ಮಡಿಕೇರಿ, ಫೆ. ೧೦: ಕಟ್ಟೆಮಾಡು ಮೃತ್ಯುಂಜಯ ದೇವಾಲಯದ ಆಡಳಿತ ಮಂಡಳಿ ತೆಗೆದುಕೊಳ್ಳುವ ನಿರ್ಧಾರಕ್ಕೂ ತನಗೂ ಸಂಬAಧವಿಲ್ಲ. ತಾನು ಅಲ್ಲಿ ಕೇವಲ ಸಂಭಾವನೆಗೆ ಅರ್ಚಕನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ದೇವಾಲಯದ ಪ್ರಧಾನ ಅರ್ಚಕ ವಿಘ್ನೇಶ್ ಭಟ್ ಹೇಳಿದರು.

ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಟ್ಟೆಮಾಡು ದೇವಾ ಲಯ ಆಡಳಿತ ಮಂಡಳಿ ತೆಗೆದುಕೊ ಳ್ಳುವ ನಿರ್ಧಾರಗಳಿಗೂ ತನಗೂ ಯಾವುದೇ ಸಂಬAಧವಿಲ್ಲ. ತಾನು ಕೇವಲ ಅರ್ಚಕನಾಗಿ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಭಕ್ತಾಧಿಗಳು ಅಪೇಕ್ಷಿಸುವ ಪೂಜೆ, ಸೇವೆ, ಪ್ರಾರ್ಥನೆ ನೆರವೇರಿಸುತ್ತಿದ್ದೇನೆ; ಆಡಳಿತ ಮಂಡಳಿಯ ಇತರ ನಿರ್ಧಾರಗಳಿಗೂ ತನಗೂ ಸಂಬAಧವಿಲ್ಲ ಎಂದು ಸ್ಪಷ್ಟಪಡಿಸಿದರು.

ತನ್ನ ಮೇಲೆ ಹಲ್ಲೆ ಮಾಡಿದ ಅನಿಲ್ ತÀನಗೆ ಪರಿಚಯವಿಲ್ಲ. ಬಾವಿ ಗುರುತಿಗೆ ಗುತ್ತಿ ಹಾಕುವ ವಿಚಾರಕ್ಕೆ ಹಲ್ಲೆ ನಡೆದಿದ್ದು ಎಂಬ ಆರೋಪಗಳು ಕೇಳಿಬಂದಿದ್ದು, ತÀನಗೆ ಗುತ್ತಿ ಹಾಕುವ ಅನುಭ ವವೇ ಇಲ್ಲ. ತಾನು ಈ ಕೆಲಸ ಮಾಡಿರುವುದೇ ಇಲ್ಲ ಎಂದರು.

೨೦೧೫ ರಲ್ಲಿ ಶಿವಲಿಂಗ ಪತ್ತೆ : ೨೦೧೫ ರಲ್ಲಿ ಕಟ್ಟೆಮಾಡುವಿನಲ್ಲಿ ಶಿವಲಿಂಗ ಪತ್ತೆಯಾಗಿತ್ತು. ಗ್ರಾಮಸ್ಥರು ನಂತರದಲ್ಲಿ ತಂತ್ರಿಗಳನ್ನು ಹಾಗೂ ದೈವಜ್ಞರನ್ನು ಕರೆಸಿದ ಬಳಿಕ ಅಷ್ಟಮಂಗಲ ಪ್ರಶ್ನೆ ಕೇಳಿ ಬಾಲಾಲಯ ನಿರ್ಮಿಸಲಾಯಿತು. ಅವರುಗಳು ಹೇಳಿದ್ದನ್ನೆ ಊರಿನವರು ಅನುಸರಿಸಿದ್ದಾರೆ. ಪ್ರಶ್ನೆ ಕೇಳುವ ಸಂದರ್ಭ ತಾನು ಊರಿನಲ್ಲಿರಲಿಲ್ಲ. ೨೦೧೬ ರಿಂದ ಈ ಬಾಲಾಲಯಕ್ಕೆ ಪೂಜೆ ಸಲ್ಲಿಸುತ್ತಾ ಬಂದಿದ್ದಾಗಿ ಅವರು ಹೇಳಿದರು.