ನಾಪೋಕ್ಲು, ಫೆ. ೪: ಮೂರ್ನಾಡಿನ ಆಪ್ತಮಿತ್ರರು ಬಳಗದ ಸೇವಾರ್ಥವಾಗಿ ತಾ. ೮ ರಂದು ಮೂರ್ನಾಡಿನಲ್ಲಿ ಸಾಕೇತ ಸಾಮ್ರಾಜ್ಞೆ ಎಂಬ ಯಕ್ಷಗಾನ ಆಯೋಜಿಸ ಲಾಗಿದೆ. ಮೂರ್ನಾಡಿನ ಪಾಂಡಾಣೆ ನಾಡ್ ಮಂದ್ ಶಾಲಾ ಮೈದಾನದಲ್ಲಿ ಹನುಮಗಿರಿಯ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ವತಿಯಿಂದ ನಡೆಯುವ ಯಕ್ಷಗಾನ ಪ್ರದರ್ಶನವು ಸಂಜೆ ೬ ಗಂಟೆಯಿAದ ರಾತ್ರಿ ೧೨ ಗಂಟೆಯವರೆಗೆ ನಡೆಯಲಿದೆ. ಎರಡನೇ ವರ್ಷದ ಕಾರ್ಯಕ್ರಮ ಇದಾಗಿದ್ದು ಊಟೋಪಚಾರದ ವ್ಯವಸ್ಥೆ ಇರುತ್ತದೆ.
ಹಿಮ್ಮೇಳದಲ್ಲಿ ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆ, ಕಲ್ಲಡ್ಕ ಚಿನ್ಮಯ ಭಟ್, ಚಂಡೆ ಮತ್ತು ಮದ್ದಳೆ ಕಲಾವಿದರಾಗಿ ದೇಲಂತಮಜಲು ಸುಬ್ರಮಣ್ಯ ಭಟ್, ಚೈತನ್ಯ ಕೃಷ್ಣ ಪದ್ಯಾಣ, ಶ್ರೀಧರ ವಟ್ಲ, ಕೌಶಲ್ ರಾವ್ ಪುತ್ತಿಗೆ ಪಾಲ್ಗೊಳ್ಳಲಿದ್ದಾರೆ. ಚಕ್ರತಾಳ ನಿಶ್ವತ್ ಜೋಗಿ ಜೋಡುಕಲ್ಲು ಹಾಸ್ಯ ಕಲಾವಿದರಾಗಿ ಸೀತಾರಾಮ ಕುಮಾರ್ ಕಟೀಲ್, ಮೋಹನ್ ಮುಚ್ಚುರ್, ಸ್ತಿçà ವೇಷದಲ್ಲಿ ಸಂತೋಷ್ ಕುಮಾರ್ ಹಿಲಿಯಾಣ, ರಕ್ಷಿತ್ ಶೆಟ್ಟಿ ಪಡ್ರೆ, ಸತೀಶ್ ನೀರ್ಕರೆ, ಮಹೇಶ್ ಎಡನೀರು ಪಾಲ್ಗೊಳ್ಳುವರು.
ಮುಮ್ಮೇಳದಲ್ಲಿ ವಾಸುದೇವ ರಂಗ ಭಟ್ ಮಧೂರು, ಸದಾಶಿವ ಕುಲಾಲ್ ವೇಣೂರು, ಪ್ರಸಾದ್ ಸವಣೂರು, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ. ದಿವಾಕರ ರೈ ಸಂಪಾಜೆ, ಶಿವರಾಜ್ ಬಜಕೂಡ್ಲು, ಸಿದ್ದ ಕಟ್ಟೆ ಸದಾಶಿವ ಶೆಟ್ಟಿಗಾರ್, ಪೆರ್ಲ ಜಗನ್ನಾಥ ಶೆಟ್ಟಿ, ಜಗದಾಭಿರಾನ ಪಡುಬಿದ್ರಿ, ಪ್ರಜ್ವಲ್ ಕುಮಾರ್, ಅಜಿತ್ ಪುತ್ತಿಗೆ, ಮುಕೇಶ್ ದೇವಧರ್ ನಿಡ್ಲೇ, ಸತೀಶ್ ಎಡಮೊಗೆ, ರೂಪೇಶ್ ಆಚಾರ್ಯ, ಅಭಿಷೇಕ ಕಲ್ಲಡ್ಕ ಹಾಗೂ ಅತಿಥಿ ಕಲಾವಿದರಾಗಿ ಉಬರಡ್ಕ ಉಮೇಶ್ ಶೆಟ್ಟಿ, ಶಶಿಧರ ಕುಲಾಲ್ ಕನ್ಯಾನ ಹಾಗೂ ವ್ಯವಸ್ಥಾಪಕ ಹರೀಶ್ ಬಳಂತಿಮೊಗೇರು ಪಾಲ್ಗೊಳ್ಳುವರು ಎಂದು ಮೂರ್ನಾಡು ಆಪ್ತಮಿತ್ರರು ಬಳಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.