ಸೋಮವಾರಪೇಟೆ, ಫೆ. ೫: ಕೊಟ್ಟಿಗೆಯಲ್ಲಿದ್ದ ಹಸುವನ್ನು ಕದ್ದು ಸಾಗಿಸುತ್ತಿದ್ದ ಸಂದರ್ಭ ಸಾರ್ವಜನಿಕರು ಪತ್ತೆಹಚ್ಚಿ ಪೊಲೀಸರಿಗೆ ತಿಳಿಸಿದ ಮೇರೆ, ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಪೊಲೀಸರಿಗೆ ತಿಳಿಸಿದ ಮೇರೆ, ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಹಾಸನ ಜಿಲ್ಲೆಯ, ಅರಕಲಗೂಡು ತಾಲ್ಲೂಕಿನ ಹಳ್ಳಿ ಮೈಸೂರು ಗ್ರಾಮದ ಲಿಂಗಪ್ಪ, ಲಿಂಗರಾಜು, ಸೋಮವಾರಪೇಟೆಯ ಗಣಗೂರು-ಗೋಣಿಮರೂರಿನ ಚಂದ್ರಪ್ಪ ಬಂಧಿತ ಆರೋಪಿಗಳು.
ಇಂದು ಬೆಳಿಗ್ಗೆ ಚೌಡ್ಲು ಗ್ರಾಮದ ಪರಮೇಶ್ ಅವರ ಕೊಟ್ಟಿಗೆಯಿಂದ ಹಸುವನ್ನು ಕದ್ದು ಮಸಗೋಡು ಗ್ರಾಮದವರೆಗೆ ನಡೆಸಿಕೊಂಡು ಹೋಗಿ, ಅಲ್ಲಿಂದ ವಾಹನಕ್ಕೆ ಹತ್ತಿಸಿದ ಸಂದರ್ಭ ಸ್ಥಳೀಯರು ಗಮನಿಸಿ, ಪ್ರಶ್ನಿಸಿದ್ದಾರೆ.
ಈ ಸಂದರ್ಭ ಹಸುವನ್ನು ತುಂಬಿಕೊAಡ ವಾಹನ ಬಾಣಾವರ ಮಾರ್ಗದತ್ತ ತೆರಳಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ವಾಹನವನ್ನು ಬೆನ್ನಟ್ಟಿದ್ದಾರೆ. ಗೋಣಿಮರೂರು ಗ್ರಾಮಕ್ಕೆ ತೆರಳುತ್ತಿದ್ದಂತೆ ಪೊಲೀಸರು ಹಾಗೂ ಸಾರ್ವಜನಿಕರು ವಾಹನವನ್ನು ಅಡ್ಡಗಟ್ಟಿ, ಹಸುವನ್ನು ರಕ್ಷಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿ ಮೊಕದ್ದಮೆ ದಾಖಲಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಸೋಮವಾರಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ, ನ್ಯಾಯಾಧೀಶರು ಅರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.