ಕೂಡಿಗೆ, ಫೆ. ೨೧ : ತೊರೆನೂರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಪ್ರಕಾಶ್ ಅದ್ಯಕ್ಷತೆಯಲ್ಲಿ ನಡೆಯಿತು.

ಕೊಡಗು ವಿಶ್ವವಿದ್ಯಾನಿಲ ಯವನ್ನು ಮುಚ್ಚುವ ಚರ್ಚೆ ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ವಿ.ವಿ.ಯನ್ನು ಮುಚ್ಚದಂತೆ ಸದಸ್ಯರು ಆಗ್ರಹಿಸಿದರು. ಈ ಕುರಿತು ನಿರ್ಣಯ ಮಾಡಿ ರಾಜ್ಯ ಸರ್ಕಾರಕ್ಕೆ ಸಲ್ಲಿಸುವುದಕ್ಕೆ ಜಿಲ್ಲಾಧಿಕಾರಿ ಮತ್ತು ತಾಲೂಕು ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿ ಸರಕಾರಕ್ಕೆ ಒತ್ತಾಯಿಸಲು ನಿರ್ಧಾರ ಕೈಗೊಳ್ಳಲಾಯಿತು.

ಸಭೆಗೆ ಬಂದ ವಿವಿಧ ಅರ್ಜಿಗಳನ್ನು ಮಂಡಿಸಿ ಅನುಮೋದನೆ ಪಡೆಯಲಾಯಿತು. ೧೫ನೇ ಹಣಕಾಸು ಯೋಜನೆಯ ಕಾಮಗಾರಿಗಳನ್ನು ತ್ವರಿತವಾಗಿ ಪ್ರಾರಂಭಿಸಲು ತೀರ್ಮಾನಿಸ ಲಾಯಿತು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ದೀಪ ಅಳವಡಿಸಲು ಮತ್ತು ಮುಂದಿನ ಬೇಸಿಗೆಗೆ ಕುಡಿಯುವ ನೀರಿನ ಅಭಾವವಾಗದಂತೆ ಕ್ರಮ ಕೈಗೊಳ್ಳಲು ತೀರ್ಮಾನಿಸ ಲಾಯಿತು.

ಸಭೆಗೆ ಅಭಿವೃದ್ಧಿ ಅಧಿಕಾರಿ ಸರಕಾರದ ಹೊಸ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಶೋಭಾ ಪ್ರಕಾಶ್ ಮಾತನಾಡಿ, ವಿಶ್ವವಿದ್ಯಾಲಯದ ವಿಷಯ ಸಂಬAಧಿಸಿದ ಎಲ್ಲಾ ಸದಸ್ಯರು ಕೊಡಗು ವಿಶ್ವವಿದ್ಯಾಲಯ ಉಳಿಸುವ ಪ್ರಯತ್ನಕ್ಕೆ ಸಹಕಾರ ನೀಡುವುದರ ಜೊತೆಯಲ್ಲಿ ಪ್ರತಿಭಟನೆಗೂ ಸಹ ಮುಂದಾಗಬೇಕೆAದು ತಿಳಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ರೂಪ ಮಹೇಶ್, ಸದಸ್ಯರಾದ ದೇವರಾಜ್, ಬೇಬಿಯಣ್ಣ, ಶಿವಕುಮಾರ್, ಮಹದೇವ, ಪ್ರಕಾಶ್, ಯಶೋಧ, ಸಾವಿತ್ರಿ, ನಿಂಗಾಜಮ್ಮ, ಅಭಿವೃದ್ಧಿ ಅಧಿಕಾರಿ ಶ್ಯಾಮ್ ಹಾಜರಿದ್ದರು.