ಕರಿಕೆ, ಫೆ. ೫: ಇಲ್ಲಿಗೆ ಸಮೀಪದ ಪೆರಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊದ್ದೆಟ್ಟಿ ಕುಟುಂಬಸ್ಥರ ಐನ್‌ಮನೆಗೆ ತೆರಳುವ ರಸ್ತೆಗೆ ಶಾಸಕರ ಅನುದಾನದಲ್ಲಿ ನಿರ್ಮಿಸಿದ ರೂ. ೨ ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆಯನ್ನು ವೀರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಉದ್ಘಾಟಿಸಿದರು. ನಂತರ ಹೊದ್ದೆಟ್ಟಿ ಕುಟುಂಬದ ಪರವಾಗಿ ಕುಟುಂಬದ ಯಜಮಾನ ಗುಡ್ಡಪ್ಪ ಶಾಸಕರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಪ್ರಮುಖರಾದ ಸುರೇಶ್ ಪೆರುಮುಂಡ, ಕರಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ನಾಯರ್, ಬೇಕಲ್ ರಮಾನಾಥ ಸೇರಿದಂತೆ ಇತರೆ ಪ್ರಮುಖರು, ಹೊದ್ದೆಟ್ಟಿ ಕುಟುಂಬಸ್ಥರು ಹಾಜರಿದ್ದರು.ಅಧ್ಯಕ್ಷ ಇಸ್ಮಾಯಿಲ್, ಪ್ರಮುಖರಾದ ಸುರೇಶ್ ಪೆರುಮುಂಡ, ಕರಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ನಾಯರ್, ಬೇಕಲ್ ರಮಾನಾಥ ಸೇರಿದಂತೆ ಇತರೆ ಪ್ರಮುಖರು, ಹೊದ್ದೆಟ್ಟಿ ಕುಟುಂಬಸ್ಥರು ಹಾಜರಿದ್ದರು.