ಮಡಿಕೇರಿ, ಜ. ೪: ಶ್ರೀ ಕೋದಂಡರಾಮ ದೇವಾಲಯದ ಟ್ರಸ್ಟ್ ವತಿಯಿಂದ ತಾ. ೨ ರಂದು ಟ್ರಸ್ಟ್ನ ಅಧ್ಯಕ್ಷ ನಂಜುAಡ ಅವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆಯಲಾಗಿತ್ತು. ಶ್ರೀ ರಾಮನವಮಿ ಆಚರಣೆಯನ್ನು ಈ ಬಾರಿ ಮಡಿಕೇರಿ ನಗರದಾದ್ಯಂತ ವಿಜೃಂಭಣೆಯಿAದ ಆಚರಿಸುವಂತೆ ನಿರ್ಣಯವನ್ನು ಕೈಗೊಳ್ಳಲಾಯಿತು.

ಮಡಿಕೇರಿ ನಗರದ ದೇವಾಲಯಗಳ ಅಧ್ಯಕ್ಷರುಗಳು, ವಿವಿಧ ಸಮುದಾಯಗಳ ಅಧ್ಯಕ್ಷರುಗಳನ್ನು ಒಳಗೊಂಡು ಒಂದು ಸಮಿತಿಯನ್ನು ರಚಿಸುವಂತೆ ತೀರ್ಮಾನಿಸಲಾಯಿತು. ಶ್ರೀ ರಾಮೋತ್ಸವ ಸಮಿತಿಯ ಅಧ್ಯಕ್ಷರನ್ನಾಗಿ ದೇವಾಲಯ ಟ್ರಸ್ಟ್ನ ಸದಸ್ಯ ಕೆ.ಎಂ. ಗಣೇಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರುಗಳಾಗಿ ಸವಿತಾ ರಾಕೇಶ್, ಅಂಬೆಕಲ್ ನವೀನ್ ಕುಶಾಲಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಬೊಳ್ಳಜಿರ ಅಯ್ಯಪ್ಪ, ಕಾರ್ಯದರ್ಶಿಗಳಾಗಿ ಎಂ.ಪಿ. ಕೃಷ್ಣರಾಜು, ಖಜಾಂಚಿಯಾಗಿ ಡಾಕ್ಟರ್ ಮೋಹನ್ ಅಪ್ಪಾಜಿ ಹಾಗೂ ತಿಮ್ಮಯ್ಯ ಅವರನ್ನು ಆರಿಸಲಾಯಿತು.

ಕಾರ್ಯಕಾರಿ ಮಂಡಳಿಗೆ ಹೆಚ್.ಹೆಚ್. ಮಂಜುನಾಥ್, ಹೆಚ್.ಎನ್. ನಂಜುAಡ, ಆಡಿಟರ್ ಸುಧೀರ್, ಎನ್.ಸಿ. ಸುನಿಲ್, ರಜಿ, ಜಗದೀಶ್, ಹೆಚ್.ಆರ್, ಶುಭ ವಿಶ್ವನಾಥ್, ವಿಶ್ವ, ಹೆಚ್.ಎಸ್. ಕುಶಾಲ್, ಬಾಲಕೃಷ್ಣ ನಾಯಕ್, ಅನಿಲ್ ಕೃಷ್ಣಾನಿ, ರಾಣಿ ಮಾಚಯ್ಯ, ಪ್ರಭು ರೈ, ಹರೀಶ್ ರೈ, ಸುಕುಮಾರ್, ಹೆಚ್.ಎಸ್. ಗೋಪಿನಾಥ್ ಅವರುಗಳನ್ನು ಆಯ್ಕೆ ಮಾಡಲಾಯಿತು. ಇದರೊಂದಿಗೆ ಉಪ ಸಮಿತಿಗಳ ಪದಾಧಿಕಾರಿ ಗಳನ್ನು ಆರಿಸಲಾಯಿತು. ಆಹಾರ ಸಮಿತಿ ಅಧ್ಯಕ್ಷರಾಗಿ ಹೆಚ್.ವಿ. ಸುಧಾಕರ್, ರಘು ಪೂವಯ್ಯ, ಮಂಡೀರ ದೇವಿ ಪೂಣಚ್ಚ, ಸ್ವಾಗತ ಸಮಿತಿ ಅಧ್ಯಕ್ಷರಾಗಿ ವಿನೋದ್ ಕುಮಾರ್, ಸುಶೀಲ, ಅಲಂಕಾರ ಸಮಿತಿಗೆ ರವೀಂದ್ರ ಹೆಚ್.ವಿ. ಮತ್ತು ತಂಡದವರು, ವೇದಿಕೆ ಸಮಿತಿಗೆ ಗುರುಪ್ರಸಾದ್ ಹಾಗೂ ಧನಂಜಯ್, ಮುಖ್ಯ ಸಲಹೆಗಾರರಾಗಿ ಟ್ರಸ್ಟ್ನ ಸಲಹೆಗಾರರಾದ ಜಿ. ರಾಜೇಂದ್ರ ಹಾಗೂ ಟ್ರಸ್ಟಿಗಳಾದ ಸಂಪತ್ ಕುಮಾರ್, ಸಾಂಸ್ಕೃತಿಕ ಸಮಿತಿಗೆ ಜ್ಯೋತಿ ಯುವಕ ಸಂಘದ ಸದಸ್ಯರುಗಳು, ಭಜನಾ ಸಮಿತಿಗೆ ಮಹೇಶ್‌ಕುಮಾರ್, ವಿಶಾಲಾಕ್ಷಿ ಹಾಗೂ ರಂಜಿತ, ವೈದಿಕ ಸಮಿತಿಗೆ ರಾಮ ಸೇವಾ ಸಮಿತಿ ಸದಸ್ಯರುಗಳು, ಮೆರವಣಿಗೆ ಸಮಿತಿಗೆ ಟ್ರಸ್ಟ್ ಸದಸ್ಯರುಗಳು ಆಯ್ಕೆಯಾಗಿದ್ದಾರೆ. ಇನ್ನು ಕೆಲವೊಂದು ಸಮಿತಿಗಳು ರಚಿಸಬೇಕಾಗಿದೆ ಎಂದು ಸಭೆಯಲ್ಲಿ ಗಣೇಶ್ ಮಾಹಿತಿಯಿತ್ತರು.