ಚೆಯ್ಯAಡಾಣೆ/ ನಾಪೋಕ್ಲು, ಮಾ. ೮: ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಕೇರಿ ಗ್ರಾಮದಲ್ಲಿ ಹಾಡ ಹಗಲೇ ಕಾಫಿ ತೋಟಗಳಿಗೆ ಒಂಟಿ ಸಲಗ ದಾಳಿ ನಡೆಸಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.
ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಕೊಳಕೇರಿ ಗ್ರಾಮದ ನಿವಾಸಿ ಅಹಮದ್ ಹಾಗೂ ಮಹಮ್ಮದ್ ಎಂಬವರ ತೋಟಗಳಿಗೆ ಲಗ್ಗೆಯಿಟ್ಟ ಕಾಡಾನೆ ಕಾಫಿ, ಇನ್ನಿತರ ಗಿಡಗಳನ್ನು ತುಳಿದು ನಾಶಪಡಿಸಿದಲ್ಲದೆ ಗ್ರಾಮದ ನಿವಾಸಿ ನಝೀರ್ ಎಂಬವರ ಗದ್ದೆಯಲ್ಲಿ ಮೇಯಲು ಕಟ್ಟಿದ್ದ ಹಸುವಿನ ಮೇಲೆ ದಾಳಿ ನಡೆಸಿದೆ. ಗಾಯಗೊಳಿಸಿದೆ.
ಕೋಟೇರಿ ಗ್ರಾಮದ ಬೆಳೆಗಾರ ಅಪ್ಪಾರಂಡ ಸುಧೀರ್ ಎಂಬವರ ತೋಟಕ್ಕೆ ನುಸುಳಿ ತೋಟಕ್ಕೆ ಅಳವಡಿಸಲಾಗಿದ್ದ ಗೇಟ್ ಅನ್ನು ತುಳಿದು ಹಾನಿಪಡಿಸಿದ್ದು, ತೋಟದಲ್ಲಿ ಬೆಳೆದ ಕಾಫಿ, ಬಾಳೆ, ಅಡಿಕೆ, ತೆಂಗು, ಬಿದಿರು ಹಾಗೂ ಇನ್ನಿತರ ಗಿಡಗಳನ್ನು ತುಳಿದು ಚೆಯ್ಯಂಡಾಣೆ/ ನಾಪೋಕ್ಲು, ಮಾ. ೮: ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಕೇರಿ ಗ್ರಾಮದಲ್ಲಿ ಹಾಡ ಹಗಲೇ ಕಾಫಿ ತೋಟಗಳಿಗೆ ಒಂಟಿ ಸಲಗ ದಾಳಿ ನಡೆಸಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.
ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಕೊಳಕೇರಿ ಗ್ರಾಮದ ನಿವಾಸಿ ಅಹಮದ್ ಹಾಗೂ ಮಹಮ್ಮದ್ ಎಂಬವರ ತೋಟಗಳಿಗೆ ಲಗ್ಗೆಯಿಟ್ಟ ಕಾಡಾನೆ ಕಾಫಿ, ಇನ್ನಿತರ ಗಿಡಗಳನ್ನು ತುಳಿದು ನಾಶಪಡಿಸಿದಲ್ಲದೆ ಗ್ರಾಮದ ನಿವಾಸಿ ನಝೀರ್ ಎಂಬವರ ಗದ್ದೆಯಲ್ಲಿ ಮೇಯಲು ಕಟ್ಟಿದ್ದ ಹಸುವಿನ ಮೇಲೆ ದಾಳಿ ನಡೆಸಿದೆ. ಗಾಯಗೊಳಿಸಿದೆ.
ಕೋಟೇರಿ ಗ್ರಾಮದ ಬೆಳೆಗಾರ ಅಪ್ಪಾರಂಡ ಸುಧೀರ್ ಎಂಬವರ ತೋಟಕ್ಕೆ ನುಸುಳಿ ತೋಟಕ್ಕೆ ಅಳವಡಿಸಲಾಗಿದ್ದ ಗೇಟ್ ಅನ್ನು ತುಳಿದು ಹಾನಿಪಡಿಸಿದ್ದು, ತೋಟದಲ್ಲಿ ಬೆಳೆದ ಕಾಫಿ, ಬಾಳೆ, ಅಡಿಕೆ, ತೆಂಗು, ಬಿದಿರು ಹಾಗೂ ಇನ್ನಿತರ ಗಿಡಗಳನ್ನು ತುಳಿದು ಕಾಡಾನೆ ಗ್ರಾಮಕ್ಕೆ ಹಾಗೂ ತೋಟಕ್ಕೆ ನುಸುಳದ ರೀತಿಯಲ್ಲಿ ಕ್ರಮಕೈಗೊಳ್ಳಬೇಕು ಹಾಗೂ ನಷ್ಟ ಅನುಭವಿಸಿದ ತೋಟದ ಮಾಲೀಕರಿಗೆ ಸೂಕ್ತ ಪರಿಹಾರ ಒದಗಿಸ ಬೇಕೆಂದು ಆಗ್ರಹಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಭಾಗಮಂಡಲ ಹಾಗೂ ಮಡಿಕೇರಿ ವಲಯದ ಅರಣ್ಯ ಇಲಾ ಖೆಯ ವಲಯಾರಣ್ಯಾಧಿಕಾರಿಗಳಾದ ರವೀಂದ್ರ ಹಾಗೂ ಫಿರೋಜ್ ಖಾನ್ ನೇತೃತ್ವದಲ್ಲಿ ಸಿಬ್ಬಂದಿಗಳು ಕಾಡಾನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.