ಮಡಿಕೇರಿ, ಫೆ. ೪: ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನಿಸುವುದು, ಅವರನ್ನು ಗುರುತಿಸುವುದು ಸಾಮಾನ್ಯವಾಗಿರುವಾಗ ಇಲ್ಲೊಬ್ಬ ಅಧ್ಯಾಪಕಿ ವಿದ್ಯಾರ್ಥಿಗಳ ಸಾಧನೆಗೆ ಕಾರಣರಾಗುವ ತಾಯಂದಿರಿಗೆ ಸನ್ಮಾನಿಸಿ ಉದಾರತೆ ಮೆರೆದರು.

ಕಡಗದಾಳು ಸರಕಾರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿದ್ದು ಇದೀಗ ಮಕ್ಕಂದೂರು ಪ್ರೌಢಶಾಲೆಗೆ ವರ್ಗವಾಗಿರುವ ರತಿ ವಿನೋದ್ ಅವರು ಕಡಗದಾಳಿನ ೨೦ಕ್ಕೂ ಅಧಿಕ ತಾಯಂದಿರಿಗೆ ಸನ್ಮಾನಿಸಿದರು. ಹಾರ, ಶಾಲ್ ಜೊತೆಗೆ ಬೆಳ್ಳಿಯ ಫಲಕಗಳನ್ನು ನೀಡಿದ್ದು ಸಂಪೂರ್ಣ ವೆಚ್ಚ ತಾವೇ ಭರಿಸಿ ಹೃದಯ ವೈಶಾಲ್ಯ ಮೆರೆದಿದ್ದಾರೆ.

ತಾರೀಕು ೧ರಂದು ಕಡಗದಾಳು ಶಾಲೆಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸಾರ್ವಜನಿಕರು, ಪೋಷಕರು, ಅಧ್ಯಾಪಕರು ರತಿ ವಿನೋದ್ ಅವರನ್ನು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು.

ಕಡಗದಾಳು ಶಾಲೆಯ ಹೆಚ್ಚಿನ ವಿದ್ಯಾರ್ಥಿಗಳು ತೋಟ ಕಾರ್ಮಿಕರು ಹಾಗೂ ಇತರ ಹಿನ್ನೆಲೆಯಲ್ಲಿ ಬೆಳೆದು ಬಂದ ಅತ್ಯುತ್ತಮ ಫಲಿತಾಂಶದೊAದಿಗೆ ಉತ್ತೀರ್ಣರಾಗಿ ಗೌರವಾನ್ವಿತ ವೃತ್ತಿ ಮತ್ತು ಉದ್ಯೋಗದಲ್ಲೂ ಇದ್ದಾರೆ. ಸನ್ಮಾನಿತ ಮಾತೆಯರಲ್ಲಿ ಕಡಗದಾಳು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಭಾರತಿ ಅವರು ಇದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ. ದೊಡ್ಡೆಗೌಡ, ಕೊಡಗು ಜಾನಪದ ಪರಿಷತ್ತು ಅಧ್ಯಕ್ಷ ಬಿ.ಜಿ. ಅನಂತಶಯನ, ಸಾಹಿತಿ ನಾಗೇಶ್ ಕಾಲೂರು, ಮಕ್ಕಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎನ್. ರಮೇಶ್, ಉಪನ್ಯಾಸಕಿ ಜಯಲಕ್ಷಿö್ಮ, ಹಿರಿಯ ಶಿಕ್ಷಕಿ ಲತಾ, ನಿವೃತ್ತ ಶಿಕ್ಷಕಿ ನೀಲಮ್ಮ, ಅಧ್ಯಾಪಕಿ ಭಾರತಿ, ನಿವೃತ್ತ ಶಿಕ್ಷಕಿ ಜಲಜ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಜರ್, ಉದ್ಯಮಿ ಉಮೇಶ್ ಅತಿಥಿಗಳಾಗಿ ಭಾಗವಹಿಸಿದ್ದರು.

ಅಧ್ಯಾಪಕಿ ರತಿ ವಿನೋದ್ ಅವರ ವಿಶಿಷ್ಟ ಚಿಂತನೆಯನ್ನು ಎಲ್ಲರೂ ಶ್ಲಾಘಿಸಿ, ಇತರ ಶಾಲೆಗಳಿಗೆ ಇದೊಂದು ಮಾದರಿ ಎಂದು ಪ್ರಶಂಶಿಸಿದರು.