ಗೋಣಿಕೊಪ್ಪಲು, ಫೆ. ೫: ರೈತ, ಬೆಳೆಗಾರ ವಿವಿಧ ಹಂತದಲ್ಲಿ ರಾಷ್ಟಿçÃಕೃತ ಬ್ಯಾಂಕ್‌ಗಳಿAದ ಅಗತ್ಯಕ್ಕೆ ತಕ್ಕಂತೆ ತನ್ನ ಜಮೀನನ್ನು ಅಡಮಾನವಾಗಿಟ್ಟು ಬ್ಯಾಂಕ್‌ಗಳಿAದ ಸಾಲ ಪಡೆದಿದ್ದಾನೆ. ಸಕಾಲದಲ್ಲಿ ಬ್ಯಾಂಕಿನ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಅದನ್ನೇ ಮುಂದಿಟ್ಟುಕೊAಡು ಬ್ಯಾಂಕಿನ ಕೆಲವು ಅಧಿಕಾರಿಗಳು ರೈತರ ಮನೆ ಹಾಗೂ ಜಮೀನುಗಳನ್ನು ಹರಾಜು ಹಾಕುವುದು; ಮನೆಯ ಮುಂದೆ ನೋಟೀಸು ಅಂಟಿಸುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ.

ಏಕಾಏಕಿ ಹರಾಜು ಪ್ರಕ್ರಿಯೆಗೆ ಮುಂದಾದಲ್ಲಿ ಅಂತಹ ಬ್ಯಾಂಕ್‌ಗಳಿಗೆ ಬೀಗಜಡಿಯುವ ಕಾರ್ಯಕ್ರಮವನ್ನು ರೈತ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಎಚ್ಚರಿಕೆ ನೀಡಿದ್ದಾರೆ.

ರೈತನ ಸಾಲವನ್ನು ಒಟಿಎಸ್‌ನ ಮೂಲಕ ತೀರಿಸುವ ಅವಕಾಶವಿದ್ದರೂ ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಹಲವು ರೈತರಿಗೆ ಜಮೀನನ್ನು ಹರಾಜು ಮಾಡುವುದಾಗಿ ನೋಟೀಸು ಜಾರಿಗೊಳಿಸಿ ಕಿರುಕುಳ ಹಾಗೂ ಭಯದ ವಾತಾವರಣ ನಿರ್ಮಿಸುತ್ತಿರುವುದು ಸರಿಯಲ್ಲ.

ರೈತರು ಪಡೆದ ಸಾಲವನ್ನು ತೀರಿಸಲು ಮತ್ತಷ್ಟು ಕಾಲಾವಕಾಶ ನೀಡಬೇಕು. ಅಲ್ಲದೆ ಒಟಿಎಸ್ ಮೂಲಕ ಪಡೆದ ಸಾಲವನ್ನು ತೀರಿಸುವ ವ್ಯವಸ್ಥೆ ಕಲ್ಪಿಸಬೇಕು.

ಗೋಣಿಕೊಪ್ಪಲುವಿನ ರಾಷ್ಟಿçÃಕೃತ ಕೆನರಾ ಬ್ಯಾಂಕಿನ ಮುಂಭಾಗದಲ್ಲಿ ರೈತರ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದ ಮನುಸೋಮಯ್ಯ, ಈಗಾಗಲೇ ಜಿಲ್ಲೆಯಲ್ಲಿ ರಾಷ್ಟಿçÃಕೃತ ಬ್ಯಾಂಕ್‌ಗಳು ರೈತರ ಅದಾಲತ್‌ಗಳನ್ನು ನಡೆಸುವ ಮೂಲಕ ರೈತರು ಹಾಗೂ ಬೆಳೆಗಾರರು ಪಡೆದ ಸಾಲವನ್ನು ಮರುಪಾವತಿಸುವ ಯೋಜನೆಯಲ್ಲಿ ಕಾರ್ಯೋನ್ಮುಖವಾಗಿರುವುದು ಶ್ಲಾಘನೀಯ. ಇದರಿಂದ ರೈತನ ಜೀವನ ಸುಧಾರಣೆ ಆಗುತ್ತಿದೆ. ಆತ್ಮಹತ್ಯೆಯಂತಹ ಪ್ರಕರಣಗಳು ಕಡಿಮೆಯಾಗುತ್ತಿವೆ.

ಕೆಲವು ಅಧಿಕಾರಿಗಳು ರೈತರಿಗೆ, ಬೆಳೆಗಾರರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಕೊಡಗಿನಲ್ಲಿ ಈ ಹಿಂದೆ ಅತಿವೃಷ್ಟಿ, ಅನಾವೃಷ್ಟಿ ಹಾಗೂ ಕೊರೊನಾ ಸಂದರ್ಭದಲ್ಲಿ ರೈತ ಕಂಗಾಲಾಗಿದ್ದಾನೆ. ಸಾಲ ಮರುಪಾವತಿಸಲು ಸಾಧ್ಯವಾಗಿರಲಿಲ್ಲ.

ರೈತರು ಪಡೆದ ಸಾಲಕ್ಕೆ ಬಡ್ಡಿ, ಚಕ್ರ ಬಡ್ಡಿ ಹೆಚ್ಚಾಗಿ ಹಾಕಿರುವುದರಿಂದ ರೈತ ಬೇಸರಗೊಂಡಿದ್ದಾನೆ. ಅಲ್ಲದೆ ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ಮನವೊಲಿಸಿ ಪಡೆದ ಸಾಲವನ್ನು ಅದಾಲತ್‌ನಲ್ಲಿ ಒಟಿಎಸ್ ಮೂಲಕ ತೀರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಹರಾಜು ಪ್ರಕ್ರಿಯೆ ನೋಟಿಸನ್ನು ಹಿಂದಕ್ಕೆ ಪಡೆಯಬೇಕು ಎಂದು ಬ್ಯಾಂಕ್ ಅಧಿಕಾರಿಗಳನ್ನು ಒತ್ತಾಯಿಸಿದರು.

ದಕ್ಷಿಣ ಕೊಡಗಿನ ವಿವಿಧ ಭಾಗದ ೨೪ಕ್ಕೂ ಅಧಿಕ ಹಳೆಯ ಸಾಲ ಪಡೆದ ರೈತ ಹಾಗೂ ಬೆಳೆಗಾರರ ಸಮಸ್ಯೆಗಳನ್ನು ಅಧಿಕಾರಿಗಳ ಮುಂದೆ ಅದಾಲತ್‌ನಲ್ಲಿ ಮನುಸೋಮಯ್ಯನವರ ಮುಂದಾಳತ್ವದಲ್ಲಿ ಬಗೆ ಹರಿಸಲಾಯಿತು. ಜಿಲ್ಲೆಯ ಹಲವೆಡೆ ಅದಾಲತ್ ಕಾರ್ಯಕ್ರಮಗಳು ರೈತ ಸಂಘದಿAದ ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಬೆಳೆಗಾರರು ಹಾಗೂ ರೈತರು ಈ ಬಗ್ಗೆ ಸಂಬAಧಿಸಿದ ಸಾಲವನ್ನು ಒಟಿಎಸ್ ಮೂಲಕ ಇತ್ಯರ್ಥಪಡಿಸಲು ಸಹಕಾರ ನೀಡುತ್ತದೆ ಎಂದರು. ಮುಂಜಾನೆಯಿAದ ರಾತ್ರಿ ೭ ಗಂಟೆಯವರೆಗೂ ಅದಾಲತ್ ಕಾರ್ಯಕ್ರಮ ಜರುಗಿತು. ಕೊಡಗು ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ರೈತ ಸಂಘದ ಹಿರಿಯ ಮುಖಂಡರಾದ ಮಂಡೇಪAಡ ಪ್ರವೀಣ್, ಪುಚ್ಚಿಮಾಡ ರಾಯ್ ಮಾದಪ್ಪ, ಬ್ಯಾಂಕಿನ ಹಿರಿಯ ವ್ಯವಸ್ಥಾಪಕರು, ಕಿರಿಯ ಅಧಿಕಾರಿಗಳು ಸೇರಿದಂತೆ ಅನೇಕ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.