾಲಿನ್ ಗಣಪತಿ, ಕಾರ್ಯದರ್ಶಿ ಬಲ್ಯಮೀದೇರಿರ ಸಂಪತ್, ಖಜಾಂಚಿ ಬಲ್ಯಮೀದೇರಿರ ಚೇತನ್ ಸೋಮಣ್ಣ, ಸದಸ್ಯರಾದ ಮೀದೇರಿರ ಜೈ ಗಣಪತಿ, ಕಾಯಪಂಡ ಕಾವೇರಪ್ಪ, ಅಣ್ಣೀರ ಶ್ರೀ ಮೃತ್ಯುಂಜಯ, ಗಣಪತಿ ಹಾಗೂ ನಾಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಾಡಿನ ಒಳಿತಿಗಾಗಿ ಶತರುದ್ರಾಭಿಷೇಕ ಪೂಜೆಯನ್ನು ಆಯೋಜಿಸಲಾಗಿತ್ತು.
ದೇವತಕ್ಕ ಅಣ್ಣೀರ ಕುಟುಂಬದ ದಾದ ಗಣಪತಿ, ನಾಡ್‌ತಕ್ಕ ಕಾಯಪಂಡ ಕುಟುಂಬದ ಅಯ್ಯಪ್ಪ ಅವರು ೧೧ ದಿನ ನಡೆಯುವ ವಾರ್ಷಿಕೋತ್ಸವದ ನಿರ್ವಿಘ್ನವಾಗಿ ನಡೆಯಲು ಹಾಗೂ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು.
ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಚೋನಿರ ಸುಬ್ರಮಣಿ, ಉಪಾಧ್ಯಕ್ಷ ಕಾಯಪಂಡ ಸ್ಟಾಲಿನ್ ಗಣಪತಿ, ಕಾರ್ಯದರ್ಶಿ ಬಲ್ಯಮೀದೇರಿರ ಸಂಪತ್, ಖಜಾಂಚಿ ಬಲ್ಯಮೀದೇರಿರ ಚೇತನ್ ಸೋಮಣ್ಣ, ಸದಸ್ಯರಾದ ಮೀದೇರಿರ ಜೈ ಗಣಪತಿ, ಕಾಯಪಂಡ ಕಾವೇರಪ್ಪ, ಅಣ್ಣೀರ