ಮಡಿಕೇರಿ, ಫೆ. ೨೦: ವೈಯಕ್ತಿಕ ಜೀವನದ ಜತೆ ಕೆಲಸದ ಒತ್ತಡದಲ್ಲಿ ಎದುರಾಗುವ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ದೈಹಿಕ ಶಕ್ತಿ ಹಾಗೂ ಮಾನಸಿಕ ಬಲವನ್ನು ಕ್ರೀಡೆಯಿಂದ ಪಡೆಯಬಹುದು ಎಂದು ಮಡಿಕೇರಿ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗಂಗಾಧರ ನಾಯಕ್ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮಡಿಕೇರಿ ಪ್ರಾದೇಶಿಕ ಕಚೇರಿಯಿಂದ ಆಯೋಜಿಸಿದ ವಲಯ ಮಟ್ಟದ ಕ್ರೀಡೆ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ವ್ಯಕ್ತಿಯು ಕ್ರೀಡೆಗಳಲ್ಲಿ ಭಾಗವಹಿಸುವು ದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗುವುದಲ್ಲದೇ ತಮ್ಮ ಕಾಯಕವನ್ನು ಉತ್ಸಾಹದಿಂದ ಮಾಡಲು ಸಾಧ್ಯವಾಗುವುದು ಎಂದರು.
ಕರ್ನಾಟಕ ಗ್ರಾಮೀಣ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಉದಯ್ ಕ್ರೀಡೆ ಹಿನ್ನೆಲೆ ಗುಂಡು ಎಸೆತ, ಲೆಮನ್ ಸ್ಪೂನ್ ರೇಸ್, ಓಟದ ಸ್ಪರ್ಧೆ, ಹಿಟ್ ಟು ವಿಕೆಟ್, ಬಾಸ್ಕೆಟ್ ಬಾಲ್, ಫುಟ್‌ಬಾಲ್, ರಿಲೆ, ಮ್ಯೂಸಿಕಲ್ ಚೇರ್, ಟಗ್ ಆಫ್ ವಾರ್ ಸೇರಿದಂತೆ ವಿವಿಧ ಆಟೋಟಗಳನ್ನು ಆಡಿಸಲಾಯಿತು. ವಿಜೇತರಿಗೆ ಬಹುಮಾನ ನೀಡ ಲಾಯಿತು. ಅಭಿನಂದನೆ ಸಲ್ಲಿಸ ಲಾಯಿತು. ಆಟೋಟಗಳಲ್ಲಿ ಬ್ಯಾಂಕ್ ಸಿಬ್ಬಂದಿಗಳು ಕುಟುಂಬ ದೊಂದಿಗೆ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಪ್ರಾದೇಶಿಕ ಕಚೇರಿಯ ಹಿರಿಯ ವ್ಯವಸ್ಥಾಪಕ ರವಿಚಂದ್ರನ್, ಸಿಎಚ್‌ಎಲ್ ಅಧಿಕಾರಿಗಳಾದ ವಿನಾಯಕ್, ಮನೋಜ್, ವ್ಯವಸ್ಥಾಪಕ ಕಿಶೋರ್, ವಲಯ ಶಾಖೆಯ ವ್ಯವಸ್ಥಾಪಕರು, ಸಿಬ್ಬಂದಿಗಳು ಸೇರಿದಂತೆ ಇದ್ದರು.