ಮಡಿಕೇರಿ, ಫೆ. ೪: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಶತಮಾನೋತ್ಸವ ‘ಉನ್ನತಿ’ ಭವನದ ಮೊದಲ ವಾರ್ಷಿಕೋತ್ಸವದ ಸಂಭ್ರಮದ ಹಿನ್ನಲೆಯಲ್ಲಿ ಜಿಲ್ಲೆಯ ಜನತೆಗೆ ಹಾಗೂ ಕೃಷಿಕರಿಗೆ ಮಡಿಕೇರಿಯ ಗಾಂಧಿ ಮೈದಾನದಲ್ಲಿ ವಾಹನ ಹಾಗೂ ಕೃಷಿಯಂತ್ರೋಪಕರಣಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿತ್ತು.
ಸಾಲ ಮೇಳ ಕಾರ್ಯಕ್ರಮವನ್ನು ಕೊಡಗು ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷ ಕೊಡಂದೆರ ಪಿ. ಗಣಪತಿ ಅವರು ಉದ್ಘಾಟಿಸಿದರು. ಬ್ಯಾಂಕಿನ ಉಪಾಧ್ಯಕ್ಷರಾದ ಕೇಟೋಳಿರ ಎಸ್. ಪೂವಯ್ಯ, ಬ್ಯಾಂಕಿನ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಎರಡು ದಿನಗಳಲ್ಲಿ ನಡೆದ ಸಾಲ ಮೇಳದಲ್ಲಿ ೧೪ ಕಾರು ವಿತರಕ ಸಂಸ್ಥೆಯವರು, ೭ ದ್ವಿಚಕ್ರ ವಿತರಕ ಸಂಸ್ಥೆಯವರು ಹಾಗೂ ೮ ಕೃಷಿ ಪರಿಕರಗಳನ್ನು ವಿತರಿಸುವ ಸಂಸ್ಥೆಗಳು ಪಾಲ್ಗೊಂಡಿದ್ದವು. ಜಿಲ್ಲೆಯ ವಿವಿಧ ಭಾಗಗಳಿಂದ ಸಾರ್ವಜನಿಕರು ಮೇಳದಲ್ಲಿ ಭಾಗವಹಿಸಿ ತಮಗಿಷ್ಟವಾದ ವಾಹನಗಳನ್ನು ಖರೀದಿಸಲು ಆಸಕ್ತಿ ವಹಿಸಿದ್ದರು. ೨ ದಿನಗಳ ಕಾಲ ನಡೆದ ಸಾಲ ಮೇಳದಲ್ಲಿ ೧೩೮ ಜನ ಗ್ರಾಹಕರು ೧೯.೯೫ ಕೋಟಿ ಮೊತ್ತದ ನಾಲ್ಕು ಚಕ್ರದ ವಾಹನ. ೩೨ ಗ್ರಾಹಕರು ೪೯.೦೫ ಲಕ್ಷದ ದ್ವಿಚಕ್ರದ ವಾಹನ ಹಾಗೂ ೨೪ ಗ್ರಾಹಕರು ೧.೩೩ ಕೋಟಿ ಮೊತ್ತದ ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ಕೊಟೇಶನ್‌ಗಳನ್ನು ಪಡೆದುಕೊಂಡರು.
ಮೇಳದಲ್ಲಿ ಒಟ್ಟು ರೂ. ೨೧.೭೮ ಕೋಟಿ ಮೊತ್ತದ ವಾಹನ ಹಾಗೂ ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ಬ್ಯಾಂಕಿನಿAದ ಸಾಲ ಪಡೆಯುವ ಗ್ರಾಹಕರಿಗೆ ಸ್ಥಳದಲ್ಲೇ ಸಾಲದ ಅರ್ಹತಾ ಪ್ರಮಾಣ ಪತ್ರವನ್ನು ವಿತರಿಸಲಾಯಿತು.