ಮಡಿಕೇರಿ, ಮಾ. ೮: ಮಹಾರಾಷ್ಟçದ ಸರ್ಕಾರಿ ಬಸ್ ಚಾಲಕನಿಗೆ ಹಲ್ಲೆ ಮಾಡಿದ ಪ್ರಕರಣವೊಂದಕ್ಕೆ ಸಂಬAಧಿಸಿದAತೆ ಇಬ್ಬರು ಆರೋಪಿಗಳನ್ನು ಜೋಡುಪಾಲದಲ್ಲಿ ಬಂಧಿಸಲಾಗಿದೆ. ಚಿತ್ರದುರ್ಗ ಹಿರಿಯೂರು ತಾಲೂಕಿನ ಬುರುಜನಕೊಪ್ಪ ಬಳಿ ಕರ್ನಾಟಕ ನವ ನಿರ್ಮಾಣ ಸೇನೆಯ ಸಂಘಟಕರು ಮಹಾರಾಷ್ಟçದ ಸಾರಿಗೆ ಬಸ್ಸನ್ನು ತಡೆದು ಬಸ್ ಚಾಲಕನಿಗೆ ಹಲ್ಲೆ ಮಾಡಿ, ಚಾಲಕನ ಮುಖಕ್ಕೆ ಹಾಗೂ ಬಸ್‌ಗೆ ಕಪ್ಪು ಬಣ್ಣ ಬಳಿದು ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಭಯ ಉಂಟುಮಾಡಿ ರಾಜ್ಯಗಳ ಭಾವೈಕ್ಯತೆಗೆ ಧಕ್ಕೆ ತರುವ ರೀತಿ ವರ್ತಿಸಿದ್ದರಿಂದ ಹಿರಿಯೂರು ತಾಲೂಕಿನ ಐಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬAಧಿಸಿದAತೆ ತಲೆಮರೆಸಿಕೊಂಡಿದ್ದ ಕರ್ನಾಟಕ ನವನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾ ಶಂಕರ್ ಪಾಟೀಲ್ ಹಾಗೂ ಆತನ ಸ್ನೇಹಿತ ಸಂತೋಷ್ ಎಂಬವರುಗಳು ಜೋಡುಪಾಲ ಬಳಿಯ ಹೋಂಸ್ಟೇವೊAದರಲ್ಲಿ ತಂಗಿರುವುದನ್ನು ಖಚಿತಪಡಿಸಿಕೊಂಡ ಐಮಂಗಲ ಪೊಲೀಸರು ಮಡಿಕೇರಿ ನಗರ ಠಾಣೆ ಪೊಲೀಸರಿಗೆ ನೀಡಿದ ಮಾಹಿತಿ ಆಧಾರದಲ್ಲಿ ಮಡಿಕೇರಿ ಪೊಲೀಸರು ಇಬ್ಬರನ್ನೂ ಬಂಧಿಸಿ ಐಮಂಗಲ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತ ಇಬ್ಬರು ಆರೋಪಿಗಳಿಗೂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.