ವೀರಾಜಪೇಟೆ ತಾಲೂಕು ಚೆನ್ನಯ್ಯನಕೋಟೆ ನಿವಾಸಿ, ಮಾಜಿ ಯೋಧ ಸಣ್ಣಯ್ಯ (೮೨) ತಾ. ೨೧ರಂದು ನಿಧನರಾದರು. ಮೃತರು ೧೯೬೨ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಂಡು ೧೯೬೫ರಲ್ಲಿ ನಡೆದ ಭಾರತ - ಪಾಕಿಸ್ತಾನ ಯುದ್ಧದಲ್ಲಿ ಭಾಗಿಯಾಗಿದ್ದರು. ೧೯೭೮ರಲ್ಲಿ ನಿವೃತ್ತಿ ಹೊಂದಿದರು. ಮೃತರ ಅಂತ್ಯಕ್ರಿಯೆ ತಾ. ೨೨ರಂದು (ಇಂದು) ಬೆಳಿಗ್ಗೆ ಸ್ವಗ್ರಾಮದಲ್ಲಿ ನಡೆಯಲಿದೆ. ಮೃತರು ಈರ್ವರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಸಾಂತ್ವನ

ಮೃತರ ಮನೆಗೆ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಭೇಟಿ ನೀಡಿ ಸಂತಾಪ ಸೂಚಿಸಿದರಲ್ಲದೆ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಟಮಡಿಕೇರಿಯ ದೇಚೂರು ನಿವಾಸಿ ದಿ. ಕುಟ್ಟಂಡ ಬೋಪಯ್ಯ ಅವರ ಪುತ್ರ ಅರುಣ್ ಬೋಪಯ್ಯ (೭೩) ತಾ. ೨೧ರಂದು ನಿಧನರಾದರು. ಮೃತರ ಅಂತ್ಯಕ್ರಿಯೆ ತಾ. ೨೨ರಂದು ಮಧ್ಯಾಹ್ನ ಮಡಿಕೇರಿ ಕೊಡವ ಸಮಾಜ ರುದ್ರಭೂಮಿಯಲ್ಲಿ ನಡೆಯಲಿದೆ.

ಟ ನಾಪೋಕ್ಲು ಸಮೀಪದ ಬೇತು ಗ್ರಾಮದ ನಿವಾಸಿ ಕಲಿಯಂಡ ಕಾಳಪ್ಪ (ಡಾಲು- ೮೬) ತಾ.೨೧ರಂದು ನಿಧನರಾದರು. ನಾಪೋಕ್ಲು ಮಂಡಲ ಪಂಚಾಯಿತಿ ಸದಸ್ಯರಾಗಿ, ಕೊಡಗು ದೈನಿಕ ಪತ್ರಿಕೆಯ ಸಂಪಾದಕರಾಗಿ, ಕೊಳಕೇರಿ ಭಗವತಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ, ನಾಪೋಕ್ಲು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಅಲ್ಲದೆ, ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು. ಮೃತರ ಅಂತ್ಯಕ್ರಿಯೆ ತಾ. ೨೨ರಂದು (ಇಂದು) ಮಧ್ಯಾಹ್ನ ನಾಪೋಕ್ಲು ಕೊಡವ ಸಮಾಜದ ರುದ್ರಭೂಮಿಯಲ್ಲಿ ಜರುಗಲಿದೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.