ಚೆಯ್ಯಂಡಾಣೆ, ಫೆ. ೫: ಕೊಡಗು ಜಿಲ್ಲೆಯಲ್ಲಿ ಕಳೆದ ೧೭ ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಜಿಲ್ಲೆಯ ಪ್ರಪ್ರಥಮ ಸಮನ್ವಯ ವಿದ್ಯಾಸಂಸ್ಥೆ ಅನ್ವಾರುಲ್ ಹುದಾ ಇದರ ಯುಎಇ ಸಮಿತಿ ವತಿಯಿಂದ ವಾರ್ಷಿಕ ಅಸ್ಮಾಉಲ್ ಹುಸ್ನಾ ಪ್ರಾರ್ಥನಾ ಸಂಗಮ ೨೦೨೫ರ ಫೆಬ್ರವರಿ ೨೩ರಂದು ದೇರಾ ದುಬೈಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅನ್ವಾರುಲ್ ಹುದಾ ಸ್ಥಾಪಕರು, ಕೂರ್ಗ್ ಜಂಇಯ್ಯತುಲ್ ಉಲಮಾ ಇದರ ಪ್ರಧಾನ ಕಾರ್ಯದರ್ಶಿ ಶೈಖುನಾ ಅಶ್ರಫ್ ಅಹ್ಸನಿ ಹಾಗೂ ದುಆ ಆಶೀರ್ವಚನಕ್ಕೆ ನೇತೃತ್ವ ನೀಡಲು ಸಂಸ್ಥೆಯ ಕಾರ್ಯಾಧ್ಯಕ್ಷರಾದ ಸಯ್ಯದ್ ಮುಹಮ್ಮದ್ ಶಾಫಿ ಬಾ ಅಲವಿ ತಂಙಳ್ ಪಾಲ್ಗೊಳ್ಳಲಿದ್ದಾರೆ.