ಮಡಿಕೇರಿ, ಫೆ. ೨೧ : ಕಡಗದಾಳು ಗ್ರಾಮದಲ್ಲಿರುವ ಪ್ರಕೃತಿದತ್ತ ಶ್ರೀ ಬೊಟ್ಲಪ್ಪೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿಯ ವಾರ್ಷಿಕ ಮಹಾ ಪೂಜೆಯು ತಾ. ೨೬ ಮತ್ತು ೨೭ ರಂದು ನಡೆಯಲಿದೆ. ತಾ.೨೬ರಂದು ರಾತ್ರಿ ಜಾಗರಣೆ ಹಾಗೂ ಬಿಲ್ವಪತ್ರೆ ಆರ್ಚನೆ, ಎಳನೀರು ಅಭಿಷೇಕ ಮಹಾಪೂಜೆ, ಸೇರಿದಂತೆ ಹಲವು ಪೂಜೆ ಕೈಂಕರ್ಯ ನಡೆಯಲಿದೆ. ತಾ. ೨೭ರಂದು ಬೆಳಿಗ್ಗೆ ೧೦ ಗಂಟೆಯಿAದ ವಿವಿಧ ಪೂಜಾ ಕೈಂಕರ್ಯಗಳು ಆರಂಭಗೊAಡು ಮಧ್ಯಾಹ್ನ ಮಹಾಪೂಜೆ, ಮಂಗಳಾರತಿ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ ಊರಿನವರ ಮತ್ತು ಸರ್ವ ಭಕ್ತಾಭಿಮಾನಿಗಳ ಸಹಕಾರದೊಂದಿಗೆ ಅನ್ನದಾನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.