ಗೋಣಿಕೊಪ್ಪಲು, ಫೆ. ೪: ಕೊಡವಾಮೆ ಬಾಳೋ... ಪಾದಯಾತ್ರೆ ದಿನೇ ದಿನೇ ರಂಗೇರುತ್ತಿದೆ. ಸ್ವಯಂಪ್ರೇರಿತರಾಗಿ ಸಾವಿರಾರು ಮಂದಿ ಸುಡುಬಿಸಿಲನ್ನೂ ಲೆಕ್ಕಿಸದೆ, ಸಾಂಪ್ರದಾಯಿಕ ಧಿರಿಸಿನಲ್ಲಿ ರಸ್ತೆಗಿಳಿಯುತ್ತಿದ್ದಾರೆ... ಪಾದಯಾತ್ರೆಯ ಮೂಲಕ ಆಗಮಿಸುತ್ತಿರುವವರಿಗೆ ಮಾರ್ಗದ ನಡುವೆ ಅಲ್ಲಲ್ಲಿ ವಾಲಗ, ದುಡಿಕೊಟ್ಟ್ಪಾಟ್, ತಳಿಯತಕ್ಕಿ ಬೊಳ್‌ಚ ಸಹಿತವಾಗಿ ಅಲ್ಲಲ್ಲಿ ಹೃದಯಸ್ಪರ್ಶಿಯಾದ ಸ್ವಾಗತ, ಹೂಮಳೆಯ ಸಂಭ್ರಮ, ಈಡುಗಾಯಿ ಒಡೆಯುವುದು, ತಂಪು ಪಾನೀಯ, ಕಾಫಿ - ತಿಂಡಿಯ ಉಪಚಾರ, ಊಟದ ವ್ಯವಸ್ಥೆ ವಿಶೇಷವಾಗಿದ್ದರೆ, ಸಾರ್ವಜನಿಕವಾದ ಜನ-ಜೀವನ, ವಾಹನ ಓಡಾಟಕ್ಕೆ ಅಡಚಣೆಗಳಾಗದಂತೆ ಶಿಸ್ತುಬದ್ಧವಾದ ನಡಿಗೆ ಮಡಿಕೇರಿಯತ್ತ ಸಾಗಿಬರುತ್ತಿದೆ. ಮೂರನೇ ದಿನವಾದ ಇಂದು ಪೊನ್ನಂಪೇಟೆ ಕೊಡವ ಸಮಾಜದಿಂದ ಆರಂಭಗೊAಡ ನಡಿಗೆ ಬಿಟ್ಟಂಗಾಲದ ಹೆಗ್ಗಡೆ ಸಮಾಜದ ಅದ್ಧೂರಿಯ ಸ್ವಾಗತದೊಂದಿಗೆ ಹೆಗ್ಗಡೆ ಸಮಾಜದಲ್ಲಿ ಸಮಾಪನಗೊಂಡಿತು.

ಪೊನ್ನAಪೇಟೆಯಿAದಲೇ ಮೊದಲ್ಗೊಂಡು, ಪ್ರಮುಖರ ಪ್ರತಿಮೆ, ಪುತ್ಥಳಿಗೆ ಮಾಲಾರ್ಪಣೆ, ನಡುನಡುವೆ, ವಾಲಗಕ್ಕೆ ಒಂದೆರಡು ಹೆಜ್ಜೆ ಸಹಿತವಾಗಿ, ಸಾವಿರಾರು ಮಂದಿಯ ಸಾಮೂಹಿಕ ನಡಿಗೆಯೊಂದಿಗೆ ಮುಂದುವರೆಯಿತು. ಪುರುಷರು, ಮಹಿಳೆಯರು, ಹಿರಿಯರೊಂದಿಗೆ ಪುಟ್ಟ ಮಕ್ಕಳೂ ಹೆಜ್ಜೆ ಹಾಕುತ್ತಿರುವುದು ವಿಶೇಷವಾಗಿದೆ.

ಇಂದಿನ ನಡಿಗೆ ಹೇಗಿತ್ತು...?

೩ನೇ ದಿನದ ಕೊಡವಾಮೆ ಬಾಳೋ ಪಾದಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು ಕೊಡವ-ಕೊಡವ ಭಾಷಿಕ ಸಮುದಾಯ ಬಾಂಧವರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕೊಡಗಿನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅತೀದೊಡ್ಡ ಪ್ರಮಾಣದಲ್ಲಿ ಯಶಸ್ಸು ಕಾಣುತ್ತಿದೆ.

ತಾವು ನಿರೀಕ್ಷಿಸದ ಮಟ್ಟದಲ್ಲಿ ರಸ್ತೆಯ ಉದ್ದಗಲಕ್ಕೂ ಪಾದಯಾತ್ರೆಗೆ ಅಭೂತಪೂರ್ವ ಸ್ವಾಗತ ದೊರೆಯುತ್ತಿದ್ದು ಮಹಿಳೆಯರು ತಳಿಯತಕ್ಕಿ ಬೊಳ್ಚ ಹಿಡಿದು ಸ್ವಾಗತ ನೀಡುತ್ತಿದ್ದಾರೆ. ಪಾದಯಾತ್ರೆಯಲ್ಲಿ ಮಕ್ಕಳು, ಪುರುಷರು, ಮಹಿಳೆಯರು, ಭಾಗವಹಿಸುತ್ತಿದ್ದಾರೆ. ಕೊಡವ ಸಾಂಪ್ರದಾಯಿಕ ಉಡುಪು ತೊಟ್ಟ ಮಹಿಳೆಯರು, ಪುರುಷರು ಹಾಗೂ ಮಕ್ಕಳು ಉರಿ ಬಿಸಿಲನ್ನು ಲೆಕ್ಕಿಸದೆ ಪಾಲ್ಗೊಳ್ಳುತ್ತಿದ್ದಾರೆ.

೩ನೇ ದಿನದ ಕೊಡವಾಮೆ ಬಾಳೋ ಪಾದಯಾತ್ರೆಯು ಮುಂಜಾನೆ ೧೦ ಗಂಟೆಗೆ ಪೊನ್ನಂಪೇಟೆ ಯ ಕೊಡವ ಸಮಾಜದ ಆವರಣ ದಿಂದ ಹಿರಿಯರ ಆರ್ಶೀವಾದ ದೊಂದಿಗೆ ಆರಂಭ ವಾಯಿತು. ಕೊಡವ ಸಮಾಜದ ಆವರಣದಲ್ಲಿ ಸಾವಿರಾರು ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಸಂಖ್ಯೆಯಲ್ಲಿ ಸಮುದಾಯ ಬಾಂಧವರು ನೆರೆದಿದ್ದರು. ಪಟ್ಟಣದಲ್ಲಿ ಪಾದಯಾತ್ರೆ ಸಾಗುತ್ತಿದ್ದಂತೆಯೇ ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಜನರು ತಾವಾಗಿಯೇ ಸೇರಿಕೊಂಡರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು. ಉರಿ ಬಿಸಿಲನ್ನು ಲೆಕ್ಕಿಸದೆ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಹೆಜ್ಜೆ ಹಾಕುತ್ತ ಸಾಗಿದರು.

ಪೊನ್ನಂಪೇಟೆಯ ಮಹಾತ್ಮ ಗಾಂಧೀಜಿ ಪುತ್ಥಳಿಗೆ, ದಿವಾನ್ ಪೊನ್ನಪ್ಪನವರ ಪ್ರತಿಮೆಗೆ ಮೆರವಣಿಗೆ ಯಲ್ಲಿದ್ದ ಸಂಘಟಕರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಪೊನ್ನಂಪೇಟೆಯ ಸಾಯಿಶಂಕರ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಝರುಗಣಪತಿ ಮುಂದಾಳತ್ವದಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಗಳು ತಹಶೀಲ್ದಾರ್ ಕಚೇರಿಯ ಮುಂದೆ ಪಾದಯಾತ್ರೆಯನ್ನು ಸಾಂಪ್ರದಾಯಿಕ ವಾಗಿ ಬರಮಾಡಿ ಕೊಂಡರಲ್ಲದೆ, ಮೆರವಣಿಗೆಯಲ್ಲಿ ಜೊತೆಗೂಡಿ ಹೆಜ್ಜೆ ಹಾಕಿದರು.

ಮುಂದೆ ಸಾಗಿದಾಗ ಪೊನ್ನಂಪೇಟೆಯ ಕುಂದ ರಸ್ತೆಯ ಕಾವೇರಿ ಕೊಡವ ಕೂಟ, ಜೋಡುಬೀಟಿ ಕೊಡವಕೂಟ, ಮೂಕಳೆರ ಕುಟುಂಬಸ್ಥರು, ಅರುವತ್ತೋಕ್ಲು, ಗೋಣಿಕೊಪ್ಪ ಗರಿಕೇರಿ ಕೊಡವ ಸಮುದಾಯದ ಬಾಂಧವರು, ಕಿಗ್ಗಟ್ಟುನಾಡು, ಕೊಡವ ಹಿತರಕ್ಷಣ ಬಳಗ, ಕಾಡ್ಯಮಾಡ ಕುಟುಂಬಸ್ತರು ಗೋಣಿಕೊಪ್ಪಲುವಿನ ಸೌತ್‌ಕೂರ್ಗ್ ಕ್ಲಬ್, ಕೈಕೇರಿಯ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸಿ.ಕೆ.ಬೋಪಣ್ಣ ಪಾದಯಾತ್ರೆಯನ್ನು ಬರಮಾಡಿ ಕೊಂಡರು.

ಕೊಡವಾಮೆ ಬಾಳೋ ಪಾದಯಾತ್ರೆಯಲ್ಲಿ ಕೊಡವ ಹಾಗೂ ಕೊಡವ ಭಾಷಿಕರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕೊಡವ ಸಂಸ್ಕೃತಿಯ ಉಳಿವು ಅಸ್ತಿತ್ವದ ವಿಚಾರವನ್ನು ಮುಂದಿರಿಸಿ ಹಮ್ಮಿಕೊಂಡಿರುವ ಪಾದಯಾತ್ರೆಯು ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಮುನ್ನಡೆಯುತ್ತಿದೆ. ಅಪಾರ ಜನಸ್ತೋಮ, ಸಾಮೂಹಿಕ ಪಾಲ್ಗೊಳ್ಳುವಿಕೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸುತ್ತಿರುವ ಅಭಿಮಾನಿಗಳು ಹೊಸ ಹುರುಪಿ ನೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ.

ಗೋಣಿಕೊಪ್ಪಲು ಪಾದಯಾತ್ರೆ ಯನ್ನು ಗೋಣಿಕೊಪ್ಪ ನಗರದಲ್ಲಿ ಕೊಡವ ಸಮಾಜ, ಇಗ್ಗುತ್ತಪ್ಪ ಕೊಡವ ಸಂಘ, ಸವಿತಾ ಸಮಾಜ, ನ್ಯಾಷನಲ್ ಆಕಾಡೆಮಿ ಶಾಲೆಯ ವಿದ್ಯಾರ್ಥಿಗಳು, ಅಧ್ಯಾಪಕರು ಸೇರಿದಂತೆ ವಿವಿಧ ಭಾಷಿಕ ಸಮುದಾಯ ಬಾಂಧವರು, ಕಾವೇರಿ ಕಾಲೇಜು ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕೊಡಗಿನ ಸಾಂಪ್ರದಾಯಿಕ ವಾಲಗದೊಂದಿಗೆ ಅದ್ದೂರಿ ಸ್ವಾಗತ ನೀಡಿ ಬರಮಾಡಿಕೊಂಡರು. ಮೆರವಣಿಗೆಯಲ್ಲಿ ಸಾಗಿ ಬಂದ ಸಾವಿರಾರು ಜನರಿಗೆ ವಿಶೇಷ ತಿಂಡಿಗಳು, ಪಾನೀಯಗಳನ್ನು ವಿತರಿಸಿದರು.

ಗೋಣಿಕೊಪ್ಪ- ಪೊನ್ನಂಪೇಟೆ ಅವಳಿ ನಗರದಲ್ಲಿ ಪಾದಯಾತ್ರೆಯು ಸಾಗಿ ಬರುತ್ತಿದ್ದಂತೆಯೇ ಕೊಂಚ ಮಟ್ಟಿಗೆ ಟ್ರಾಫಿಕ್ ಸಮಸ್ಯೆ ಎದುರಾಯಿತು. ಪೊಲೀಸರು ಸಕಾಲದಲ್ಲಿ ಟ್ರಾಫಿಕ್ ಸುವ್ಯವಸ್ಥೆ ನಿಭಾಯಿಸಿದರು. ರಸ್ತೆಯ ಉದ್ದಗಲಕ್ಕೂ ಪೊಲೀಸರು ಸೂಕ್ತ ಗೋಣಿಕೊಪ್ಪಲು ಕಾವೇರಿ ಕಾಲೇಜು ಅವರಣದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಜೋಡಿ ಪ್ರತಿಮೆಗಳಿಗೆ ಪುಷ್ಪಮಾಲೆ ಹಾಕಿ ಗೌರವ ಸಲ್ಲಿಸಲಾಯಿತು. ನಂತರ ಕಾವೇರಿ ಕಾಲೇಜು ವತಿಯಿಂದ ಕಾಲೇಜು ಮುಂಭಾಗದಲ್ಲಿ ಅವರನ್ನು ಸ್ವಾಗತಿಸುವ ಮೂಲಕ ಬೆಂಬಲ ಸೂಚಿಸಿ, ತಂಪು ಪಾನೀಯ ನೀಡಿ, ಉಪಚರಿಸಿ ಪಾದಯಾತ್ರೆಗೆ ಶುಭಕೋರಲಾಯಿತು.ಬಂದೋಬಸ್ತ್ ಕೈಗೊಂಡಿದ್ದರು. ಮೆರವಣಿಗೆಯಲ್ಲಿ ಬರುವ ಸಾವಿರಾರು ಮಂದಿಗೆ ರಸ್ತೆಯ ಒಂದು ಬದಿಯಲ್ಲಿ ಮಜ್ಜಿಗೆ, ವಿವಿಧ ರೀತಿಯ ಶರಬತ್ತ್, ಕಬ್ಬಿನ ಹಾಲು ನೀರು ಹಾಗೂ ಹಣ್ಣುಗಳನ್ನು ಸ್ವಯಂ ಪ್ರೇರಿತರಾಗಿ ವಿತರಿಸಿದರು. ನಡಿಗೆಯಲ್ಲಿ ಪಾಲ್ಗೊಳ್ಳುತ್ತಿರುವವರೂ ವಾಹನ ಸಂಚಾರದ ಸುಗಮ ವ್ಯವಸ್ಥೆಗೆ ಸಹಕಾರ ನೀಡುತ್ತಾ, ಮುಂದುವರೆಯುತ್ತಿದ್ದರು.

ಮಧ್ಯಾಹ್ನ ೨ ಗಂಟೆಯ ಊಟ ಮುಗಿಸಿದ ತರುವಾಯ ಪಾದಯಾತ್ರೆಯು ಕೈಕೇರಿ ಭಗವತಿ ದೇವಾಲಯದಿಂದ ಹೊರಟು ಸಂಜೆಯ ೫ ಗಂಟೆಯ ವೇಳೆ ಬಿಟ್ಟಂಗಾಲದ ಹೆಗ್ಗಡೆ ಸಮಾಜದ ಆವರಣಕ್ಕೆ ತಲುಪಿತು. ಹೆಗ್ಗಡೆ ಸಮಾಜದ ಬಾಂಧವರು ಪಾದಯಾತ್ರೆ ಯನ್ನು ಬರಮಾಡಿಕೊಂಡರಲ್ಲದೆ, ತಳಿಯತಕ್ಕಿ ಬೊಳಕ್- ದುಡಿಕೊಟ್ಟ್ ಪಾಟ್‌ನೊಂದಿಗೆ ಸಮಾಜಕ್ಕೆ ಕರೆದೊಯ್ದರು.

ಇಲ್ಲಿಗೆ ೩ನೇ ದಿನದ ಜಾಥಾ ಮುಕ್ತಾಯಗೊಂಡಿತು. ತಾ. ೫ರಂದು (ಇಂದು) ಬಿಟ್ಟಂಗಾಲದಿAದ ಪಾದಯಾತ್ರೆ ಮುಂದುವರಿಯಲಿದೆ.

-ಹೆಚ್.ಕೆ. ಜಗದೀಶ್

*೩ನೇ ದಿನದ ಪಾದಯಾತ್ರೆಯಲ್ಲಿ ಪಾಲ್ಗೊಂಡ ಸಾವಿರಾರು ಮಂದಿಗೆ ಕೈಕೇರಿಯ ಭಗವತಿ ದೇವಾಲಯದ ಆವರಣದಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ಡಿವೈಎಸ್ಪಿ ಮಹೇಶ್ ಕುಮಾರ್ ಖುದ್ದಾಗಿ ಬಂದೋಬಸ್ತ್ ಕಾರ್ಯವನ್ನು ಉಸ್ತುವಾರಿ ವಹಿಸಿದ್ದರು. ವಾಹನಗಳ ಸಂಚಾರಕ್ಕೆ ತೊಂದರೆಯಾಗದ ರೀತಿಯಲ್ಲಿ ಪೊಲೀಸರು ಕಾರ್ಯ ನಿರ್ವಹಿಸಿದರು.

*ಹೈಸೊಡ್ಲೂರು ಗ್ರಾಮದ ಬಯವಂಡ ಸರಸ್ವತಿ ಪೂವಯ್ಯ ತಮ್ಮ ೮೬ ವಯಸ್ಸಿನಲ್ಲಿಯೂ ನಡೆಯ ಲಾಗದಿದ್ದರೂ, ನಿನ್ನೆಯಿಂದಲೇ ವೀಲ್ ಚೇರ್‌ನಲ್ಲಿ ೩ನೇ ದಿನದ ಪಾದಯಾತ್ರೆಗೆ ಆಗಮಿಸಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತಿರುವುದು ವಿಶೇಷವಾಗಿದೆ.

* ಹಾಕಿ ಒಲಂಪಿಯನ್ ಬಾಳೆಯಡ ಸುಬ್ರಮಣಿ ಹಾಗೂ ಎಸ್.ಕೆ. ಉತ್ತಪ್ಪ, ಕೊಡವಾಮೇ ಬಾಳೋ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

* ಪಾದಯಾತ್ರೆಗೆ ಹಲವೆಡೆ ಮಹಿಳೆಯರು ಸಾಂಪ್ರದಾಯಿಕ ತಳಿಯತಕ್ಕಿ ಬೊಳಕ್‌ನೊಂದಿಗೆ ಭಾಗವಹಿಸಿ ಸ್ವಾಗತ ಕೋರಿದರೆ, ವಾಲಗ, ದುಡಿಕೊಟ್ಟ್ ಪಾಟ್‌ನ ಸ್ವಾಗತವೂ ಕಂಡುಬAದಿತು.

* ಪಾದಯಾತ್ರೆಗೆ ಕೊಡಗಿನ ಸಾಂಪ್ರದಾಯಿಕ ವಾಲಗ ಮೆರುಗು ನೀಡಿತು. ಬಿಸಿಲಿನ ತಾಪವನ್ನು ಲೆಕ್ಕಿಸದೆ ಮಹಿಳೆಯರು ವಾಲಗತ್ತಾಟ್‌ಗೆ ನೃತ್ಯ ಪ್ರದರ್ಶನ ಮಾಡುವ ಮೂಲಕ ಗಮನ ಸೆಳೆದರು.

* ಗೋಣಿಕೊಪ್ಪಲುವಿನ ಸೌತ್ ಕೂರ್ಗ್ ಕ್ಲಬ್ ಅಸೋಸಿಯೇಷನ್ ವತಿಯಿಂದ ಮೆರವಣಿಗೆಗೆ ದೊಡ್ಡ ಪ್ರಮಾಣದಲ್ಲಿ ಹೂ ಮಳೆ ಸ್ವಾಗತ ನೀಡಲಾಯಿತು.