ಸೋಮವಾರಪೇಟೆ, ಫೆ. ೪: ರಥ ಸಪ್ತಮಿ ಅಂಗವಾಗಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ಸಮೀಪದ ದೊಡ್ಡಮಳ್ತೆ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಹೊನ್ನಮ್ಮನ ಕೆರೆ ದಡದಲ್ಲಿ ೧೦೮ ಸೂರ್ಯ ನಮಸ್ಕಾರ ನಡೆಯಿತು.

ನಸುಕಿನ ಜಾವ ಓಂಕಾರದೊAದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಭಾಗಿಯಾದ ಸಾರ್ವಜನಿಕರು ೧೦೮ ಸೂರ್ಯ ನಮಸ್ಕಾರ ಮಾಡಿದರು. ನಂತರ ದೇವಾಲಯದಲ್ಲಿ ವಿಶೇಷ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.

ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶಿಕ್ಷಕಿ ರಾಗಿಣಿ ಅವರ ನೇತೃತ್ವದಲ್ಲಿ ನಡೆದ ರಥ ಸಪ್ತಮಿ ಕಾರ್ಯಕ್ರಮದಲ್ಲಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಭಾಗದಿಂದಲೂ ಸಂಸ್ಥೆಯ ಸ್ವಯಂಸೇವಕರು, ಸಾರ್ವಜನಿಕರು ಭಾಗಿಯಾಗಿದ್ದರು.

೧೦೮ ಸೂರ್ಯ ನಮಸ್ಕಾರದಲ್ಲಿ ಭಾಗಿಯಾದ ಪೊಲೀಸ್ ಇನ್ಸ್ಪೆಕ್ಟರ್ ಮುದ್ದು ಮಹದೇವ ಮಾತನಾಡಿ, ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿಯಾಗಿದ್ದು, ನಿರಂತರವಾಗಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯೋಗ, ಧ್ಯಾನ, ಪ್ರಾಣಾಯಾಮಗಳ ಮಹತ್ವದ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಗೌಡಳ್ಳಿ ಗ್ರಾ.ಪಂ. ಸದಸ್ಯ ನವೀನ್ ಅಜ್ಜಳ್ಳಿ, ಹಿರಿಯ ಸಹಕಾರಿ ಕೊಮಾರಪ್ಪ, ಪ.ಪಂ. ಸದಸ್ಯ ಮೃತ್ಯುಂಜಯ, ಪ್ರಮುಖರಾದ ಬಿ.ಡಿ. ಸುದರ್ಶನ್, ಡಾ. ಸುಪರ್ಣ ಕೃಷ್ಣಾನಂದ್, ದೊಡ್ಡಮಳ್ತೆ ಗ್ರಾಮಾಧ್ಯಕ್ಷ ವೀರೇಶ್, ಸಿ.ಕೆ. ಆರ್ಮಿ ಅಕಾಡೆಮಿಯ ನಂಗಾರು ಚಂದ್ರಕುಮಾರ್ ಸೇರಿದಂತೆ ಇತರರು ಇದ್ದರು.